CrimeDistricts

ಕೋಲಾರದಲ್ಲಿ ಸಾಲ ತೀರಿಸಲು ಗಂಡು ಮಗುವನ್ನೇ ಮಾರಿದ ತಂದೆ!

ಕೋಲಾರ; ಮಾಡಿದ್ದ ಸಾಲ ತೀರಿಸಲು ಸಾಧ್ಯವಾಗದೇ ಪಾಪಿ ತಂದೆಯೊಬ್ಬ ತನ್ನ ಗಂಡು ಮಗುವನ್ನೇ ಮಾರಾಟ ಮಾಡಿರುವ ಘಟನೆ ನಡೆದಿದೆ.. ಕೋಲಾರ ಜಿಲ್ಲೆ ಬಂಗಾರಪೇಟೆಯಲ್ಲಿ ಈ ಘಟನೆ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ..

ಬಂಗಾರಪೇಟೆ ನಿವಾಸಿ ಮುನಿರಾಜು ಹಾಗೂ ಪವಿತ್ರ ದಂಪತಿಯ ಮೂರು ತಿಂಗಳು ಗಂಡು ಮಗುವನ್ನು ಮಾರಾಟ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.. ಮುನಿರಾಜು ಸಾಲ ಮಾಡಿಕೊಂಡಿದ್ದು, ಅದನ್ನು ತೀರಿಸಲು ಸಾಧ್ಯವಾಗುತ್ತಿರಲಿಲ್ಲ.. ಹೀಗಾಗಿ 3 ತಿಂಗಳ ಮಗುವನ್ನು ಮಾರಿ ಸಾಲ ತೀರಿಸಿದ್ದಾರೆ ಎಂದು ಆರೋಪಿಸಲಾಗಿದೆ.. ಕೆರೆಕೋಡಿ ನಿವಾಸಿ ವಲ್ಲಿ ಎಂಬಾಕೆ ಮೂಲಕ ಮಗುವನ್ನು ಮಾರಾಟ ಮಾಡಲಾಗಿದೆ ಎಂದು ಆರೋಪಿಸಲಾಗಿದೆ..

ಮಗುವನ್ನು ಮಾರಾಟ ಮಾಡಿದ ವಿಷಯ ತಿಳಿದ ಮಗುವಿನ ತಾಯಿ ಪವಿತ್ರ ಪೊಲೀಸರಿಗೆ ದೂರು ನೀಡಿದ್ದಾಳೆ..  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಆಯೋಗ ಹಾಗೂ ಬಂಗಾರಪೇಟೆ ಪೊಲೀಸ್ ಠಾಣೆಗೆ ಪತ್ನಿ ಪವಿತ್ರ ದೂರು ನೀಡಿದ್ದು, ಮಗುವನ್ನು ವಾಪಸ್‌ ಕೊಡಿಸುವಂತೆ ಮನವಿ ಮಾಡಿಕೊಂಡಿದ್ದಾಳೆ.. ಮಗು ಅಪಹರಣ ಮಾಡಿದ್ದಾರೆಂದು ಪತಿ ಮುನಿರಾಜು ಹಾಗೂ ವಲ್ಲಿ ವಿರುದ್ದ ದೂರು ನೀಡಲಾಗಿದೆ..

 

Share Post