ಹುಡುಗಿಯೊಂದಿಗೆ ಓಡಿ ಹೋದ ಮಗ; ತಾಯಿಗೆ ಕಂಬಕ್ಕೆ ಕಟ್ಟಿ ಥಳಿತ
ಹಾವೇರಿ; ಬೆಳಗಾವಿ ಬಳಿಯ ಹಳ್ಳಿಯೊಂದರಲ್ಲಿ ಮೂರು ನಾಲ್ಕು ತಿಂಗಳ ಹಿಂದೆ ಮಹಿಳೆಯೊಬ್ಬರನ್ನು ಬೆತ್ತಲೆಮಾಡಿ ಮೆರವಣಿಗೆ ಮಾಡಲಾಗಿತ್ತು. ಇದಕ್ಕೆ ಕಾರಣ ಆಕೆಯ ಮಗ ಹುಡುಗಿಯೊಂದಿಗೆ ಪರಾರಿಯಾಗಿದ್ದಾನೆ ಅನ್ನೋದು.. ಇದೀಗ ಇಂತಹದ್ದೇ ಒಂದು ಘಟನೆ ಹಾವೇರಿಯಲ್ಲಿ ನಡೆದಿದೆ.
ಹಾವೇರಿ ಜಿಲ್ಲೆ ರಾಣೆಬೆನ್ನೂರ ತಾಲೂಕಿನ ಅರೇಮಲ್ಲಾಪುರ ಗ್ರಾಮದಲ್ಲಿ ಮಹಿಳೆಯೊಬ್ಬರನ್ನು ಕಂಬಕ್ಕೆ ಕಟ್ಟಿ ಥಳಿಸಲಾಗಿದೆ.. 50 ವರ್ಷದ ಹನುಮವ್ವ ಮೇಡ್ಲೇರಿ ಎಂಬ ಮಹಿಳೆ ಮೇಲೆ ಹಲ್ಲೆ ಮಾಡಲಾಗಿದ್ದು, ಇದರ ವಿಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ..
ಹನುಮವ್ವ ಮೇಡ್ಲೇರಿ ಅವರ ಪುತ್ರ, ಅದೇ ಗ್ರಾಮದ ಯುವತಿಯೊಂದಿಗೆ ಓಡಿ ಹೋಗಿದ್ದಾನೆ.. ಹೀಗಾಗಿ ಆತನ ತಾಯಿಯ ಮೇಲೆ ಯುವತಿಯ ಕಡೆಯವರು ಸೇಡು ತೀರಿಸಿಕೊಂಡಿದ್ದಾರೆ..