DistrictsHealth

ಬೋರ್‌ವೆಲ್‌ ದುರಂತ; 16 ಅಡಿ ಆಳದಲ್ಲಿ ಕಾಲು ಅಲ್ಲಾಡಿಸುತ್ತಿದೆ ಮಗು!

ವಿಜಯಪುರ; ನಿನ್ನೆ ಸಂಜೆ ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಲಚ್ಯಾನ ಗ್ರಾಮದ ತೋಟದಲ್ಲಿ ಎರಡು ವರ್ಷದ ಮಗು ಬೋರ್‌ವೆಲ್‌ಗೆ ಬಿದ್ದಿತ್ತು.. ಮಗು ಇನ್ನು ಬೋರ್‌ವೆಲ್‌ನಲ್ಲಿ ಕಾಲು ಅಲ್ಲಾಡಿಸುತ್ತಿದ್ದಾರೆ.. ಜೀವನ್ಮರಣದ ನಡುವೆ ಹೋರಾಟ ಮಾಡುತ್ತಿದೆ.. ಮಗುವನ್ನು ರಕ್ಷಣೆ ಮಾಡಲು ರಾತ್ರಿಯಿಂದ ಸತತವಾಗಿ ಪ್ರಯತ್ನ ಮಾಡಲಾಗುತ್ತಿದೆ.. ಜೆಸಿಬಿಗಳ ಮೂಲಕ ಮಣ್ಣ ತೆಗೆದು ಮಗುವನ್ನು ರಕ್ಷಿಸುವ ಕೆಲಸ ಮಾಡಲಾಗುತ್ತಿದೆ..

ಇದನ್ನೂ ಓದಿ; ಯುಗಾದಿ ನಂತರ ಈ ಐದು ರಾಶಿಗಳವರಿಗೆ ಮುಟ್ಟಿದ್ದೆಲ್ಲಾ ಚಿನ್ನ..

16 ಅಡಿ ಆಳದಲ್ಲಿರುವ ಮಗು;

ಮಗು ತೋಟದಲ್ಲಿ ಆಟವಾಡುತ್ತಿತ್ತು.. ಈ ವೇಳೆ ಫೇಲ್ಯೂರ್‌ ಆಗಿದ್ದ ಬೋರ್‌ವೆಲ್‌ಗೆ ಬಿದ್ದುಬಿಟ್ಟಿದೆ.. ಮಗುವಿನ ತಲೆ ಉಲ್ಟಾ ಬಿದ್ದಿದೆ.. ಕಾಲುಗಳು ಮೇಲೆ ಕಾಣಿಸುತ್ತಿವೆ.. ಬೋರ್‌ವೆಲ್‌ಗೆ ಕ್ಯಾಮರಾ ಬಿಟ್ಟು ನೋಡಲಾಗಿದ್ದು, ಮಗು ಕಾಲು ಅಲ್ಲಾಡಿಸುತ್ತಿದೆ.. ಮಗುವಿಗೆ ಆಕ್ಸಿಜನ್‌ ರವಾನೆ ಮಾಡಲಾಗಿದೆ.. ಪೈಪ್‌ ಮೈಲಕ ಆಕ್ಸಿಜನ್‌ ನೀಡಲಾಗುತ್ತಿದೆ.. ಎರಡು ವರ್ಷದ ಸಾತ್ವಿಕ್‌ ಬೋರ್‌ವೆಲ್‌ನಲ್ಲಿ ಸಾವು ಬದುಕಿನ ನಡುವೆ ಒದ್ದಾಡುತ್ತಿದ್ದಾರೆ.. ಸಾತ್ವಿಕ್‌ ಬದುಕಿ ಬರಲಿ ಎಂದು ನಾಡಿನ ಜನ ಪ್ರಾರ್ಥನೆ ಮಾಡುತ್ತಿದ್ದಾರೆ..

ಇದನ್ನೂ ಓದಿ; ಪಾದ ನೋಡಿ ಮೈಯಲ್ಲಿರುವ ರೋಗ ಕಂಡು ಹಿಡಿಯಬಹುದು!

