CrimeNational

ತಾಯಿ, ಪತ್ನಿ, ಮೂವರು ಮಕ್ಕಳನ್ನು ದಾರುಣವಾಗಿ ಕೊಂದ ಪಾಪಿ!

ಲಖನೌ; ವ್ಯಕ್ತಿಯೊಬ್ಬ ಹೆತ್ತ ತಾಯಿಯನ್ನು ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ.. ಅನಂತರ ಸುತ್ತಿಗೆಯಿಂದ ಚಚ್ಚಿ ಚಚ್ಚಿ ಪತ್ನಿಯನ್ನು ಹತ್ಯೆಗೈದಿದ್ದಾನೆ.. ಕೊನೆಗೆ ತನ್ನ ಮೂವರು ಮಕ್ಕಳನ್ನು ಟೆರೇಸ್‌ ಮೇಲಿಂದ ಎಸೆದು ದಾರುಣವಾಗಿ ಕೊಂದಿದ್ದಾನೆ.. ನಂತರ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.. ಅಲ್ಲಿಗೆ ಒಂದೇ ಕುಟುಂಬದ ಆರು ಮಂದಿ ಪ್ರಾಣ ಹಾರಿಹೋಗಿದೆ.. ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ಇಡೀ ಕುಟುಂಬವನ್ನು ಆಹುತಿ ತೆಗೆದುಕೊಂಡಿದೆ..

ಉತ್ತರ ಪ್ರದೇಶದ ಮಥುರಾ ಪೊಲೀಸ್‌ ಠಾಣಾ ವ್ಯಾಪ್ತಿಯ ಸೀತಾಪುರದಲ್ಲಿ ಈ ದುರಂತ ನಡೆದಿದೆ.. ಅನುರಾಗ್‌ ಸಿಂಗ್‌ ಎಂಬಾತನೇ ಈ ಕೃತ್ಯ ಎಸಗಿದಾತ.. ತಾಯಿ ಸಾವಿತ್ರಿ ದೇವಿ (62), ಪತ್ನಿ ವೀರೇಂದ್ರ ಸಿಂಗ್ (40), ಪುತ್ರಿ ಅಶ್ವಿ (12), ಪುತ್ರಿ ಅರ್ನಿ (8) ಹಾಗೂ ಅದ್ವಿಕ್ (4) ಕೊಲೆಯಾದವರು..

ಆರೋಪಿ ಅನುರಾಗ್‌ ಸಿಂಗ್‌ ಮದ್ಯವ್ಯಸನಿಯಾಗಿದ್ದನಂತೆ.. ದಿನವೂ ಕುಡಿದುಬಂದು ಗಲಾಟೆ ಮಾಡುತ್ತಿದ್ದನಂತೆ.. ಜೊತೆಗೆ ಮಾನಸಿಕ ಅಸ್ವಸ್ಥನಾಗಿದ್ದನಂತೆ.. ನಿನ್ನೆಯೂ ಜಗಳ ಮಾಡಿರುವ ಆರೋಪಿ, ಎಲ್ಲರನ್ನೂ ಕೊಂದು ಪೈಶಾಚಿಕ ಕೃತ್ಯ ಮೆರೆದಿದ್ದಾನೆ..

 

Share Post