BengaluruCrime

ದೇಶ ಸೇವೆ ಮಾಡಿದ ಯೋಧನ ಮಗ ಉಗ್ರನಾಗಿದ್ದು ಹೇಗೆ..?

ಬೆಂಗಳೂರು; ಮಾರ್ಚ್‌ 1ರಂದು ನಡೆದ ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದ ಆರೋಪಿಗಳೆಲ್ಲರನ್ನೂ ಬಂಧಿಸಲಾಗಿದೆ.. ಪಶ್ಚಿಮ ಬಂಗಾಳದಲ್ಲಿ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿ ಬೆಂಗಳೂರಿಗೆ ಕರೆತರಲಾಗಿದೆ.. ಎನ್‌ಐಎ ಅಧಿಕಾರಿಗಳು ಶಂಕಿ ಉಗ್ರರನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ..

ಇದನ್ನೂ ಓದಿ; ಬಬಲೇಶ್ವರ ಬಳಿ ಭೀಕರ ಅಪಘಾತ; ವಿಜಯಪುರದ ನಾಲ್ವರು ದರ್ಮರಣ!

ಅಬ್ದುಲ್‌ ಮತೀನ್‌ ತಾಹ ತಂದೆ ನಿವೃತ್ತ ಯೋಧ;

ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದ ಮಾಸ್ಟರ್‌ ಮೈಂಡ್‌ ಅಬ್ದುಲ್‌ ಮತೀನ್‌ ತಾಹ ಶಿವಮೊಗ್ಗ ಮೂಲದವು.. ಈತನ ತಂದೆ ದೇಶಕ್ಕಾಗಿ ದುಡಿದವರು.. ಯೋಧರಾಗಿ ಕೆಲಸ ಮಾಡಿದವರು.. ಒಬ್ಬ ನಿವೃತ್ತ ಯೋಧನ ಮಗ ಉಗ್ರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದೇ ಅಚ್ಚರಿ.. ಅಬ್ದುಲ್‌ ಮತೀನ್‌ ತಾಹ ಸುಶಿಕ್ಷಿತ ಕುಟುಂಬದಿಂದ ಬಂದವನು.. ಜೊತೆಗೆ ಈತ ಕೂಡಾ ಎಂಜಿನಿಯರಿಂಗ್‌ ಪದವೀಧರ.

ಇದನ್ನೂ ಓದಿ; ಮನುಷ್ಯರಂತೆ ಮೆತ್ತಗಿದೆ ಈ ದೇವರ ದೇಹ; ಹೊಕ್ಕುಳ ತೀರ್ಥದಿಂದ ಸಂತಾನ ಭಾಗ್ಯ!

ತೀರ್ಥಹಳ್ಳಿಯಲ್ಲಿ ಶಾಲಾ ಶಿಕ್ಷಣ ಪಡೆದಿದ್ದ ಮತೀನ್‌;

ಶಂಕಿತ ಉಗ್ರ ಮತೀನ್‌ ತಂದೆ ಭಾರತೀಯ ಸೇನೆಯಲ್ಲಿ ಯೋಧರಾಗಿ ಕೆಲಸ ಮಾಡಿ ನಿವೃತ್ತರಾಗಿದ್ದಾರೆ.. ಅವರ ಮಗನಾದ ಮತೀನ್‌, ತೀರ್ಥಹಳ್ಳಿ ಶಾಲಾ ಶಿಕ್ಷಣ ಮುಗಿಸಿದ್ದ.. ಅನಂತರ ಎಂಜಿನಿಯರಿಂಗ್‌ ಮಾಡಲು ಬೆಂಗಳೂರಿಗೆ ಬಂದಿದ್ದ.. ಈ ವೇಳೆಯಲ್ಲೇ ಆತನಿಗೆ ಉಗ್ರರ ಸಂಪರ್ಕ ಸಿಕ್ಕಿದೆ.. ಒಬ್ಬನೇ ಮಗನಾಗಿರುವ ಮತೀನ್‌, ಐಇಡಿ ಬಾಂಬ್‌ ತಯಾರಿಕೆಯಲ್ಲಿ ಎಕ್ಸ್‌ಪರ್ಟ್‌ ಎಂದು ತಿಳಿದುಬಂದಿದೆ.. ನಾಲ್ಕು ವರ್ಷಗಳಿಂದ ಎನ್‌ಐಎ ಅಧಿಕಾರಿಗಳು ಈತನಿಗಾಗಿ ಹುಡುಕಾಟ ನಡೆಸುತ್ತಿದ್ದರು..

