Politics

ಮೈಸೂರು ಕಾಂಗ್ರೆಸ್‌ ಅಭ್ಯರ್ಥಿ ಒಕ್ಕಲಿಗರಲ್ಲವೇ..?; ಪ್ರತಾಪ ಸಿಂಹ ಹೇಳೋದೇನು..?

ಮೈಸೂರು; ಕಾಂಗ್ರೆಸ್‌ ಅಭ್ಯರ್ಥಿ ಲಕ್ಷ್ಮಣ್‌ ನಾನು ಒಕ್ಕಲಿಗ ಎಂದು ಪ್ರಮಾಣ ಪತ್ರ ಹಿಡಿದುಕೊಂಡು ಬಂದಿದ್ದಾನೆ.. ಆ ಪ್ರಮಾಣ ಪತ್ರ ಯಾವುದು.. ಹಿಂದೆ ಆ ಕೆಎಸ್‌ಒಯುನಲ್ಲಿ ಸಿಗುತ್ತಿತ್ತಲ್ಲ ಆ ಪ್ರಮಾಣ ಪತ್ರಾನಾ ಎಂದು ಸಂಸದ ಪ್ರತಾಪ ಸಿಂಹ ಪ್ರಶ್ನೆ ಮಾಡಿದ್ದಾರೆ.. ಕಾಂಗ್ರೆಸ್‌ ಅಭ್ಯರ್ಥಿಯನ್ನು ಲೇವಡಿ ಮಾಡಲು ಹೋಗಿ, ಶತಮಾನದ ಇತಿಹಾಸವುಳ್ಳ ಕೆಎಸ್‌ಒಯು ಬಗ್ಗೆ ಲಘುವಾಗಿ ಮಾತನಾಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ಇದನ್ನೂ ಓದಿ; ಬರ್ತ್‌ ಡೇ ದಿನವೇ ಭೀಕರ ಅಪಘಾತ; ದೇವಸ್ಥಾನದ ಬಳಿಯೇ ತಾಯಿ, ಮಗು ದಾರುಣ ಸಾವು!

ಅಭ್ಯರ್ಥಿ ಬದಲಿಸಿ ಎಂದು ಕಾಂಗ್ರೆಸ್‌ಗೆ ಸಲಹೆ;

ಕಾಂಗ್ರೆಸ್‌ ಪಕ್ಷ ಲಕ್ಷ್ಮಣ್‌ ಅವರಿಗೆ ಟಿಕೆಟ್‌ ನೀಡಿದೆ.. ಆದ್ರೆ ಇಂದು ಮಾತನಾಡಿದ ಸಂಸದ ಪ್ರತಾಪ ಸಿಂಹ ಅವರು, ಕಾಂಗ್ರೆಸ್‌ ಎಂತಹ ವ್ಯಕ್ತಿಗೆ ಟಿಕೆಟ್‌ ಕೊಟ್ಟಿದೆ.. ಈಗಾಗಲಾದರೂ ಒಳ್ಳೆಯದ ಒಕ್ಕಲಿಗ ಅಭ್ಯರ್ಥಿಗೆ ಟಿಕೆಟ್‌ ಕೊಡಲಿ. ಇನ್ನೂ ಒಂದು ದಿನ ಬಾಕಿ ಇದೆ.. ನಾಳೆ ನಾಮಪತ್ರ ಸಲ್ಲಿಸೋದಕ್ಕೆ ಕೊನೆಯ ದಿನ.. ಈಗಲಾದರೂ ಅಭ್ಯರ್ಥಿಯನ್ನು ಬದಲಿಸಲಿ ಎಂದು ಪ್ರತಾಪ ಸಿಂಹ ಸಲಹೆ ಕೊಟ್ಟಿದ್ದಾರೆ..

ಇದನ್ನೂ ಓದಿ; Crime; ಹೈಕೋರ್ಟ್‌ನಲ್ಲೇ ಕತ್ತು ಕುಯ್ದುಕೊಂಡ ವ್ಯಕ್ತಿ; ಮುಂದೇನಾಯ್ತು..?

ಲಕ್ಷ್ಮಣ್‌ ಟೀಕಿಸುವ ಭರದಲ್ಲಿ ಕೆಎಸ್‌ಒಯು ಬಗ್ಗೆ ಮಾತು;

ಲಕ್ಷ್ಮಣ್‌ ಅವರು ನಿರಂತರವಾಗಿ ಪ್ರತಾಪ ಸಿಂಹ ಅವರ ಬಗ್ಗೆ ಮಾತನಾಡುತ್ತಿದ್ದರು.. ಅವರ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದರು.. ಇದರ ಜೊತೆಗೆ ಕುಮಾರಸ್ವಾಮಿ ಹಾಗೂ ದೇವೇಗೌಡರ ವಿರುದ್ಧ ಬೈಯ್ಯುತ್ತಿದ್ದರು.. ಇದನ್ನೇ ಪ್ರಸ್ತಾಪ ಮಾಡಿದ ಪ್ರತಾಪ ಸಿಂಹ ಅವರು, ಲಕ್ಷ್ಮಣ್‌ ಅವರು ನಮ್ಮನ್ನೆಲ್ಲಾ ಬೈಯ್ಯುತ್ತಿದ್ದರು.. ಅವರು ಯಾವಾಗ ಒಕ್ಕಲಿಗರಾದರು.. ಈಗ ಸರ್ಟಿಫಿಕೇಟ್‌ ಹಿಡಿದುಕೊಂಡು ಬಂದುಬಿಟ್ಟಿದ್ದಾರೆ.. ಜನ ಈಗಲೇ ಮಾತನಾಡುತ್ತಿದ್ದಾರೆ.. ಆ ವ್ಯಕ್ತಿ ಸೋತುಬಿಟ್ಟಿದ್ದಾನೆ ಅಂತ.. ಜನ ಆಡಿಕೊಳ್ಳದಂತಾಗಲು ಅಭ್ಯರ್ಥಿ ಬದಲಾವಣೆ ಮಾಡಿ, ಸೂಕ್ತ ಒಕ್ಕಲಿಗ ಅಭ್ಯರ್ಥಿಯನ್ನು ಹಾಕಿ ಎಂದು ಕಾಂಗ್ರೆಸ್‌ ನಾಯಕರಿಗೆ ಸಲಹೆ ಕೊಟ್ಟಿದ್ದಾರೆ..

