BengaluruPolitics

ಚುನಾವಣೆ ತಲೆಬಿಸಿ ನಡುವೆ ಸಿದ್ದರಾಮಯ್ಯ ಪಂಚೆ ಶಾಪಿಂಗ್‌

ಬೆಂಗಳೂರು; ಕಾಂಗ್ರೆಸ್‌ನಿಂದ ರಾಜ್ಯಸಭಾ ಚುನಾವಣೆಯಲ್ಲಿ ಎರಡನೇ ಅಭ್ಯರ್ಥಿಯನ್ನು ಹಾಕಿಸಿ ಜೆಡಿಎಸ್‌ ನಿದ್ದೆಗೆಡಿಸಿರುವ ಸಿದ್ದರಾಮಯ್ಯ ಮಾತ್ರ ಶಾಪಿಂಗ್‌ ಮೂಡ್‌ನಲ್ಲಿದ್ದಾರೆ. ಒಂದು ಕಡೆ ಜೆಡಿಎಸ್‌ ನಾಯಕರು ಸಿದ್ದರಾಮಯ್ಯರ ಮನವೊಲಿಸುವ ಯತ್ನ ಮಾಡುತ್ತಿದ್ದರೆ ಇತ್ತ ಸಿದ್ದರಾಮಯ್ಯ ಯಾವುದೇ ತಲೆಬಿಸಿ ಇಲ್ಲದೆ, ಪಂಚೆಗಳ ಶಾಪಿಂಗ್‌ ಮಾಡಿ ಗಮನ ಸೆಳೆದಿದ್ದಾರೆ.

ಇಂದು ಬೆಂಗಳೂರಿನ ಕಾಟನ್‌ ಪೇಟೆಯ ಅಂಗಡಿಯೊಂದರಲ್ಲಿ ಸಿದ್ದರಾಮಯ್ಯ ಅವರು ಪಂಚೆಗಳನ್ನು ಖರೀದಿ ಮಾಡಿದರು. ಡಿಸ್ಕೌಂಟ್‌ ಹೋಗಿ ಪಂಚೆಯೊಂದಕ್ಕೆ 650 ರೂಪಾಯಿಯಂತೆ ಒಟ್ಟು 30 ಪಂಚೆಗಳನ್ನು ಸಿದ್ದರಾಮಯ್ಯ ಖರೀದಿ ಮಾಡಿದರು.

Share Post