ಲಕ್ಸುರಿ ಹೋಟೆಲ್ನಲ್ಲಿ ವಾಸ್ತವ್ಯ, ನಕಲಿ ಪೇಮೆಂಟ್; ಸಿಕ್ಕಿಬಿದ್ದ ಹೈಟೆಕ್ ವಂಚಕ
ಬೆಂಗಳೂರು; ಬೆಂಗಳೂರಿಗೆ ಚೆನ್ನೈ, ಮುಂಬೈ ಮುಂತಾದ ನಗರಗಳಿಂದ ವಿಮಾನದಲ್ಲಿ ಬಂದು ಕಳ್ಳತನ ಮಾಡಿ ಮತ್ತೆ ವಿಮಾನದಲ್ಲಿ ಪರಾರಿಯಾಗುವ ಗ್ಯಾಂಗ್ ಇದೆ.. ಇದೇ ರೀತಿ ಹೈಟೆಕ್ ವಂಚಕರು ಬೇರೆ ಬೇರೆ ರೀತಿಯಲ್ಲಿ ವಂಚನೆ ಮಾಡುತ್ತಿರುತ್ತಾರೆ.. ಹೀಗೆ ಪ್ರತಿಷ್ಠಿತ ಹೋಟೆಲ್ಗೆ ವಂಚನೆ ಮಾಡಲು ಹೋದ ಯುವಕನೊಬ್ಬ ಸಿಕ್ಕಿಬಿದ್ದಿದ್ದಾನೆ.. ಈಗ ಆತ ಪೊಲೀಸರ ಅತಿಥಿಯಾಗಿದ್ದಾನೆ..
ಇದನ್ನೂ ಓದಿ; ಸಾವು ಗೆದ್ದು ಬಂದ ಸಾತ್ವಿಕ್; ಬೋರ್ ವೆಲ್ ನಿಂದ ಹೊರಬಂದ ಬಾಲಕ
ನಕಲಿ ಪೇಮೆಂಟ್ ಸ್ಕ್ರೀನ್ ಶಾಟ್ ತೋರಿಸುತ್ತಿದ್ದ;
ಕೋಲ್ಕತ್ತಾದಲ್ಲಿ ಆರ್ಮಿ ಆಫೀಸರ್ ಎಂದು ಹೇಳಿಕೊಂಡು ಬಂದಿದ್ದ ವಂಚಕ ಬೆಂಗಳೂರಿನ ಪ್ರತಿಷ್ಠಿತ ಫೈವ್ ಸ್ಟಾರ್ ಹೋಟೆಲ್ನಲ್ಲಿ ರೂಮ್ ಪಡೆದುಕೊಂಡಿದ್ದ.. ಆದ್ರೆ ಹಣ ಪಾವತಿ ಮಾಡದೇ ವಂಚನೆ ಮಾಡಿದ್ದ.. ರೂಮ್ ಬುಕ್ ಮಾಡಿದ ಮೇಲೆ ಪೇಮೆಂಟ್ ಮಾಡಿರಲಿಲ್ಲ.. ಕೇಳಿದ್ದಕ್ಕೆ ಪಾವತಿಸಿದ್ದೇನೆ ಎಂದು ನಕಲಿ ಪೇಮೆಂಟ್ ಸ್ಕ್ರೀನ್ ಶಾಟ್ ತೋರಿಸಿದ್ದ.. ಆದ್ರೆ ಹೋಟೆಲ್ ಅಕೌಂಟ್ಗೆ ಹಣ ಬಂದಿರಲಿಲ್ಲ.. ಆಗ ಆತ ಸರ್ವರ್ ಪ್ರಾಬ್ಲಂ ಇರಬೇಕು ಎಂದು ಯಾಮಾರಿಸಿದ್ದ.. ನಂತರ ಹತ್ತು ಸಾವಿರ ರೂಪಾಯಿ ಹಣ ನೀಡಿ, ಉಳಿದ ಹಣ ಮತ್ತೆ ಕೊಡುತ್ತೇನೆ ಎಂದುಯ ಕೊಟ್ಟಿರಲಿಲ್ಲ.. ಇದರಿಂದ ಅನುಮಾನಗೊಂಡ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.. ಪೊಲೀಸರು ವಿಚಾರಣೆ ನಡೆಸಿದಾಗ, ಈತನ ಕೆಲಸವೇ ವಂಚನೆ ಮಾಡೋದು ಅನ್ನೋದು ಗೊತ್ತಾಗಿದೆ..
ಇದನ್ನೂ ಓದಿ; ಕಾಂಗ್ರೆಸ್ ಮಾಜಿ ಶಾಸಕ ಆತ್ಮಹತ್ಯೆ; ಆಸ್ಪತ್ರೆಯಲ್ಲಿ ತಂದೆಯ ನರಳಾಟ!
ಬೊರಾಡಾ ಸುಧೀರ್ ಬಂಧಿತ ಆರೋಪಿ;
ಬೊರಾಡಾ ಸುಧೀರ್ ಎಂಬಾತನೇ ಬಂದಿತ ಆರೋಪಿ.. ಈತ ಆರ್ಮಿ ಆಫೀಸರ್ ಎಂದು ಹೇಳಿಕೊಂಡು ಫೈವ್ ಸ್ಟಾರ್ ಹೋಟೆಲ್ಗಳಲ್ಲಿ ವಾಸ್ತವ್ಯ ಹೂಡುತ್ತಿದ್ದ.. ಹೋಟೆಲ್ಗಳ ಐಶಾರಾಮಿ ಕಾರುಗಳನ್ನೂ ಬಾಡಿಗೆ ತೆಗೆದುಕೊಂಡು ಓಡಾಡುತ್ತಿದ್ದ.. ಆದ್ರೆ ಪೇಮೆಂಟ್ ಮಾಡುವ ಸಮಯದಲ್ಲಿ ಆನ್ಲೈನ್ ಪೇಮೆಂಟ್ ಮಾಡಿದ್ದೇನೆ ಎಂದು ನಕಲಿ ಸ್ಕ್ರೀನ್ ಶಾಟ್ ತೋರಿಸಿ ಅಲ್ಲಿಂದ ಎಸ್ಕೇಪ್ ಆಗುತ್ತಿದ್ದ..
ಇದನ್ನೂ ಓದಿ; ಮದುವೆ ವರನ ಕಾರಿಗೆ ಚಿಪ್ಸ್ ಪಾಕೆಟ್ಗಳ ಸಿಂಗಾರ; ಏನಿದು ವಿಚಿತ್ರ..?
80 ಸಾವಿರ ಬಿಲ್ ಮಾಡಿದ್ದ ಆಸಾಮಿ;
ಬೆಂಗಳೂರಿ ಐಶಾರಾಮಿ ಹೋಟೆಲ್ನಲ್ಲಿ ತಂಗಿದ್ದ ಆರೋಪಿ, ಅಲ್ಲಿ 80 ಸಾವಿರ ರೂಪಾಯಿ ಬಿಲ್ ಮಾಡಿದ್ದ.. ನಂತರ ಬಿಲ್ ಪಾವತಿಸುವಂತೆ ಕೇಳಿದಾಗ, ಪಾವತಿ ಮಾಡುತ್ತಿರುವಂತೆ ನಾಟಕವಾಡಿ ನಕಲಿ ಸ್ಕ್ರೀನ್ ಶಾಟ್ ತೋರಿಸಿದ್ದ.. ಜೊತೆಗೆ ವಿಮಾನ ನಿಲ್ದಾಣಕ್ಕೆ ಬಿಎಂಡಬ್ಲ್ಯೂ ಕಾರಿನಲ್ಲಿ ಡ್ರಾಪ್ ಮಾಡುವಂತೆ ಹೋಟೆಲ್ ಸಿಬ್ಬಂದಿಗೆ ಹೇಳಿದ್ದ.. ಆದ್ರೆ ಹೋಟೆಲ್ ಸಿಬ್ಬಂದಿ ಅನುಮಾನಗೊಂಡು ಪೇಮೆಂಟ್ ಆಗಿದೆಯೇ ಇಲ್ಲವೇ ಎಂದು ಪರೀಕ್ಷೆ ಮಾಡಿದಾಗ ನಿಜ ವಿಷಯ ಗೊತ್ತಾಗಿದೆ.. ಈಗ ಆರೋಪಿ ಸಿಕ್ಕಿಬಿದ್ದಿದ್ದಾನೆ.. ಪೊಲೀಸರ ಅತಿಥಿಯಾಗಿದ್ದಾನೆ.. ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ..
ಇದನ್ನೂ ಓದಿ; ಡಾ.ಕೆ.ಸುಧಾಕರ್ ಭರ್ಜರಿ ತಂತ್ರಗಾರಿಕೆ; ಮಾಜಿ ಸಚಿವ ಗೆಲ್ಲೋದು ಫಿಕ್ಸ್..?