ಮಗನನ್ನು ಕೊಲ್ಲಲು ತಂದೆಯಿಂದ 75 ಲಕ್ಷಕ್ಕೆ ಸುಪಾರಿ; ಗುಂಡಿನ ದಾಳಿಯಲ್ಲಿ ಗ್ರೇಟ್ ಎಸ್ಕೇಪ್!
ಪುಣೆ; ಹೆತ್ತ ಮಗನನ್ನೇ ಕೊಲ್ಲಲು ತಂದೆಯೊಬ್ಬ 75 ಲಕ್ಷ ರೂಪಾಯಿಗೆ ಸುಪಾರಿ ಕೊಟ್ಟಿದ್ದ ವಿಷಯ ಈಗ ಬಯಲಾಗಿದೆ.. ಈ ಸಂಬಂಧ ಮಹಾರಾಷ್ಟ್ರದ ಪುಣೆ ಪೊಲೀಸರು ವ್ಯಕಿಯೊಬ್ಬರನ್ನು ಬಂಧಿಸಿದ್ದು, ಆತನ ನೀಡಿದ ಮಾಹಿತಿ ಆಧಾರದ ಮೇಲೆ ಇತರ ಆರು ಮಂದಿಯನ್ನು ಅರೆಸ್ಟ್ ಮಾಡಲಾಗಿದೆ..
ಇದನ್ನೂ ಓದಿ; ಭಾರೀ ಪ್ರಮಾಣದ ಮಾನವ ಕಳ್ಳಸಾಗಣೆ; ಅಧಿಕಾರಿಗಳಿಂದ 95 ಮಕ್ಕಳ ರಕ್ಷಣೆ..!
ದಿನೇಶ್ ಅಗ್ರಡೆ ಎಂಬಾತನೇ ಸ್ವಂತ ಮಗನ ಕೊಲೆಗೆ ಸುಪಾರಿ ಕೊಟ್ಟ ವ್ಯಕ್ತಿ.. ದಿನೇಶ್ ಅಗ್ರಡೆ ಪುಣೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮವನ್ನು ನಡೆಸುತ್ತಾರೆ.. ಇವರಿಗೆ ಆಸ್ತಿ ವಿಚಾರದಲ್ಲಿ ಮಗನೊಂದಿಗೆ ಜಗಳವಾಗಿತ್ತು.. ತನ್ನ ಬ್ಯುಸಿನೆಸ್‌ಗೆ ಮಗ ಅಡ್ಡಿಯಾಗುತ್ತಿದ್ದಾನೆ ಎಂದು ತಂದೆ ಕುಪಿತಗೊಂಡಿದ್ದ.. ಹೀಗಾಗಿ ಮಗ ಧೀರಜ್ ಅಗ್ರಡೆ ಕೊಲೆಗೆ ತಂದೆ ದಿನೇಶ್ ಅಗ್ರಡೆ ಸುಪಾರಿ ಕೊಟ್ಟಿದ್ದ.
ಇದನ್ನೂ ಓದಿ; ಸಿಗರೇಟ್ ಕೊಡಲಿಲ್ಲ ಅಂತ ಇಬ್ಬರು ಯುವಕರ ಕೊಲೆ..!
ಏಪ್ರಿಲ್ 16ರಂದು ಮಧ್ಯಾಹ್ನ 3.30ಕ್ಕೆ ಸರಿಯಾಗಿ ಬೈಕ್‌ನಲ್ಲಿ ಇಬ್ಬರು ವ್ಯಕ್ತಿಗಳ ಬಂದಿದ್ದು, ಧೀರಜ್ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ.. ಆದ್ರೆ ಧೀರಜ್ ಪವಾಡ ಸದೃಶ ರೀತಿಯಲ್ಲಿ ಅಲ್ಲಿಂದ ಪಾರಾಗಿದ್ದರು.. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಧೀರಜ್ ಪೊಲೀಸರಿಗೆ ದೂರು ನೀಡಿದ್ದರು..
ಇದನ್ನೂ ಓದಿ; ಟೈರ್ ಬ್ಲಾಸ್ಟ್ ಆಗಿ ಕಾರು ಪಲ್ಟಿ; ಇಬ್ಬರ ದುರ್ಮರಣ, 7 ಮಂದಿಗೆ ಗಾಯ!
ಪೊಲೀಸರು ತನಿಖೆ ನಡೆಸಿದಾಗ, ಧೀರಜ್ ತಂದೆಯೇ ಕೊಲೆಗೆ ಸುಪಾರಿ ಕೊಟ್ಟಿದ್ದರು ಅನ್ನೋದು ಬಯಲಾಗಿದೆ.. ಸುಪಾರಿ ಪಡೆದುಕೊಂಡಿದ್ದ ಆರೋಪಿಗಳಾದ ಪ್ರಶಾಂತ್, ಅಶೋಕ್, ಪ್ರವೀಣ್, ಯೋಗೇಶ್ ಜಾಧವ್ ಹಾಗೂ ಚೇತನ್ ಎಂಬುವವರನ್ನು ಪೊಲೀಸರು ಬಂಧಿಸಲಾಗಿದ್ದಾರೆ.. ಜೊತೆಗೆ ಧೀರಜ್ ತಂದೆಯನ್ನೂ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ..