CrimeNational

ಎಷ್ಟು ದಿನ ಆದ್ರೂ ಮೊದಲ ರಾತ್ರಿಗೆ ಒಪ್ಪದ ವಧು; ಬಯಲಾಯ್ತು ಅಸಲಿ ಸತ್ಯ!

ಮದುವೆಯಾಗಿ ಹಲವಾರು ದಿನಗಳಾಗಿದ್ದು, ಮೊದಲ ರಾತ್ರಿಗೆ ಮುಹೂರ್ತಗಳೂ ಚೆನ್ನಾಗಿದ್ದವು.. ಆದ್ರೆ ವಧು ಮಾತ್ರ ಮೊದಲ ರಾತ್ರಿಗೆ ರೆಡಿ ಇರಲಿಲ್ಲ.. ದೇವರ ಹರಕೆಯಲ್ಲಿದ್ದೀನಿ, ಉಪವಾಸ ಇದ್ದೇನೆ, ಆರೋಗ್ಯ ಸರಿ ಇಲ್ಲ ಹೀಗೆ ಹಲವು ಸಬೂಬುಗಳನ್ನು ಆಕೆ ಹೇಳುತ್ತಾ ಬಂದಿದ್ದಳು.. ಕೊನೆಗೂ ಆಕೆಯ ನಿಜವಾದ ಬಣ್ಣ ಬಯಲಾಗಿದೆ.. ಅಸಲಿ ಸತ್ಯದ ಗೊತ್ತಾದ ಮೇಲೆ ನವವರನಿಗೆ ಆಕಾಶವೇ ತಲೆ ಮೇಲೆ ಬಿದ್ದಂತಾಗಿದೆ..

ಈ ಘಟನೆ ನಡೆದಿರೋದು ಆಗ್ರಾದಲ್ಲಿ.. ವ್ಯಕ್ತಿಯೊಬ್ಬ ಮನೆಯವರು ನೋಡಿದ ಯುವತಿಯನ್ನು ಮದುವೆಯಾಗಿದ್ದ.. ಆಕೆ ಕೂಡಾ ಈ ಮದುವೆಗೆ ಒಪ್ಪಿಗೆ ಕೊಟ್ಟೇ ಮದುವೆ ನಡೆದಿತ್ತು.. ಅವರ ಸ್ಟೇಟಸ್‌ಗೆ ತಕ್ಕಂತೆ ಚೆನ್ನಾಗಿಯೇ ಮದುವೆ ನಡೆದಿತ್ತು.. ಮದುವೆ ಸಮಯದಲ್ಲಿ ಖುಷಿ ಖುಷಿಯಾಗೇ  ಇದ್ದ ವಧು, ಮದುವೆಯ ನಂತರ ಹೇಗೇಗೋ ಆಡಲು ಶುರು ಮಾಡಿದ್ದಳು.. ಮೊದಲ ರಾತ್ರಿ ಅಂದ್ರೆ ಸಾಕು ಹಿಂದೆ ಸರಿಯುತ್ತಿದ್ದರು.. ನಾನಾ ಕಾರಣ ನೀಡಿ ತಪ್ಪಿಸಿಕೊಳ್ಳುತ್ತಿದ್ದಳು..

ಕೊನೆಗೆ ಒಂದು ದಿನ ಈಕೆ ಏನೋ ನಾಟಕ ಆಡುತ್ತಿದ್ದಾಳೆ ಅನ್ನೋದು ವರನಿಗೆ ಅರ್ಥವಾಗಿತ್ತು.. ಪರಿಶೀಲನೆ ಮಾಡಿದಾಗ, ಆಕೆ ಮದುವೆಗೆ ಮೊದಲೇ ಬೇರೊಬ್ಬನ ಜೊತೆ ಸಂಪರ್ಕದಲ್ಲಿದ್ದಳು.. ಆತನೊಂದಿಗೆ ದೈಹಿಕ ಸಂಬಂಧ ಕೂಡಾ ಬೆಳೆಸಿದ್ದಳು.. ಹೀಗಾಗಿ ಮದುವೆಯಾದ ಗಂಡನ ಜೊತೆ ಹಾಸಿಗೆ ಹಂಚಿಕೊಳ್ಳಲಾಗದೆ ಆಕೆ ನಾಟಕ ಶುರು ಮಾಡಿದ್ದಳು.. ಈ ವಿಚಾರ ಗೊತ್ತಾಗುತ್ತಿದ್ದಂತೆ ನವ ವರ ಕಂಗಾಲಾಗಿದ್ದಾರೆ.. ವಧುವಿನ ವಿರುದ್ಧ ಈಗ ಫತೇಹಾಬಾದ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ…

 

Share Post