ಚಿಕನ್ ಪೀಸ್‌ನಲ್ಲಿ ಗಾಂಜಾ ಇಟ್ಟು ಜೈಲಿಗೆ ರವಾನೆ; ದಾಳಿ ವೇಳೆ ವಿಷಯ ಬಯಲು
ವಿಜಯಪುರ; ಜೈಲಿನಲ್ಲಿರುವ ಕೈದಿಗಳಿಗೆ ಊಟ ಪೂರೈಕೆ ಮಾಡುವ ನೆಪದಲ್ಲಿ ಚಿಕನ್ ಪೀಸ್‌ನಲ್ಲಿ ಗಾಂಜಾ ಅಡಗಿಸಿಡುತ್ತಿದ್ದದ್ದು ಬೆಳಕಿಗೆ ಬಂದಿದೆ. ವಿಜಯಪುರದ ದರ್ಗಾ ಜೈಲಿನಲ್ಲಿ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಚಿಕನ್ ಪೀಸ್‌ನಲ್ಲಿ ಗಾಂಜಾ ಅಡಗಿಸಿಟ್ಟಿದ್ದುದು ಪತ್ತೆಯಾಗಿದೆ.
ಈ ಸಂಬಂಧ ಪ್ರಜ್ವಲ್ ಲಕ್ಷ್ಮಣ ಮಾಬರುಖಾನೆ ಎಂಬಾತನ ವಿರುದ್ಧ ಕೇಸ್ ದಾಖಲಾಗಿದೆ. ಈತ ಶಾರುಖ್ಪಾನ್ ತೆಗರತಿಪ್ಪಿಗೆ ಎಂಬ ಕೈದಿಗೆ ಊಟ ರವಾನೆ ಮಾಡಿದ್ದ. ಈ ಊಟದಲ್ಲಿದ್ದ ಚಿಕನ್ ಪೀಸ್‌ನ ಒಳಗೆ ಗಾಂಜಾ ಅಡಗಿಸಿಡಲಾಗಿತ್ತು. ದೊಡ್ಡ ದೊಡ್ಡ ಚಿಕನ್ ಪೀಸ್‌ಗಳಲ್ಲಿ ತಲಾ ಎರಡು ಗ್ರಾಂನಂತೆ ಗಂಜಾ ಅಡಗಿಸಿಡಲಾಗಿತ್ತು. ಒಟ್ಟು 18 ಚಿಕೆನ್ ಪೀಸ್‌ಗಳಲ್ಲಿ 32 ಗ್ರಾಂ ಗಾಂಜಾ ಸಿಕ್ಕಿದೆ.