ಬೇಸಿಗೆಯಲ್ಲಿ ಶೃಂಗಾರ ಬಯಕೆಗಳು ಹೆಚ್ಚಾಗಲು ಕಾರಣಗಳೇನು..?
ಶೃಂಗಾರದ ಬಯಕೆಗಳು, ಸಂಗಾತಿಯ ಜೊತೆ ಸೇರಲು ಬಯಸುವುದು ಆರೋಗ್ಯಕರ ದೇಹದ ಲಕ್ಷಣಗಳು.. ಅದ್ರಲ್ಲೂ ಬೇಸಿಗೆಯಲ್ಲಿ ಈ ಶೃಂಗಾರ ಬಯಕೆಗಳನ್ನು ಮತ್ತಷ್ಟು ಹೆಚ್ಚಾಗುತ್ತವೆ.. ಯಾಕಂದ್ರೆ ಬೇಸಿಗೆ, ನಮ್ಮ ಮನಸ್ಥಿತಿ ಹಾಗೂ ಲೈಂಗಿಕ ಬಯಕೆಗಳ ನಡುವೆ ಸಂಬಂಧವಿದೆ.. ಆಯಾಸ ಮತ್ತು ಖಿನ್ನತೆಯಿಂದಾಗಿ ಕಡಿಮೆ ಲೈಂಗಿಕ ಬಯಕೆಗೆ ಕಾರಣವಾಗಬಹುದು.. ಅದೇ ಸಮಯದಲ್ಲಿ ಸೂರ್ಯನ ಬೆಳಕು ಪ್ರಚೋದನೆ, ಶಕ್ತಿ ಮತ್ತು ಲೈಂಗಿಕ ಬಯಕೆಗಳನ್ನು ಹೆಚ್ಚು ಮಾಡುತ್ತದೆ.. ಇದಕ್ಕೆ ಕಾರಣಗಳನ್ನು ತಿಳಿದುಕೊಳ್ಳೋಣ..
ಇದನ್ನೂ ಓದಿ; ಕಾಂಗ್ರೆಸ್ ಕಾವೇರಿ ಗ್ಯಾರಂಟಿ ಕೊಡಬೇಕು; ಹೆಚ್.ಡಿ.ಕುಮಾರಸ್ವಾಮಿ ಆಗ್ರಹ
ಬಿಸಿಲು ಅಥವಾ ಸೂರ್ಯನ ಬೆಳಕು;
ಬೇಸಿಗೆಯಲ್ಲಿ ಸೂರ್ಯನ ಬೆಳಕು ಹೆಚ್ಚು ಪ್ರಕಾಶಮಾನವಾಗಿರುತ್ತದೆ.. ಇದು ಸಿರೊಟೋನಿನ್ ಅನ್ನು ಹೆಚ್ಚಿಸುತ್ತದೆ.. ಇದು ಉತ್ತಮ ಹಾರ್ಮೋನ್ ಕೂಡಾ ಹೌದು.. ಇದು ಮನಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ಬಿಸಿ ವಾತಾವರಣವು ರಕ್ತ ಪರಿಚಲನೆ ಹೆಚ್ಚಳವಾಗುವುದಕ್ಕೆ ಕಾರಣವಾಗುತ್ತದೆ.. ಇದು ಲೈಂಗಿಕ ಪ್ರಚೋದನೆಯನ್ನು ಹೆಚ್ಚಿಸುತ್ತದೆ.. ಈ ಬಿಸಿಲು ಎಂಡಾರ್ಫಿನ್ ಬಿಡುಗಡೆ ಮಾಡುತ್ತದೆ ಮತ್ತು ಕಡುಬಯಕೆಗಳನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ; ಇವರೇ ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ; 5785 ಕೋಟಿ ಆಸ್ತಿ!
