ಆಸ್ಟ್ರೇಲಿಯಾದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಯ ಬರ್ಬರ ಹತ್ಯೆ
ನವದೆಹಲಿ; ವಿದೇಶಗಳಲ್ಲಿ ಭಾರತೀಯ ಮೂಲದವರ ಹತ್ಯೆಗಳು ಹೆಚ್ಚಾಗುತ್ತಿವೆ.. ಇತ್ತೀಚೆಗೆ ಅಮೆರಿಕದ ಕೆಲವು ಕಡೆ ಭಾರತೀಯ ವಿದ್ಯಾರ್ಥಿಗಳ ಹತ್ಯೆ ನಡೆದಿತ್ತು.. ಇದೀಗ ಆಸ್ಟ್ರೇಲಿಯಾದ ಮೆಲ್ಬೋರ್ನ್ನಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬನನ್ನು ಚಾಕುವಿನಿಂದ ಇರಿದು ಕೊಲ್ಲಲಾಗಿದೆ..
ಹರಿಯಾಣದ ಕರ್ನಾಲ್ ಮೂಲದ ವಿದ್ಯಾರ್ಥಿಯೇ ಕೊಲೆಯಾದವನು.. ಈತ ಆಸ್ಟ್ರೇಲಿಯಾದಲ್ಲಿ ಎಂಟೆಕ್ ಪದವಿ ಓದುತ್ತಿದ್ದ ಎಂದು ತಿಳಿದುಬಂದಿದೆ.. ಕರ್ನಾಲ್ ನ ಬಸ್ತಾರಾ ಗ್ರಾಮದವರೇ ಆದ ಸಹೋದರರಾದ ಅಭಿಜಿತ್ ಹಾಗೂ ರಾಬಿನ್ ಗಾರ್ಟನ್ ಎಂಬಿಬ್ಬರನ್ನು ನ್ಯೂ ಸೌತ್ ವೇಲ್ಸ್ನಲ್ಲಿ ಬಂಧಿಸಲಾಗಿದೆ..
ಮೆಲ್ಬೋರ್ನ್ನ ಆಗ್ನೇಯದಲ್ಲಿರುವ ಓರ್ಮಂಡ್ ಮನೆಯಲ್ಲಿ 22 ವರ್ಷದ ನವಜೀತ್ ಸಂಧು ಮತ್ತು 30 ವರ್ಷದ ಶರ್ವನ್ ಕುಮಾರ್ ವಾಸವಿದ್ದು, ಕಾಲೇಜಿಗೆ ಹೋಗುತ್ತಿದ್ದರು.. ಅವರ ಮೇಲೆ ದಾಳಿ ಮಾಡಿದ ಆರೋಪಿಗಳು ನಾಪತ್ತೆಯಾಗಿದ್ದರು.. ಇದರಲ್ಲಿ ನವಜೀತ್ ಸಂಧು ಸಾವನ್ನಪ್ಪಿದ್ದರೆ, ಶರ್ವನ್ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ..