CrimeNational

ಗೋದಾಮು ಕುಸಿದುಬಿದ್ದು ಐದು ಮಂದಿ ದುರ್ಮರಣ; ರಕ್ಷಣಾ ಕಾರ್ಯಾಚರಣೆ ತೀವ್ರ

ನವದೆಹಲಿ; ನಿರ್ಮಾಣ ಹಂತದಲ್ಲಿದ್ದ ಗೋಡೌನ್‌ ಕುಸಿದುಬಿದ್ದು ಐವರು ಕಾರ್ಮಿಕರು ಸಾವನ್ನಪ್ಪಿರುವ ದಾರುಣ ಘಟನೆ ನವದೆಹಲಿಯ ಅಲಿಪುರ್‌ ಪ್ರದೇಶದಲ್ಲಿ ನಡೆದಿದೆ. ಕಟ್ಟಡ ನಿರ್ಮಿಸುವ ವೇಳೆ ದಿಢೀರ್‌ ಅಂತ ಅದು ಕುಸಿದುಬಿದ್ದಿದೆ. ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ, ಅವಶೇಷಗಳನ್ನು ತೆರವುಗೊಳಿಸುತ್ತಿದ್ದಾರೆ. ಅವಶೇಷಗಳಡಿ ಸಿಲುಕಿದ್ದ 15 ಮಂದಿಯನ್ನು ರಕ್ಷಣೆ ಮಾಡಲಾಗಿದೆ.

ಇನ್ನೂ ಹಲವರು ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.

 

 

 

Share Post