ವಿದ್ಯಾರ್ಥಿನಿ ರುಂಡ ಕತ್ತರಿಸಿದ್ದ ಆರೋಪಿ ಕೊನೆಗೂ ಅರೆಸ್ಟ್; ರುಂಡ ಏನಾಯ್ತು..?
ಮಡಿಕೇರಿ; ಕೊಡಗಿನಲ್ಲಿ ಮೊನ್ನೆ ಪಾಗಲ್ ಪ್ರೇಮಿಯೊಬ್ಬ ಅಪ್ರಾಪ್ತ ಬಾಲಕಿಯ ರುಂಡ ಕತ್ತರಿಸಿ, ರುಂಡದೊಂದಿಗೆ ಪರಾರಿಯಾಗಿದ್ದ.. ಇದೀಗ ಆತ ಸಿಕ್ಕಿಬಿದ್ದಿದ್ದಾನೆ.. ಸೋಮವಾರಪೇಟೆ ತಾಲ್ಲೂಕಿನ ಗ್ರಾಮವೊಂದರಲ್ಲಿ ಆರೋಪಿ ಪ್ರಕಾಶ್ ಅಡಗಿ ಕುಳಿತಿದ್ದ ಎಂದು ತಿಳಿದುಬಂದಿದೆ.. ಸೋಮವಾರ ಪೇಟೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ..
ಸೂರ್ಲಬ್ಬಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿದ್ದ ಮೀನಾ ಎಂಬಾಕೆಯನ್ನು ಪ್ರಕಾಶ್ ಪ್ರೀತಿ ಮಾಡುತ್ತಿದ್ದ.. ಎಸ್‌ಎಸ್‌ಎಲ್‌ಸಿ ಪಾಸಾದ ಖುಷಿಯಲ್ಲಿದ್ದ ಮೀನಾಗೆ ಆವತ್ತೆ ಎಂಗೇಜ್‌ಮೆಂಟ್ ಕೂಡಾ ಇತ್ತು.. ಎರಡೂ ಮನೆಯವರು ಒಪ್ಪಿಯೇ ಪ್ರಕಾಶ್ ಜೊತೆ ಎಂಗೇಜ್‌ಮೆಂಟ್ ಫಿಕ್ಸ್ ಮಾಡಿದ್ದರು.. ಆದ್ರೆ ಇದು ಪೊಲೀಸರಿಗೆ ಗೊತ್ತಾಗಿ ಅಪ್ರಾಪ್ತ ಬಾಲಕಿಗೆ ಎಂಗೇಜ್‌ಮೆಂಟ್ ಮಾಡುವುದನ್ನು ತಡೆದಿದ್ದರು.. ಇದರಿಂದ ಆಕ್ರೋಶಗೊಂಡ ಪ್ರಕಾಶ್, ಅಂದು ಸಂಜೆ ಮೀನಾಳನ್ನು ಕರೆದೊಯ್ದು ಕತ್ತು ಕತ್ತರಿಸಿದ್ದ. ನಂತರ ತಲೆಯೊಂದಿಗೆ ಪರಾರಿಯಾಗಿದ್ದ.
ನಿನ್ನೆ ಸಂಜೆ ಪ್ರಕಾಶ್ ಕೂಡಾ ಆತ್ಮಹತ್ಯೆ ಮಾಡಿಕೊಂಡಿದ್ಧಾನೆ ಎಂಬ ಸುದ್ದಿ ಹಬ್ಬಿತ್ತು.. ಆದ್ರೆ ನಂತರ ಗೊತ್ತಾಗಿದ್ದೇನೆಂದರೆ ಪ್ರಕಾಶ್ ತಲೆಮರೆಸಿಕೊಂಡಿದ್ದಾನೆ, ಇನ್ನೂ ಬದುಕಿದ್ದಾನೆ ಅನ್ನೋದು.. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ..