ಬೆಂಗಳೂರು; ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪಕ್ಷಾಂತರ ಪರ್ವ ಜೋರಾಗಿ ನಡೆಯುತ್ತಿದೆ.. ಅದರಲ್ಲೂ ಬೆಂಗಳೂರು ಗ್ರಾಮಾಂತರ ಕ್ಷೇತ್ರ ರಾಜಕೀಯದ ಕಾವು ಜೋರಾಗಿದೆ.. ಹೇಗಾದರೂ ಮಾಡಿ‌‌‌ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಸಹೋದರ ಡಿ.ಕೆ.ಸುರೇಶ್‌ ಅವರನ್ನು ಗೆಲ್ಲಿಸಿಕೊಳ್ಳಬೇಕೆಂಬ ಪಣ ತೊಟ್ಟಿರುವ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌, ಭರ್ಜರಿ ಮಿಡ್‌ನೈಟ್‌ ಆಪರೇಷನ್‌ ಮಾಡಿದ್ದಾರೆ.

ಇದನ್ನೂ ಓದಿ; ಡಿಕೆಶಿ ದರ್ಪದ ಮಾತಿಗೆ ವಿನಮ್ರತೆಯಿಂದ ಉತ್ತರ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ

400ಕ್ಕೂ ಹೆಚ್ಚು ಜೆಡಿಎಸ್‌ ಕಾರ್ಯಕರ್ತರು ಕಾಂಗ್ರೆಸ್‌ ಸೇರ್ಪಡೆ;

      ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಭರ್ಜರಿ ಮಿಡ್‌ ನೈಡ್‌ ಆಪರೇಷನ್‌ ಮಾಡಿದ್ದಾರೆ. ಬರೋಬ್ಬರಿ 400ಕ್ಕೂ ಹೆಚ್ಚು ಜೆಡಿಎಸ್‌ ಕಾರ್ಯಕರ್ತರನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡಿದ್ದಾರೆ.  ಕಾಂಗ್ರೆಸ್‌ ಪಕ್ಷದ ತತ್ವಾದರ್ಶಗಳಿಂದ ಪ್ರೇರಿತರಾದ ಜೆಡಿಎಸ್ ಪಕ್ಷದ ಕಾರ್ಯಕರ್ತರು, ನಾಯಕರು ಸೇರಿದಂತೆ 400ಕ್ಕೂ ಹೆಚ್ಚು ಜನರು ಪಕ್ಷ ಸೇರ್ಪಡೆಗೊಂಡರು ಎಂದು ಡಿ.ಕೆ.ಶಿವಕುಮಾರ್‌ ಮಧ್ಯರಾತ್ರಿಯಲ್ಲಿ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ; ಒಂದೇ ಒಂದು ಕರೆಗೆ ಬೆಚ್ಚಿದ ಟೆಕ್ಕಿ; ಸೈಬರ್ ಕಳ್ಳರಿಂದ 2.4 ಕೋಟಿಗೆ ಕನ್ನ

ಅಪಾರ್ಟ್‌ಮೆಂಟ್‌ನಲ್ಲಿ ಡಿಕೆಶಿ ಭರ್ಜರಿ ಕ್ಯಾಂಪೇನ್‌;

   ಡಿ.ಕೆ.ಶಿವಕುಮಾರ್‌ ಜೆಡಿಎಸ್‌ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೊದಲು ಅಪಾರ್ಟ್‌ಮೆಂಟ್‌ಗಳಲ್ಲಿ ಕ್ಯಾಂಪೇನ್‌ ಮಾಡಿದರು.. ಸಹೋದರ ಡಿ.ಕೆ.ಶಿವಕುಮಾರ್‌ ಪರ ಮತಯಾಚನೆ ಮಾಡಿದರು.. ಬೆಂಗಳೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಶ್ರೀರಾಮ್‌ ಸಮ್ಮಿತ್‌ ಅಪಾರ್ಟ್‌ಮೆಂಟ್‌ನಲ್ಲಿ ಡಿ.ಕೆ.ಶಿವಕುಮಾರ್‌ ಅವರು ಮತದಾರರನ್ನು ಭೇಟಿಯಾಗಿ ಡಿ.ಕೆ,ಸುರೇಶ್‌ಗೆ ಮತ ಹಾಕುವಂತೆ ಮನವಿ ಮಾಡಿದರು..