ಇದನ್ನೂ ಓದಿ; ಸಚಿವ ಸುಧಾಕರ್‌, ಕೃಷ್ಣಬೈರೇಗೌಡ ಇದಾರೆ ಅಂತ ಮೆರೆದರೆ ಅಷ್ಟೇ; ಡಿಕೆಶಿ ಹೇಳಿದ್ದು ಯಾರಿಗೆ..?

ಒಕ್ಕಲಿಗ ಎಂದರೆ ನೇರವಂತಿಕೆ ಗಡುಸು ಸ್ವಭಾವ ಇರಬೇಕು;

ಸಂಸದ ಪ್ರತಾಪ ಸಿಂಹ ಹೇಳುವ ಪ್ರಕಾರ ಒಕ್ಕಲಿಗ ಎಂದರೆ ನೇರವಂತಿಕೆ ಹಾಗೂ ಗಡುಸು ಸ್ವಭಾವ ಇರಬೇಕು.. ಆದ್ರೆ ಲಕ್ಷ್ಮಣ್‌ ಬಳಿ ಅದ್ಯಾವುವೂ ಇಲ್ಲ ಎಂದು ಪ್ರತಾಪ ಸಿಂಹ ಹೇಳಿದ್ದಾರೆ.. ಒಕ್ಕಲಿಗ ನಾಯಕರನ್ನು ಲಕ್ಷ್ಮಣ್‌ ಇಷ್ಟು ದಿನ ತುಚ್ಛವಾಗಿ ಮಾತನಾಡುತ್ತಿದ್ದರು. ಈಗ ನಾನೂ ಒಕ್ಕಲಿಗ ಎನ್ನುತ್ತಿದ್ದಾರೆ.. ಅವರ ಬಳಿ ಯಾವ ನೇರವಂತಿಕೆಯೂ ಇಲ್ಲ ಎಂದು ಪ್ರತಾಪ ಸಿಂಹ ಹೇಳಿದ್ದಾರೆ…

ಇದನ್ನೂ ಓದಿ; ಮಹಿಳೆ ವಿರುದ್ಧ ಸೋತಿದ್ದ ಶ್ರೀಕಂಠದತ್ತ ಒಡೆಯರ್‌; ಮೈಸೂರು ಗೆಲ್ತಾರಾ ಲಕ್ಷ್ಮಣ್..?

ಕಾಂಗ್ರೆಸ್‌ ಅಭ್ಯರ್ಥಿ ಈಗಾಗಲೇ ಸೋತಿದ್ದಾರೆ;

ಕಾಂಗ್ರೆಸ್‌ನವರಿಗೆ ಒಬ್ಬ ಸೂಕ್ತ ಅಭ್ಯರ್ಥಿಯನ್ನು ಹಾಕಲು ಆಗಲಿಲ್ಲ.. ಜನ ಈಗಾಗಲೇ ಕಾಂಗ್ರೆಸ್‌ ಅಭ್ಯರ್ಥಿ ಸೋತಿದ್ದಾರೆ ಎಂದು ಲೇವಡಿ ಮಾಡಿಕೊಂಡು ಓಡಾಡುತ್ತಿದ್ದಾರೆ.. ಕಾಂಗ್ರೆಸ್‌ ನವರು ನೋಡಿದರೆ ಒಕ್ಕಲಿಗ ಕಾರ್ಡ್‌ ಪ್ಲೇ ಮಾಡುತ್ತಿದ್ದಾರೆ.. ಮೊದಲು ಕಾಂಗ್ರೆಸ್‌ ನವರು ಸೂಕ್ತ ಹಾಗೂ ಬಲಿಷ್ಠ ಒಕ್ಕಲಿಗ ನಾಯಕನನ್ನು ಕಣಕ್ಕಿಳಿಸಬೇಕು.. ಅನಂತರ ಒಕ್ಕಲಿಗ ಕಾರ್ಡ್‌ ಪ್ಲೇ ಮಾಡಬೇಕು ಎಂದೂ ಸಂಸದ ಪ್ರತಾಪ ಸಿಂಹ ಹೇಳಿದ್ದಾರೆ..

ಇದನ್ನೂ ಓದಿ; ದೇವೇಗೌಡರು, ಕುಮಾರಸ್ವಾಮಿ ಸೋತಿದ್ದ ಕ್ಷೇತ್ರದಲ್ಲಿ ಡಾ.ಮಂಜುನಾಥ್‌ ಗೆಲ್ತಾರಾ..?

Share Post