NationalPolitics

ಶಿವಸೇನೆ ಉಪ ನಾಯಕಿಯ ಹೆಲಿಕಾಪ್ಟರ್ ಪತನ

ಪುಣೆ; ಶಿವಸೇನೆ ಉಪನಾಯಕಿ ಸುಷ್ಮಾ ಅಂಧಾರೆ ಅವರ ಹೆಲಿಕಾಪ್ಟರ್ ಪತನಗೊಂಡಿದೆ.. ಸುಷ್ಮಾ ಅವರನ್ನು ಕರೆದುಕೊಂಡು ಹೋಗಲು ಹೆಲಿಕಾಪ್ಟರ್ ಬಂದಿದ್ದು, ಲ್ಯಾಂಡಿಂಗ್ ವೇಳೆ ಕೆಳಗೆ ಬಿದ್ದಿದೆ.. ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ..

  ಮಹಾರಾಷ್ಟ್ರದ ಮಹಾದ್ ನಲ್ಲಿ ಈ ದುರ್ಘಟನೆ ನಡೆದಿದೆ. ಶಿವಸೇನೆ ಉಪ ನಾಯಕಿ ಸುಷ್ಮಾ ಅಂಧಾರೆ ಅವರು ಹೆಲಿಕಾಪ್ಟರ್ ಹತ್ತುವ ಮುನ್ನವೇ ಪತನಗೊಂಡಿದೆ.. ಇದರಿಂದಾಗಿ ಸುಷ್ಮಾ ಅವರು ಅವಘಡದಿಂದ ತಪ್ಪಿಸಿಕೊಂಡಿದ್ದಾರೆ.

    ಇಂದು ಬೆಳಗ್ಗೆ 9.30ಕ್ಕೆ ಸುಷ್ಮಾ ಅಂಧಾರೆ ಅವರು ಬಾರಾಮತಿಗೆ ತೆರಳಬೇಕಿತ್ತು. ಬಾರಾಮತಿಯಲ್ಲಿ ಆಯೋಜಿಸಲಾಗಿದ್ದ ಮಹಿಳಾ ಸಮಾವೇಶದಲ್ಲಿ ಪಾಲ್ಗೊಳ್ಳಲು ಮಹಾಡ್‌ನಿಂದ ಬಾರಾಮತಿಗೆ ತೆರಳಲು ಸಿದ್ಧತೆ ನಡೆಸಿದ್ದರು..

 

Share Post