BengaluruCrime

ಮೆಜೆಸ್ಟಿಕ್ ನಲ್ಲಿ ಖಾಸಗಿ ಬಸ್; ಸಂಡೂರಿಗೆ ಹೊರಡಬೇಕಿದ್ದ ಬಸ್ ಭಸ್ಮ

ಬೆಂಗಳೂರು; ಸಂಡೂರಿಗೆ ಹೊರಡಬೇಕಿದ್ದ ಖಾಸಗಿ ಬಸ್ಸೊಂದಕ್ಕೆ ಮೆಜೆಸ್ಟಿಕ್ ನಲ್ಲಿ ಬೆಂಕಿ ಬಿದ್ದಿದ್ದು, ಕ್ಷಣಾರ್ಧದಲ್ಲಿ ಹೊತ್ತಿ ಉರಿದಿದೆ..  ಎಸ್ ಆರ್ ಜೆ ಕಂಪನಿಗೆ ಸೇರಿದ ಖಾಸಗಿ ಬಸ್ ಇದಾಗಿದ್ದು, ಬೆಂಕಿ ಬಿದ್ದ ವೇಳೆ ಯಾವುದೇ ಪ್ರಯಾಣಿಕರಿರಲಿಲ್ಲ. ಹೀಗಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

  ಬಸ್ ಅನ್ನು ಧನ್ವಂತರಿ ರಸ್ತೆಯಲ್ಲಿ ನಿಲ್ಲಿಸಲಾಗಿತ್ತು.. ರಾತ್ರಿ 9 ಗಂಟೆಗೆ ಬಸ್ ಹೊರಡಬೇಕಿತ್ತು.. ಆದ್ರೆ ಅದಕ್ಕೂ ಮುಂದೆ ಬಸ್ ಗೆ ಬೆಂಕಿ ಬಿದ್ದಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಈ ದುರ್ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಅಕ್ಕ ಪಕ್ಕ ಅಂಗಡಿಗಳು, ಬಸ್ ಗಳು ಇದ್ದಿದ್ದರಿಂದ ಹೆಚ್ಚಿನ ಅನಾಹುತದ ಅಪಾಯವಿತ್ತು. ಆದ್ರೆ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಬೇರೆಡೆ ಹರಡದಂತೆ ತಡೆದು ಬೆಂಕಿ ನಂದಿಸಿದ್ದಾರೆ.

KA 22 B 5235 ನಂಬರ್‌ನ ನಾನ್ ಎ/ಸಿ ಸ್ಲೀಪರ್ ಬಸ್ ಇದಾಗಿದೆ ಎಂದು ತಿಳಿದುಬಂದಿದೆ.

Share Post