ಕಾಂಗ್ರೆಸ್‌ ಸರ್ಕಾರದ ಸಾಧನೆ ವಿವರಿಸಿದ ಡಿಕೆಶಿ;

   ಇನ್ನು ಇದೇ ವೇಳೆ ರಾಜ್ಯ ಕಾಂಗ್ರೆಸ್‌ ಸರ್ಕಾರದ ಸಾಧನೆಯನ್ನು ಮತದಾರರಿಗೆ ಮನವರಿಕೆ ಮಾಡಿಕೊಟ್ಟರು.. ಐದು ಗ್ಯಾರೆಂಟಿಗಳಿಂದ ಬಡ, ಮಧ್ಯಮವರ್ಗದವರಿಗೆ ಹೇಗೆಲ್ಲಾ ಅನುಕೂಲ ಆಗಿದೆ ಅನ್ನೋದನ್ನು ತಿಳಿಸಿದರು.. ಕೊಟ್ಟ ಭರವಸೆಯನ್ನು ಸರ್ಕಾರ ಈಡೇರಿಸಿರುವ ಬಗ್ಗೆಯೂ ಡಿ.ಕೆ.ಶಿವಕುಮಾರ್‌ ಹೇಳಿದರು.

ಇದನ್ನೂ ಓದಿ; ಹಿರಿಯ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಮೇಲೆ ಹಲ್ಲೆ

ಡಾ.ಸಿ.ಎನ್‌.ಮಂಜುನಾಥ್‌ ವಿರುದ್ಧ ಗೆಲ್ಲಲು ಕಸರತ್ತು;

    ಬಿಜೆಪಿ ಅಭ್ಯರ್ಥಿಯಾಗಿ ದೇವೇಗೌಡರ ಅಳಿಯ ಡಾ.ಸಿ.ಎನ್‌.ಮಂಜುನಾಥ್‌ ಕಣದಲ್ಲಿದ್ದಾರೆ.. ಜೆಡಿಎಸ್‌ ಹಾಗೂ ಬಿಜೆಪಿಯ ಎರಡೂ ಮತಗಳು ಸಿ.ಎನ್‌.ಮಂಜುನಾಥ್‌ ಗೆ ಸಿಗುವುದರಿಂದ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಸಾಕಷ್ಟು ಜಿದ್ದಾಜಿದ್ದಿಗೆ ಕಾರಣವಾಗಲಿದೆ.. ಈ ಹಿನ್ನೆಲೆಯಲ್ಲಿ ಡಿಕೆ ಸಹೋದರರು, ಈ ಬಾರಿ ಪ್ರತಿಷ್ಠೆಯಾಗಿ ತೆಗೆದುಕೊಂಡು ಚುನಾವಣೆ ಎದುರಿಸುತ್ತಿದ್ದಾರೆ.. ಹಲವಾರು ರೀತಿಯಲ್ಲಿ ಕ್ಷೇತ್ರದ ಜನರ ಮನವೊಲಿಸುವ ಪ್ರಯತ್ನ ನಡೆಯುತ್ತಿದೆ.. ಜೊತೆಗೆ ಜೆಡಿಎಸ್‌, ಬಿಜೆಪಿ ಪಕ್ಷದ ಮುಖಂಡರ ಆಪರೇಷನ್‌ ಕಾರ್ಯ ಕೂಡಾ ನಡೆದಿದೆ..

ಇದನ್ನೂ ಓದಿ; ರಾಹುಲ್ ಗಾಂಧಿ ಹೆಸರು ಹೇಳದೆ ಮತ ಕೇಳುತ್ತಿರುವ ಕಾಂಗ್ರೆಸ್; ಆರ್.ಅಶೋಕ್