Crime

ಸಿಕಂದ್ರಾಬಾದ್‌ ಕ್ಲಬ್‌ನಲ್ಲಿ ಭಾರಿ ಬೆಂಕಿ ದುರಂತ..!

ಹೈದರಾಬಾದ್‌: ಇಲ್ಲಿನ ಐತಿಹಾಸಿಕ ಸಿಕಂದ್ರಾಬಾದ್‌ ಕ್ಲಬ್‌ ಬೆಂಕಿಗೆ ಆಹುತಿಯಾಗಿದೆ. ದೇಶದ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಸೇರಿದ್ದ ಸಿಕಂದ್ರಬಾದ್‌ ಕ್ಲಬ್‌ನಲ್ಲಿ ಇಂದು ಮುಂಜಾನೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿತ್ತು. ವಿಷಯ ತಿಳಿಯುತ್ತಿದ್ದ ಏಳು ಅಗ್ನಿಶಾಮಕ ವಾಹನಗಳು ಆಗಮಿಸಿ, ಹರಸಾಹಸಪಟ್ಟು ಬೆಂಕಿ ನಂದಿಸಿದವು. ಆದರೆ, ಐತಿಹಾಸಿಕ ಕಟ್ಟಡ ಅಷ್ಟರಲ್ಲಾಗದೇ ಸುಟ್ಟು ಕರಕಲಾಗಿತ್ತು.

    ಇಂದು ಬೆಳಗಿನಜಾವ ಮೂರು ಗಂಟೆ ಸಮಯದಲ್ಲಿ ಈ ದುರ್ಘಟನೆ ನಡೆದಿದೆ. ಅಗ್ನಿಶಾಮಕದಳದ ಸಿಬ್ಬಂದಿ ನಾಲ್ಕು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿದ ಬೆಂಕಿ ನಂದಿಸಿದ್ದಾರೆ. ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಕ್ಲಬ್‌ಗೆ ರಜೆ ಇತ್ತು. ಹೀಗಾಗಿ ದುರಂತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕ್ಲಿಬ್‌ ತೆರೆದಿದ್ದಾಗ ಈ ದುರ್ಘಟನೆ ನಡೆದಿದ್ದರೆ, ದೊಡ್ಡ ಅನಾಹುತವಾಗುವ ಅಪಾಯವಿತ್ತು. ಅದೃಷ್ಟವಶಾತ್‌ ಯಾವುದೇ ತೊಂದರೆಯಾಗಿಲ್ಲ.

ಸಿಕಂದ್ರಾಬಾದ್‌ ಕ್ಲಬ್ ನ್ನು 1878ರಲ್ಲಿ ಸ್ಥಾಪಿಸಲಾಗಿತ್ತು. ಮಿಲಿಟರಿ ಅಧಿಕಾರಿಗಳಿಗಾಗಿ ಅಂದು ಸ್ಥಾಪಿಸಲಾಗಿದ್ದ ಈ ಕ್ಲಬ್‌ನಲ್ಲಿ ಸುಮಾರು ಐದು ಸಾವಿರಕ್ಕೂ ಹೆಚ್ಚು ಸದಸ್ಯರಿದ್ದಾರೆ. ಈ ಕ್ಲಬ್‌ನಲ್ಲಿ 350 ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದಾರೆ.

Share Post