ತಲೆ ಕತ್ತರಿಸಿದರೂ ಒಂದೂವರೆ ವರ್ಷ ಬದುಕಿತ್ತು ಈ ಕೋಳಿ!
ಅಮೆರಿಕಾ; ತಲೆ ಇಲ್ಲದೆ ಯಾವ ಪ್ರಾಣಿಯೂ ಬದುಕೋದು ಕಷ್ಟ.. ತಲೆ ಕತ್ತರಿಸಿಬಿಟ್ಟರೆ ಕೆಲವೇ ಕ್ಷಣಗಳಲ್ಲಿ ಯಾವ ಪ್ರಾಣಿಯಾದರೂ ಸಾಯುತ್ತದೆ.. ಜಿರಳೆಯಂತಹ ಕೆಲವು ಕೀಟಗಳು ಒಂದಷ್ಟು ಗಂಟೆ ಬದುಕಿರಬಹುದು.. ಆದ್ರೆ ತಲೆಯೇ ಇಲ್ಲದೆ ವರ್ಷಗಟ್ಟಲೆ ಬದುಕೋದು ಅಸಾಧ್ಯದ ಮಾತು.. ಆದ್ರೆ, ಅಮೆರಿಕದಲ್ಲಿ ಕೋಳಿಯೊಂದು ತಲೆಯೇ ಇಲ್ಲದೆ ಒಂದೂವರೆ ವರ್ಷ ಬದುಕಿ ತೋರಿಸಿದೆ.. ಇದು ಅಚ್ಚರಿ ಅನಿಸಿದರೂ ನಿಜ..
ಹೌದು, ಮೆರಿಕದ ಕೊಲೊರಾಡೊದಲ್ಲಿ 79 ವರ್ಷಗಳ ಹಿಂದೆ ಇಂತಹದ್ದೊಂದು ಘಟನೆ ನಡೆದಿದೆ.. ಕೋಳಿ ಮಾಲೀಕ ತಿನ್ನಲೆಂದು ಕೋಳಿಯ ತಲೆ ಕತ್ತರಿಸಿದ್ದ.. ಅನಂತರವೂ ಅದು ಓಡಾಡಿದ್ದು ನೋಡಿ ಹಾಗೆಯೇ ಉಳಿಸಿಕೊಂಡಿದ್ದ.. ಅದು ಒಂದೂವರೆ ವರ್ಷ ಬದುಕಿತ್ತಂತೆ.. ಈಗ ಆ ಕೋಳಿಯ ಫೋಟೋಗಳು ಸಾಕಷ್ಟು ವೈರಲ್ ಆಗುತ್ತಿವೆ.. ಎಲ್ಲರೂ ಕೂಡಾ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.. ತಲೆಯೇ ಇಲ್ಲದೆ ಹೇಗೆ ಬದುಕುತ್ತದೆ ಎಂದೂ ಕೆಲವರು ಪ್ರಶ್ನಿಸುತ್ತಿದ್ದಾರೆ.. ಆದ್ರೆ, ಇದು ನಿಜ ಅನ್ನೋದಕ್ಕೆ ಸಾಕಷ್ಟು ಸಾಕ್ಷ್ಯಗಳಿವೆ..
1945 ಸೆಪ್ಟೆಂಬರ್ 18ರಂದು ಲಾಯ್ಡ್ ಓಸ್ಟೆನ್ ಎಂಬ ರೈತ ತಮ್ಮ ಮನೆಯಲ್ಲಿ ಪಾರ್ಟಿ ಇಟ್ಟುಕೊಂಡಿದ್ದ.. ಅವನದ್ದೇ ಕೋಳಿ ಫಾರಂ ಇದ್ದಿದ್ದರಿಂದ ಅದರಲ್ಲಿ ಒಂದೆರಡು ಕೋಳಿಗಳನ್ನು ತಂದು ಕತ್ತರಿಸಿದ್ದ.. ಹೀಗೆ ಕತ್ತರಸುವ ವೇಳೆ ಒಂದು ಕೋಳಿಯ ಕುತ್ತಿ ಕುಯ್ಯುವ ಬದಲು ತಲೆಯ ಅರ್ಧ ಭಾಗಕ್ಕೆ ಕುಯ್ದುಬಿಟ್ಟಿದ್ದಾನೆ.. ತಲೆ ಅರ್ಧ ಭಾಗ ಪೂರ್ತಿ ರೈತನ ಕೈಗೆ ಬಂದಿದ್ದರೂ, ಕೋಳಿ ಅಲ್ಲಿಂದ ಓಡಿದೆ.. ಅದನ್ನು ಹಿಡಿದು ತಂದ ರೈತನಿಗೆ ಇದು ಬದುಕುತ್ತಾ ನೋಡೋಣ ಎಂದೆಣಿಸಿದೆ.. ರಕ್ತ ಹೆಪ್ಪುಗಟ್ಟಿದ್ದರಿಂದ ರಕ್ತಸ್ರಾವ ಕೂಡಾ ಕಡಿಮೆಯಾಗಿದೆ.. ರೈತ ಅಂದುಕೊಂಡಂತೆ ಆ ಕೋಳಿ ಜೀವಿಸಲು ಶುರು ಮಾಡಿದೆ.. ಯಾಕಂದ್ರೆ ಕೋಳಿಯ ದೇಹದಲ್ಲೇ ಅರ್ಧ ಭಾಗದ ತಲೆ ಇದ್ದಿದ್ದರಿಂದ ಅದರಲ್ಲೇ ಕೋಳಿಯ ಮೆದುಳು, ಮುಖ್ಯ ನರಗಳು ಇದ್ದವು.. ಹೀಗಾಗಿ ಕೋಳಿಯ ಸಾವನ್ನಪ್ಪಿಲ್ಲ.. ಆದರೆ ತಲೆ ಮುಂಭಾಗ ಕಟ್ ಆಗಿರುವುದರಿಂದ ಏನನ್ನೂ ತಿನ್ನಲು ಆಗುತ್ತಿರಲಿಲ್ಲ.. ಹೀಗಾಗಿ, ರತನೇ ದಿನವೂ ಧ್ರವ ರೂಪದ ಆಹಾರವನ್ನು ಕೋಳಿಗೆ ನೀಡುತ್ತಿದ್ದ.. ಹೀಗಾಗಿ ಅದು ಸುಮಾರು 18 ತಿಂಗಳ ಕಾಲ ಬದುಕಿತ್ತು..
ತಲೆ ಇಲ್ಲದ ಕೋಳಿ ಇದ್ದಿದ್ದರಿಂದ ರೈತ ಲಾಯ್ಡ್ ಓಸ್ಟೆನ್ ಮನೆ ಜನರ ಆಕರ್ಷಣೆಯ ಕೇಂದ್ರವಾಯಿತು.. ಎಲ್ಲರೂ ಕೋಳಿ ನೋಡಲು ಬರಲಾರಂಭಿಸಿದರು.. ಹಲವಾರು ಪತ್ರಿಕೆಗಳಲ್ಲಿ ಈ ಬಗ್ಗೆ ಸುದ್ದಿ ಪ್ರಕಟವಾಯಿತು.. ನಂತರ ಪ್ರಾಣಿ ಪಕ್ಷಗಳ ಪ್ರದರ್ಶನಗಳಲ್ಲಿ ಈ ಕೋಳಿಯನ್ನು ಪ್ರದರ್ಶನಕ್ಕಿಡಲಾಯಿತು.. ಇದರಿಂದಾಗಿ ರೈತ ಸಾಕಷ್ಟು ಹಣ ಸಂಪಾದನೆ ಮಾಡಿದ.. ಈ ತಲೆಯಿಲ್ಲದ ಕೋಳಿಯಿಂದಾಗಿ ರೈತ ಆದಾಯ ಹೆಚ್ಚುತ್ತಲೇ ಹೋಯಿತು.. ಆ ಕಾಲದಲ್ಲೂ ಈ ಕೋಳಿಯ ಬೆಲೆ ಹತ್ತು ಸಾವಿರ ಡಾಲರ್ ಎಂದು ಅಂದಾಜಿಸಲಾಗಿದೆ.
ಆದ್ರೆ ಅಷ್ಟರಲ್ಲಾಗಲೇ ಕೋಳಿ ಆಯಸ್ಸು ಮುಗಿದತ್ತು.. ಮಾರ್ಚ್ 1947 ರಲ್ಲಿ ರೈತ ಲಾಯ್ಡ್ ಒಂದು ಪ್ರದರ್ಶನ ಮುಗಿಸಿ ಹೋಟೆಲ್‌ನಲ್ಲಿ ತಂಗಿದ್ದರು.. ಅಂದು ಜೊತೆಗಿದ್ದ ಕೋಳಿಗೆ ಉಸಿರುಗಟ್ಟಿದಂತೆ ಆಗುತ್ತಿತ್ತು.. ಇದನ್ನು ಗಮನಿಸಿದ ರೈತ ಅದನ್ನು ಎತ್ತಿಕೊಂಡು ನೋಡುತ್ತಾನೆ.. ಆಗ ಜೋಳವೊಂದು ಕೋಳಿಯ ಗಂಟಲಿನಲ್ಲಿ ಸಿಲುಕಿಕೊಂಡಿತ್ತು… ಇದರಿಂದಾಗಿ ಕೆಲವೇ ಸಮಯದಲ್ಲಿ ಆ ಕೋಳಿ ಮೃತಪಟ್ಟಿತ್ತು..