CrimeDistricts

ಪಂಚಾಯಿತಿ ಕಚೇರಿಯಲ್ಲೇ ಸಿಬ್ಬಂದಿಯ ಕಿಸ್ಸಿಂಗ್; ಫೋಟೋಗಳು ವೈರಲ್

ಕೋಲಾರ; ಗ್ರಾಮ‌ ಪಂಚಾಯಿತಿ ಕಚೇರಿಯಲ್ಲೇ ಸಿಬ್ಬಂದಿಯ ಕಿಸ್ಸಿಂಗ್.. ಫೋಟೋಗಳನ್ನು ಎಲ್ಲೆಡಡ ವೈರಲ್.. ಇದು ನಡೆದಿರೋದು ಕೋಲಾರ ಜಿಲ್ಲೆ ಕೆಜಿಎಫ್ ತಾಲ್ಲೂಕಿನ ರಾಮಸಾಗರ ಗ್ರಾಮ ಪಂಚಾಯತ್ ಕಚೇರಿಯಲ್ಲಿ.. ಇಲ್ಲಿ ಕೆಲಸ ಮಾಡುವ ಬಿಲ್ ಕಲೆಕ್ಟರ್ ಅರ್ಜುನ್ ಹರಿಕೃಷ್ಣ ಎಂಬಾತ ಕಚೇರಿಯಲ್ಲೇ ಕೆಲಸ ಮಾಡುವ ಮಹಿಳೆ ಜೊತೆ ಕಾಮಚೇಷ್ಟೆ ಮಾಡಿದ್ದಾನೆ.. ಅದರ ಫೋಟೋಗಳು ಈಗ ವೈರಲ್ ಆಗಿವೆ.. ಇದೀಗ ಆ ಮಹಿಳೆ ಬಿಲ್ ಕಲೆಕ್ಟರ್ ನನ್ನ ಜೊತೆ ಬಲವಂತವಾಗಿ ಕಾಮಚೇಷ್ಟೆ ಮಾಡಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾಳೆ.

  ಖಾಸಗಿ ಫೋಟೋಗಳು ವೈರಲ್ ಆಗುತ್ತಿದ್ದಂತೆ ಬಿಲ್ ಕಲೆಕ್ಟರ್ ಅರ್ಜುನ್ ವಿರುದ್ಧ ಮಹಿಳೆ ಕೇಸ್ ದಾಖಲು ಮಾಡಿದ್ದಾಳೆ.. ಬಿಲ್ ಕಲೆಕ್ಟರ್ ಅರ್ಜುನ್ ಹರಿಕೃಷ್ಣ ಗ್ರಾಮ ಪಂಚಾಯಿತಿ ಕಚೇರಿಯ ಮೊದಲ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಉದ್ಯೋಗಿಯ ಬಳಿ ಹೋಗಿ ಕಾಮಚೇಷ್ಟೆ ಮಾಡಿದ್ದಾರಂತೆ. ಅದನ್ನು ವಿರೋಧ ಮಾಡಿದ್ದಕ್ಕೆ ನಿನ್ನ ಗಂಡನಿಗೆ ಜಲಗಾರ ಕೆಲಸ ಕೊಡಿಸುತ್ತೇನೆ. ಜೊತೆಗೆ, ನಿಮಗೆ ವಾಸಕ್ಕೆಂದು ಪಂಚಾಯಿತಿಯಿಂದ ಉಚಿತ ಸರ್ಕಾರಿ ಮನೆ ಕಟ್ಟಿಸಿಕೊಡುತ್ತೇನೆ ಎಂದು ಆಮಿಷ ಒಡ್ಡಿದ್ದ. ಈ ಕಾರಣಕ್ಕಾಗಿ ಬಲವಂತದಿಂದ ಆತನ ಜೊತೆ ಹಾಗೆ ಮಾಡಬೇಕಾಯಿತು ಎಂದು‌ ಮಹಿಳೆ ದೂರು ನೀಡಿದ್ದಾಳೆ. ಬೇತಮಂಗಲ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Share Post