CrimeDistricts

ಕೇಂದ್ರ ಗುಪ್ತಚರ ಇಲಾಖೆ ಮಾಜಿ ಅಧಿಕಾರಿ ಕೊಲೆ ಪ್ರಕರಣ; ನೆರೆ ಮನೆಯವರ ಮೇಲೆ ಅನುಮಾನ

ಮೈಸೂರು; ಮಾನಸಗಂಗೋತ್ರಿ ಆವರಣದಲ್ಲಿ ಮೂರು ದಿನಗಳ ವಾಹನ ಹರಿಸಿ ಕೇಂದ್ರ ಗುಪ್ತಚರ ಇಲಾಖೆಯ ನಿವೃತ್ತ ಅಧಿಕಾರಿ ಆರ್.ಎನ್.ಕುಲಕರ್ಣಿ (82) ಅವರನ್ನು ಕೊಲೆ ಮಾಡಲಾಗಿತ್ತು. ಈ ಕೃತ್ಯದ ಹಿಂದೆ ನೆರೆಮನೆಯವರ ಕೈವಾಡ ಇರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಕುಲಕರ್ಣಿಯವರ ಅಳಿಯ ದೂರು ನೀಡಿದ್ದು, ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಆರ್‌.ಕೆ.ಕುಲಕರ್ಣಿ ನಿವಾಸದ ದಕ್ಷಿಣ ಭಾಗದಲ್ಲಿ ಮಾದಪ್ಪ ಎಂಬುವವರು ಮನೆ ಕಟ್ಟುವ ಸಂದರ್ಭದಲ್ಲಿ ಜಾಗ ಬಿಟ್ಟಿರಲಿಲ್ಲ. ಪಾಲಿಕೆ ಕಾನೂನಿಗೆ ವಿರುದ್ಧವಾಗಿ ಕಾಮಗಾರಿ ಶುರು ಮಾಡಿದ್ದರು. ಈ ವೇಳೆ, ಜಾಗ ಬಿಡುವಂತೆ ನಿವೃತ್ತ ಕುಲಕರ್ಣಿ ಆಗ್ರಹಿಸಿದ್ದರಂತೆ, ಅಷ್ಟೇ ಅಲ್ಲದೆ ಕೋರ್ಟ್‌ನಿಂದ ತಡೆಯಾಜ್ಞೆಯನ್ನೂ ತಂದಿದ್ದರು. ಈ ಕಾರಣಕ್ಕಾಗಿಯೇ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.

ಕಾನೂನು ಬಾಹಿರವಾಗಿ ಮನೆ ಕಟ್ಟಲಾಗಿದ್ದು, ಅದನ್ನು ತೆರವುಗೊಳಿಸಬೇಕು ಎಂದು ನವೆಂಬರ್‌ 2ರಂದು ಪಾಲಿಕೆ ಅಧಿಕಾರಿಗಳು ಮಾದಪ್ಪಗೆ ಸೂಚನೆ ನೀಡಿದ್ದರು. ಈ ನಡುವೆ ಅಮೆರಿಕದಲ್ಲಿದ್ದ ಮಗಳು, ಅಳಿಯನಿಗೆ ಕರೆ ಮಾಡಿದ್ದ ಕುಲಕರ್ಣಿಯವರು, ಮಾದಪ್ಪ ಮತ್ತು ಸಹಚರರು ನನ್ನನ್ನು ಹಿಂಬಾಲಿಸುತ್ತಿದ್ದಾರೆ ಎಂದು ಹೇಳಿದ್ದರಂತೆ. ಈ ಬಗ್ಗೆ ಅವರು ಪೊಲೀಸರಿಗೂ ದೂರು ನೀಡಿದ್ದರಂತೆ. ಹೀಗಿರುವಾಗಲೇ ಕೊಲೆಯಾಗಿದೆ ಎಂದು ತಿಳಿದುಬಂದಿದೆ.

Share Post