ಅತಿಯಾಗಿ ಬೆವರುವಿಕೆ;
ವರ್ಕ್ ಔಟ್ ಮಾಡುವವರು ಹೆಚ್ಚು ರೋಮ್ಯಾಂಟಿಕ್ ಆಸೆಗಳನ್ನು ಹೊಂದಿರುತ್ತಾರೆ.. ಇದಕ್ಕೆ ಕಾರಣ ಬೆವರುವಿಕೆ.. ಈ ಕಾರಣದಿಂದಾಗಿ, ಪುರುಷರು ಮತ್ತು ಮಹಿಳೆಯರ ಮಾನಸಿಕ ಸ್ಥಿತಿ ಸುಧಾರಿಸುತ್ತದೆ ಮತ್ತು ಒತ್ತಡ ಕಡಿಮೆ ಮಾಡುತ್ತದೆ.. ಇದಲ್ಲದೆ, ಆಪೋಸಿಟ್ ಲಿಂಗದ ಕಡೆಗೆ ಆಕರ್ಷಣೆ ಹೆಚ್ಚಾಗುತ್ತದೆ ಮತ್ತು ಲೈಂಗಿಕ ಬಯಕೆಗಳು ಹೆಚ್ಚಾಗುತ್ತವೆ..
ವಿಟಮಿನ್ ಡಿ ಕಾರಣ;
ಸೂರ್ಯನ ಬೆಳಕಿಗೆ ಹೆಚ್ಚು ಒಡ್ಡಿಕೊಳ್ಳುವುದರಿಂದ ದೇಹದಲ್ಲಿ ವಿಟಮಿನ್ ಡಿ ಮಟ್ಟವನ್ನು ಹೆಚ್ಚಿಸುತ್ತದೆ.. ಇವು ಗಂಡು ಮತ್ತು ಹೆಣ್ಣು ಇಬ್ಬರಲ್ಲೂ ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸುತ್ತವೆ.. ಟೆಸ್ಟೋಸ್ಟೆರಾನ್ ಲೈಂಗಿಕ ಜೀವನದ ಹಾರ್ಮೋನ್ ಆಗಿದೆ.. ಈ ಕಾರಣದಿಂದಾಗಿ, ವಿಟಮಿನ್ ಡಿ 20 ರಿಂದ 40 ವರ್ಷ ವಯಸ್ಸಿನ ಮಹಿಳೆಯರ ಸ್ಥಿತಿಯನ್ನು ಸುಧಾರಿಸುತ್ತದೆ ಎಂದು ಅಧ್ಯಯನವು ಹೇಳುತ್ತದೆ.. ವಿಟಮಿನ್ ಡಿ ಕೊರತೆಯಿರುವ ಜನರಿಗೆ ಇದು ಮುಖ್ಯವಾಗಿದೆ..
ಇದನ್ನೂ ಓದಿ; ಹೆಂಡತಿಗೆ ಬಂತು ಪೋಲಿ ಮೆಸೇಜ್; ಕೊಲೆಗಡುಕನಾದ ದೇಗುಲದ ಪೂಜಾರಿ
ನಿದ್ರಾಹೀನತೆ;
ಬಿಸಿಲು ಹೆಚ್ಚಾದಾಗ ನಿದ್ರಾಹೀನತೆ ಹೆಚ್ಚಾಗುತ್ತದೆ.. ಈ ನಿದ್ರೆಯ ಕೊರತೆಯು ಆಕರ್ಷಣೆಯನ್ನು ಹೆಚ್ಚಿಸುತ್ತದೆ ಮತ್ತು ಪ್ರಣಯ ಬಯಕೆಗಳನ್ನು ಹೆಚ್ಚಿಸುತ್ತದೆ.. ಇವುಗಳೊಂದಿಗೆ ವ್ಯಾಯಾಮ ಮತ್ತು ನಡಿಗೆಯಿಂದ ಒತ್ತಡವನ್ನು ಕಡಿಮೆ ಮಾಡಬಹುದು. ಇದು ದೇಹದಲ್ಲಿ ಟೆಸ್ಟೋಸ್ಟೆರಾನ್ ಅನ್ನು ಹೆಚ್ಚಿಸುತ್ತದೆ.. ಎಂಡಾರ್ಫಿನ್, ಡೋಪಮೈನ್, ಸಿರೊಟೋನಿನ್ ಇತ್ಯಾದಿಗಳನ್ನು ಹೆಚ್ಚಿಸುತ್ತದೆ ಮತ್ತು ಕಡುಬಯಕೆಗಳನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ; ಮೋದಿ, ಅಮಿತ್ ಶಾ ಕರ್ನಾಟಕ, ರೈತರನ್ನು ದ್ವೇಷಿಸುತ್ತಾರೆ; ಸಿಎಂ ಸಿದ್ದರಾಮಯ್ಯ