Cinema

ಶೂಟಿಂಗ್‌ ವೇಳೆ ನಟ ಅಜಿತ್‌ ಇದ್ದ ಕಾರು ಪಲ್ಟಿ; ಬಚಾವಾಗಿದ್ದೇ ಒಂದು ಪವಾಡ!

ಸಿನಿಮಾವೊಂದರ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ನಟ ಅಜಿತ್‌ ಅವರಿದ್ದ ಕಾರು ಪಲ್ಟಿಯಾಗಿದ್ದು, ಆ ಭಯಾನಕ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಳೆದ ವರ್ಷದ ನಡೆದ ಈ ಘಟನೆಯ ವಿಡಿಯೋವನ್ನು ಈಗ ಹಂಚಿಕೊಳ್ಳಲಾಗಿದ್ದು, ಎಲ್ಲೆಡೆ ವೈರಲ್‌ ಆಗುತ್ತಿದೆ..

ಇದನ್ನೂ ಓದಿ; ಬೇಸಿಗೆಯಲ್ಲಿ ವಿದ್ಯುತ್‌ ಬಿಲ್‌ ಜಾಸ್ತಿ ಬರ್ತಿದೆಯಾ..?; ಹಾಗಾದ್ರೆ ಈ ಕೆಲಸ ಮಾಡಿ..

ಮರಳುಗಾಡಿನಲ್ಲಿ ಕಾರಿನಲ್ಲಿ ಸಾಹಸ ದೃಶ್ಯ;

ಅಜಿತ್​ ಅವರ ಅಭಿನಯದ ‘ವಿಡೈಮುಯರ್ಚಿ’ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.. ಈಗ ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.. ಮರುಗಾಡಿನಲ್ಲಿ ಕಾರಿನ ಸ್ಟಂಟ್‌ ಮಾಡುವ ಸಮಯದಲ್ಲಿ ಕಾರು ಮಗುಚಿಬಿದ್ದಿದೆ.. ಆದ್ರೆ ಈ ಸಮಯದಲ್ಲಿ ಕಾರಿನಲ್ಲಿದ್ದ ಅಜಿತ್‌ ಹಾಗೂ ಇನ್ನೊಬ್ಬ ನಟನಿಗೆ ಯಾವುದೇ ತೊಂದರೆಯಾಗಿಲ್ಲ.

ಇದನ್ನೂ ಓದಿ; ಲಕ್ಸುರಿ ಹೋಟೆಲ್‌ನಲ್ಲಿ ವಾಸ್ತವ್ಯ, ನಕಲಿ ಪೇಮೆಂಟ್‌; ಸಿಕ್ಕಿಬಿದ್ದ ಹೈಟೆಕ್‌ ವಂಚಕ

ಯೂರೋಪ್‌ ದೇಶದಲ್ಲಿ ನಡೆದಿದ್ದ ಚಿತ್ರೀಕರಣ;

‘ವಿಡೈಮುಯರ್ಚಿ’ ಚಿತ್ರದ ಕಾರು ಸ್ಟಂಟ್‌ ದೃಶ್ಯಗಳನ್ನು ಯೂರೋಪ್‌ನಲ್ಲಿ ಚಿತ್ರೀಕರಣ ಮಾಡಲಾಗಿತ್ತು.. ಅಜಿತ್‌ ಅವರು ಯಾವುದೇ ಡ್ಯೂಪ್‌ ಇಲ್ಲದೆ ಅವರೇ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.. ಇದೇ ವೇಳೆ ಕಾರು ಮಗುಚಿಬಿದ್ದಿತ್ತು ಎನ್ನಲಾಗಿದೆ.. ಸದ್ಯ ಅಜಿತ್‌ ಅವರು ಮಧ್ಯಪ್ರದೇಶ ಪ್ರವಾಸದಲ್ಲಿದ್ದಾರೆ.. ಇದೇ ವೇಳೆ ವಿಡಿಯೋಗಳು ವೈರಲ್‌ ಆಗುತ್ತಿವೆ..

ಇದನ್ನೂ ಓದಿ; ಸಾವು ಗೆದ್ದು ಬಂದ ಸಾತ್ವಿಕ್; ಬೋರ್ ವೆಲ್ ನಿಂದ ಹೊರಬಂದ ಬಾಲಕ

ಕಾರಿನಲ್ಲಿ ನಟ ಆರವ್‌ ಕೂಡಾ ಇದ್ದರು;

ಶೂಟಿಂಗ್‌ ವೇಳೆ ಕಾರಿನಲ್ಲಿ ನಟ ಆರವ್‌ ಕೂಡಾ ಇದ್ದರು.. ಆರವ್‌ಗೆ ಕೈಗಳನ್ನು ಕಟ್ಟಲಾಗಿತ್ತು.. ಆದರೂ ಕೂಡಾ ಕಾರು ಮಗುಚಿಬಿದ್ದಾಗ ಇಬ್ಬರಿಗೂ ಯಾವುದೇ ತೊಂದರೆಯಾಗಿಲ್ಲ.. ಕೂಡಲೇ ಚಿತ್ರತಂಡ ನೆರವಿಗೆ ಬಂದಿದ್ದರಿಂದ ಯಾವುದೇ ತೊಂದರೆಯಾಗಿಲ್ಲ. ಈ ಭಯಾನಕ ದೃಶ್ಯವನ್ನು ಚಿತ್ರ ಪ್ರಚಾರಕ ಸುರೇಶ್​ ಚಂದ್ರ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‘‘ವಿಡೈಮುಯರ್ಚಿ ಚಿತ್ರೀಕರಣ ನವೆಂಬರ್​ 2023’’ ಎಂದು ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ; ಕಾಂಗ್ರೆಸ್‌ ಮಾಜಿ ಶಾಸಕ ಆತ್ಮಹತ್ಯೆ; ಆಸ್ಪತ್ರೆಯಲ್ಲಿ ತಂದೆಯ ನರಳಾಟ!

Share Post