CrimeNational

ಕ್ರೇನ್‌ಗೆ ಡಿಕ್ಕಿ ಹೊಡೆದ ಆಟೋ; ಭೀಕರ ಅಪಘಾತದಲ್ಲಿ 7 ಮಂದಿ ಸಾವು!

ಪಾಟ್ನಾ; ಬಿಹಾರದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಏಳು ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ.. ಪಾಟ್ನಾದ ಕಂಕರ್‌ಬಾಗ್ ಬೈಪಾಸ್ ಬಳಿ ಕ್ರೇನ್‌ಗೆ ಆಟೋ ಡಿಕ್ಕಿ ಹೊಡೆದಿದ್ದರಿಂದ ಈ ದುರಂತ ಸಂಭವಿಸಿದೆ.. ಇಂದು ಬೆಳಗಿನ ಜಾವ 3.44 ರ ಸುಮಾರಿಗೆ ಈ ಘಟನೆ ನಡೆದಿದೆ.

ಇದನ್ನೂ ಓದಿ; ಅಕ್ಕಿ ಮೂಟೆ ತುಂಬಿದ ಲಾರಿ ಪಲ್ಟಿ; ರಸ್ತೆಯಲ್ಲೆಲ್ಲಾ ಅಕ್ಕಿ ಮೂಟೆಗಳು!

ಘಟನೆಯಲ್ಲಿ ಓರ್ವ ಮಹಿಳೆ, ಆಕೆಯ ಇಬ್ಬರು ಮಕ್ಕಳು ಸೇರಿ ಏಳು ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ.. ಆಟೋ ನಜ್ಜುಗುಜ್ಜಾಗಿದೆ.. ಆಟೋ ಮಿಥಾಪುರದಿಂದ ಝೀರೋ ಮೈಲ್ ಕಡೆಗೆ ಹೋಗುತ್ತಿತ್ತು.. ಇದೇ ವೇಳೆ ಕಂಕರ್‌ಬಾಗ್‌ ಬೈಪಾಸ್‌ ಬಳಿ ಮೆಟ್ರೋ ಕಾಮಗಾರಿಗಾಗಿ ಕ್ರೇಜ್‌ ಬಳಸಲಾಗುತ್ತಿತ್ತು. ಆ ಕ್ರೇನ್‌ಗೆ ಆಟೋ ಡಿಕ್ಕಿ ಹೊಡೆದಿದೆ.. ಡಿಕ್ಕಿಯ ರಭಸಕ್ಕೆ ಆಟೋ ನಜ್ಜುಗುಜ್ಜಾಗಿದೆ..

ಘಟನೆಯ ನಂತರ ಆಟೋ ರಿಕ್ಷಾ ಚಾಲಕ ಪರಾರಿಯಾಗಿದ್ದಾನೆ. ಘಟನೆಯಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.. ಉಳಿದ ಮೂವರು ಪಾಟ್ನಾದ ಸೆಂಟ್ರಲ್‌ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ..  ದುರ್ಘಟನೆಯಲ್ಲಿ ಮುಕೇಶ್ ಕುಮಾರ್ ಎಂಬಾತ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ; ಸಚಿವನ ಅತ್ಯಾಪ್ತನ ಮನೆಯಲ್ಲಿ 18 ಕೋಟಿ ರೂ. ಪತ್ತೆ!; ಏನೋ ಹುಡುಕಲು ಹೋದಾಗ..

 

Share Post