International

ಅವಿಶ್ವಾಸ ಗೊತ್ತುವಳಿ ತಿರಸ್ಕಾರ; ಜನರ ಮುಂದೆ ಹೋಗೋಣ ಎಂದ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌

ಇಸ್ಲಾಮಾಬಾದ್‌: ಪಾಕಿಸ್ತಾನದ ಉಪ ಸಬಾಪತಿಯವರು ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ವಿರುದ್ಧ ಅವಿಶ್ವಾಸ ಗೊತ್ತುವಳಿಯನ್ನು ತಿರಸ್ಕರಿಸಿದ್ದಾರೆ. ವಿರೋಧ ಪಕ್ಷಗಳ ಇಮ್ರಾನ್‌ ಖಾನ್‌ ವಿರುದ್ಧ ಅವಿಶ್ವಾಸ ಮಂಡಿಸಿದ್ದವು. ಸಭಾಪತಿ ಒಪ್ಪಿದ್ದರೆ, ಇಂದು ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ವಿಶ್ವಾಸ ಮಂಡನೆ ಮಾಡಬೇಕಿತ್ತು. ಆದ್ರೆ, ಇದಕ್ಕೆ ಅವಕಾಶ ಕೊಡದ ಉಪಸಭಾಪತಿ, ಅವಿಶ್ವಾಸ ಗೊತ್ತುವಳಿ ಅಸಾಂವಿಧಾನಿಕ, ಇದು ವಿದೇಶಿ ಶಕ್ತಿಗಳ ಪಿತೂರಿ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೆ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದಾರೆ.

ಅವಿಶ್ವಾಸ ಗೊತ್ತುವಳಿ ತಿರಸ್ಕರಿಸಿದ್ದರಿಂದ ಇಮ್ರಾನ್‌ ಖಾನ್‌ ಪಾಕಿಸ್ತಾನದ ಪ್ರಧಾನಿಯಾಗಿ ಮುಂದುವರಿಯುತ್ತಾರೆ. ಆದ್ರೆ ಇದಕ್ಕೆ ವಿರೋಧ ಪಕ್ಷಗಳ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರತಿಭಟನೆ ಮುಂದುವರೆಸಿವೆ. ಈ ನಡುವೆ ಪಾಕಿಸ್ತಾನವನ್ನುದ್ದೇಶಿಸಿ ಮಾತನಾಡಿರುವ ಇಮ್ರಾನ್‌ ಖಾನ್‌, ಶಾಸನ ಸಭೆಗಳನ್ನು ವಿಸರ್ಜಿಸುವಂತೆ ಕೋರಿ ರಾಷ್ಟ್ರಪತಿಗೆ ಪತ್ರ ಬರೆದಿದ್ದೇನೆ. ಪ್ರಜಾಪ್ರಭುತ್ವದ ರೀತಿ ಚುನಾವಣೆ ನಡೆಯಬೇಕು. ಪಾಕಿಸ್ತಾನದ ಜನರು ಚುನಾವಣೆಗೆ ಅಣಿಯಾಗುವಂತೆ ಕೋರುತ್ತೇನೆ ಎಂದು ಹೇಳಿದ್ದಾರೆ.

 

Share Post