CrimeNational

ಮುಂಬೈನ ಖ್ಯಾತ ರಿಯಲ್‌ ಎಸ್ಟೇಟ್‌ ಉದ್ಯಮಿ ಆತ್ಮಹತ್ಯೆ

ಮುಂಬೈ; ಮುಂಬೈ ಖ್ಯಾತ ರಿಯಲ್‌ ಎಸ್ಟೇಟ್‌ ಉದ್ಯಮಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿಂಚ್‌ಪೋಕ್ಲಿ ರೈಲ್ವೆ ನಿಲ್ದಾಣದ ಬಳಿ ಇರುವ ಕಮಲ್‌ ಹೌಸಿಂಗ್‌ ಸೊಸೈಟಿಯ ಕಟ್ಟಡದಿಂದ ಹಾರಿ ಡೆವೆಲಪರ್‌ ಪರಸ್‌ ಪೋರ್ವಾಲ್‌ ಅವರು ಆತ್ಮಹತ್ಯೆ ಶರಣಾಗಿದ್ದಾರೆ. ಇಂದು ಬೆಳಗ್ಗೆ ಆರು ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. 

ಇದೇ ಕಟ್ಟಡದಲ್ಲಿ ಪರಸ್‌ ಅವರ ಮನೆ ಇದೆ. ಅವರು ಬೆಳಗ್ಗೆ 23ನೇ ಮಹಡಿಯಲ್ಲಿರುವ ಜಿಮ್‌ ನ ಬಾಲ್ಕನಿಯಿಂದ ಹಾರಿ ಪ್ರಾಣ ಬಿಟ್ಟಿದ್ದಾರೆ. ಅದಕ್ಕೂ ಮೊದಲು ಅವರು ಜಿಮ್‌ನಲ್ಲಿ ಡೆತ್‌ ನೋಟ್‌ ಒಂದನ್ನು ಬರೆದಿಟ್ಟಿದ್ದಾರೆ. ಅದರಲ್ಲಿ ನನ್ನ ಸಾವಿಗೆ ನಾನೇ ಕಾರಣ. ಇದಕ್ಕಾಗಿ ಯಾರನ್ನೂ ವಿಚಾರಣೆ ಮಾಡಬೇಡಿ ಎಂದು ಬರೆದಿದ್ದಾರೆ.

Share Post