Politics

ಲೋಕಸಭಾ ಚುನಾವಣೆ; ಕರ್ನಾಟಕದಲ್ಲಿ ಜನರ ಮೂಡ್‌ ಹೇಗಿದೆ..? – ಧರ್ಮ ನಡೆಯೋಲ್ಲ ಎಂದ ಜನ!

ಬೆಂಗಳೂರು; ಲೋಕಸಭಾ ಚುನಾವಣಾ ಕಾವು ಜೋರಾಗಿದೆ.. ಜನರ ಮೂಡ್‌ ಏನಿದೆ ಎಂಬುದರ ಬಗ್ಗೆ ಸಮೀಕ್ಷೆಗಳು ನಡೆಯುತ್ತಿವೆ… ಐಟಿವಿ ನೆಟ್‌ವರ್ಕ್‌ನ ನ್ಯೂಸ್‌ ಎಕ್ಸ್‌ ಕೂಡಾ ಕರ್ನಾಟಕದ ಜನರ ಮೂಡ್‌ ಏನಿದೆ ಎಂದು ಸಮೀಕ್ಷೆ ಮಾಡಲಾಗಿದೆ.. ಕರ್ನಾಟಕದ ಜನಕ್ಕೆ ಒಂದಷ್ಟು ಪ್ರಶ್ನೆಗಳನ್ನು ಕೇಳಲಾಗಿದೆ.. ಅದರಲ್ಲಿ ಜನ ಅಭಿವೃದ್ಧಿಗೆ ಮತ ಹಾಕೋದಾಗಿ ಹೆಚ್ಚು ಮಂದಿ ಹೇಳಿದ್ದಾರೆ.. ಪ್ರಧಾನಿ ಮೋದಿಯವರ ಕಾರ್ಯಕ್ಷಮತೆ ಚೆನ್ನಾಗಿದೆ ಎಂದು ಹೆಚ್ಚು ಮಂದಿ ಹೇಳಿದ್ದಾರೆ.. ಇನ್ನು ಕರ್ನಾಟಕದಲ್ಲಿ ಜಾತಿ-ಧರ್ಮದ ಫ್ಯಾಕ್ಟರ್‌ ನಡೆಯೋದಿಲ್ಲ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ..

ಇದನ್ನೂ ಓದಿ; ಬೆಳಗಿನ ಉಪಾಹಾರ ಸೇವಿಸಿದರೆ ತೂಕ ಹೆಚ್ಚಾಗುತ್ತಾ ಅಥವಾ ಕಡಿಮೆಯಾಗುತ್ತಾ..?

ಲೋಕಸಭಾ ಚುನಾವಣೆಯಲ್ಲಿ ನಿಮಗೆ ದೊಡ್ಡ ವಿಷಯ ಯಾವುದು?
ಅಭಿವೃದ್ಧಿ  – ಶೇ 29
ಹಣದುಬ್ಬರ  – ಶೇ 18
ಭ್ರಷ್ಟಾಚಾರದ ವಿರುದ್ಧ ಅಭಿಯಾನ – ಶೇ.12
ನಿರುದ್ಯೋಗ  – ಶೇ 30
ಇವುಗಳಲ್ಲಿ ಯಾವುದೂ ಇಲ್ಲ – ಶೇ 11

2024 ರ ಲೋಕಸಭಾ ಚುನಾವಣೆಯಲ್ಲಿ ನೀವು ಯಾವ ಆಧಾರದ ಮೇಲೆ ಮತ ಚಲಾಯಿಸುತ್ತೀರಿ?

ಪಕ್ಷ     – ಶೇ.38

ಅಭ್ಯರ್ಥಿ – ಶೇ.09

ಧರ್ಮ ಮತ್ತು ಜಾತಿ – ಶೇ.01

ಕೆಲಸ  – ಶೇ.51

ಇವುಗಳಲ್ಲಿ ಯಾವುದೂ ಇಲ್ಲ – 00

ಇದನ್ನೂ ಓದಿ; ಕನ್ನಡ ಸಿನಿಮಾ ನಿರ್ಮಾಣ ಮಾಡುತ್ತಾರಂತೆ ಟೀಂ ಇಂಡಿಯಾ ಆಟಗಾರ ಎಂ.ಎಸ್‌.ಧೋನಿ!

ಪ್ರಧಾನಿಯಾಗಿ ನರೇಂದ್ರ ಮೋದಿ ಅವರ ಕಾರ್ಯಕ್ಷಮತೆ ಹೇಗಿದೆ?

ಚೆನ್ನಾಗಿಲ್ಲ – ಶೇ. 19

ಚೆನ್ನಾಗಿದೆ –  ಶೇ. 42

ತುಂಬಾ ಚೆನ್ನಾಗಿದೆ – ಶೇ. 30

ಹೇಳಲು ಸಾಧ್ಯವಿಲ್ಲ – ಶೇ. 09

ಇದನ್ನೂ ಓದಿ; ಸರ್ಕಾರಿ ಬಸ್‌ ಅಡ್ಡಗಟ್ಟಿ ಗೂಂಡಾಗಿರಿ; ಚಾಲಕ, ನಿರ್ವಾಹಕನ ಮೇಲೆ ಹಲ್ಲೆ!

ಲೋಕಸಭಾ ಚುನಾವಣೆಯಲ್ಲಿ ಮೋದಿ ಫ್ಯಾಕ್ಟರ್ ಎಷ್ಟು ಕೆಲಸ ಮಾಡುತ್ತದೆ?
ಸ್ವಲ್ಪ – ಶೇ 12

ಇನ್ನಷ್ಟು – ಶೇ 37

ತುಂಬಾ – ಶೇ. 34

ಇಲ್ಲವೇ ಇಲ್ಲ – ಶೇ. 16

ಹೇಳಲು ಸಾಧ್ಯವಿಲ್ಲ – ಶೇ. 01

2024 ರ ಲೋಕಸಭಾ ಚುನಾವಣೆಯಲ್ಲಿ ಯಾರು ಸರ್ಕಾರ ರಚಿಸುತ್ತಾರೆ ಎಂದು ನೀವು ಭಾವಿಸುತ್ತೀರಿ?

ಬಿಜೆಪಿ (ಎನ್‌ಡಿಎ) ಮೈತ್ರಿಕೂಟ – ಶೇ. 64

ಕಾಂಗ್ರೆಸ್‌ (ಇಂಡಿಯಾ) ಮೈತ್ರಿಕೂಟ – ಶೇ. 27

ಪ್ರಾದೇಶಿಕ ಪಕ್ಷಗಳ ಸರ್ಕಾರ – ಶೇ. 05

ಹೇಳಲು ಸಾಧ್ಯವಿಲ್ಲ – ಶೇ.01

Share Post