ಇದನ್ನೂ ಓದಿ; ಮಾಂಸ ಕತ್ತರಿಸುವ ಕತ್ತಿಗಳಿಂದ ಮಸಾಜ್‌; ಹೀಗೂ ಉಂಟಾ..?

ಹೆಸರುಗಳನ್ನು ಬದಲಿಸಿಕೊಂಡ ತಲೆಮರೆಸಿಕೊಂಡಿದ್ದ;

ಶಂಕಿತ ಉಗ್ರ ಮತೀನ್‌ ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಪ್ರಕರಣ ಮಾಸ್ಟರ್‌ ಮೈಂಡ್‌ ಆಗಿದ್ದ.. ಈತ ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದ.. ಮಂಗಳೂರಿನಲ್ಲಿ ನಡೆದ ಕುಕ್ಕರ್‌ ಬ್ಲಾಸ್ಟ್‌ ಪ್ರಕರಣ, ಶಿವಮೊಗ್ಗದಲ್ಲಿ ನಡೆದ ಟ್ರಯಲ್‌ ಬ್ಲಾಸ್ಟ್‌ ಪ್ರಕರಣಗಳಲ್ಲಿ ಈತನೇ ಮಾಸ್ಟರ್‌ ಮೈಂಡ್‌ ಆಗಿದ್ದ.. ಹೀಗಾಗಿ ಈತನ ಸುಳಿವು ಕೊಟ್ಟವರಿಗೆ ಎನ್‌ಐಎ ಅಧಿಕಾರಿಗಳು ನಾಲ್ಕು ವರ್ಷದ ಹಿಂದೆಯೇ 3 ಲಕ್ಷ ಬಹುಮಾನ ಘೋಷಿಸಿದ್ದರು.. ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಆದ ಮೇಲೆ 10 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು.. ಈ ಮತೀನ್‌, ವಿವಿಧ ರಾಜ್ಯಗಳಲ್ಲಿ ತಲೆಮರೆಸಿಕೊಂಡಿದ್ದು, ಪ್ರತಿ ಕಡೆ ಹೋದಾಗಲೂ ಹೆಸರುಗಳನ್ನು ಬದಲಿಸಿಕೊಳ್ಳುತ್ತಿದ್ದ ಎಂದು ತಿಳಿದುಬಂದಿದೆ..

ಇದನ್ನೂ ಓದಿ; ನೀವೇಕೆ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲಿಲ್ಲ?; ಸಿಎಂ ಸಿದ್ದರಾಮಯ್ಯ ನೇರ ಪ್ರಶ್ನೆ

ಹಿಂದೂ ಹೆಸರಿಟ್ಟುಕೊಂಡ ಬೇರೆ ಬೇರೆ ಕಡೆ ವಾಸ;

ಈತನ ಹೆಸರು ಅಬ್ದುಲ್ ಮತೀನ್ ತಾಹ.. ಆದ್ರೆ ಈತ,  ಚೆನ್ನೈನಲ್ಲಿ ವಿಘ್ನೇಶ್‌ ಎಂದು ಹೆಸರಿಟ್ಟುಕೊಂಡು ತಲೆಮರೆಸಿಕೊಂಡಿದ್ದ.. ಕೋಲ್ಕತ್ತಾದಲ್ಲಿ ಅನ್ಮೂಲ್ ಕುಲಕರ್ಣಿ ಎಂದು ಹೇಳಿಕೊಂಡಿದ್ದ.. ಇನ್ನೊಬ್ಬ ಆರೋಪಿ ಕೂಡಾ ಇದೇ ರೀತಿ ಹೆಸರುಗಳನ್ನು ಬದಲಿಸಿಕೊಂಡು ನಕಲಿ ದಾಖಲೆಗಳನ್ನು ನೀಡಿ ಹೋಟೆಲ್‌ಗಳಲ್ಲಿ ಉಳಿದುಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ..

ಇದನ್ನೂ ಓದಿ; ಅಧಿಕ ಬಿಪಿ : ಇವುಗಳನ್ನು ಕುಡಿದರೆ ಬಿಪಿ ಹೆಚ್ಚಾಗುತ್ತದೆ

Share Post