ಪೊಲೀಸರು, ಆರೋಗ್ಯ, ಅಗ್ನಿಶಾಮಕ ಸಿಬ್ಬಂದಿ ಹರಸಾಹಸ;

ರಾತ್ರಿಯಿಂದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ನಿದ್ರೆ ಇಲ್ಲದೆ ಕೆಲಸ ಮಾಡುತ್ತಿದ್ದಾರೆ.. ಮಗುವನ್ನು ಜೀವಂತವಾಗಿ ಮೇಲೆ ತರಲು ಪ್ರಯತ್ನ ಮಾಡಲಾಗುತ್ತಿದೆ.. ನಿರಂತರವಾಗಿ ಬೋರ್‌ವೆಲ್‌ಗೆ ಪೈಪ್‌ ಬಿಟ್ಟು ಮಗುವಿಗೆ ಆಕ್ಸಿಜನ್‌ ಪೂರೈಕೆ ಮಾಡಲಾಗುತ್ತಿದೆ.. ಜೊತೆಗೆ ಕ್ಯಾಮರಾ ಕೂಡಾ ಇಳಿಬಿಡಲಾಗಿದ್ದು, ಮಗುವಿನ ಚಲನವಲನಗಳ ಮೇಲೆ ನಿರಂತರವಾಗಿ ಗಮನ ಇಡಲಾಗಿದೆ..

ಇದನ್ನೂ ಓದಿ; ಯೋಗೇಶ್ವರ್‌ ಪುತ್ರಿಯನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲ್ಲ ಎಂದುಬಿಟ್ಟರಾ ಡಿ.ಕೆ.ಶಿವಕುಮಾರ್‌..?

ಬೋರ್‌ವೆಲ್‌ನ ಅಕ್ಕಪಕ್ಕ ಮಣ್ಣು ತೆರವು;

ಬೋರ್‌ವೆಲ್‌ನ ಸಣ್ಣ ರಂಧ್ರದಲ್ಲಿ ಮಗು ಸಿಲುಕಿದೆ.. ಅದರ ಬಳಿ ಹೋಗಬೇಕಾದರೆ ಅಕ್ಕ ಪಕ್ಕ ದೊಡ್ಡ ಗುಂಡಿ ತೆಗಯಬೇಕು.. ಸ್ವಲ್ಪ ಯಾಮಾರಿದರೂ ಮಗು ಮತ್ತಷ್ಟು ಒಳಗೆ ಹೋಗುವ ಭೀತಿ ಇರುತ್ತದೆ.. ಹೀಗಾಗಿ ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗುತ್ತದೆ.. ಅದರಲ್ಲೂ ರಾತ್ರಿಯಲ್ಲಿ ಮಣ್ಣು ತೆಗೆಯುವಾಗ ತುಂಬಾನೇ ಎಚ್ಚರಿಕೆಯಿಂದ ಇರಬೇಕು.. ಹೀಗಾಗಿ ಅಧಿಕಾರಿಗಳೆಲ್ಲಾ ನಿದ್ದೆಗೆಟ್ಟು ರಾತ್ರಿಯಿಡಿ ಕೆಲಸ ಮಾಡಿದ್ದಾರೆ.. ಕಾರ್ಯಚರಣೆಗೆ ಬಂಡೆ ಕಲ್ಲುಗಳು ಅಡ್ಡಿಯಾಗಿವೆ.. ಬಂಡೆ ಒಡೆಯುವಾಗ ಮಗುವಿನ ಮೇಲೆ ಮಣ್ಣು ಬಿದ್ದಿದೆ ಎಂದು ಹೇಳಲಾಗುತ್ತಿದೆ.. ಮಗುವಿಗೆ ಉಸಿರಾಟದ ತೊಂದರೆಯಾಗದಂತೆ ಸಿಬ್ಬಂದಿ ನಿರಂತರವಾಗಿ ಆಕ್ಸಿಜನ್​ ಪೂರೈಕೆ ಮಾಡುತ್ತಿದ್ದು, ಕ್ಯಾಮೆರಾ ಮೂಲಕ ನಿಗಾ ವಹಿಸಲಾಗಿದ್ದು, ಮಗುವಿನ ಚಲನವಲನ ಸೆರೆಯಾಗಿದೆ.

ಇದನ್ನೂ ಓದಿ; ಹೊಸ ಚುನಾವಣಾ ಸಮೀಕ್ಷೆ; ರಾಜ್ಯದಲ್ಲಿ ಕಾಂಗ್ರೆಸ್‌ ಗೆಲ್ಲೋದೆಷ್ಟು..?

 

Share Post