30ಕ್ಕೂ ಹೆಚ್ಚು ನಾಯಕರಿಗೆ ಕಾಂಗ್ರೆಸ್ ಗಾಳ; ಮೈಸೂರಲ್ಲಿ ಆಪರೇಷನ್ ಹಸ್ತ ಜೋರು!
ಮೈಸೂರು; ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಆಪರೇಷನ್ ಹಸ್ತ ಜೋರಾಗಿ ನಡೆಯುತ್ತಿದೆ… ಹೇಗಾದರೂ ಮಾಡಿ ಮೈಸೂರು-ಕೊಡಗು ಕ್ಷೇತ್ರವನ್ನು ಗೆದ್ದುಕೊಳ್ಳಬೇಕೆಂದು ಪಣ ತೊಟ್ಟಿರುವ ಸಿಎಂ ಸಿದ್ದರಾಮಯ್ಯ, ಖುದ್ದು ಆಪರೇಷನ್ ಹಸ್ತ ನಡೆಸುತ್ತಿದ್ದಾರೆ.. ಕೆಲ ದಿನಗಳ ಹಿಂದೆ ಹಲವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯಲಾಗಿತ್ತು.. ಇದೀಗ ಮತ್ತೆ 30 ಬಿಜೆಪಿ ನಾಯಕರನ್ನು ಕಾಂಗ್ರೆಸ್ ಸೆಳೆಯಲಾಗಿದೆ..
ಇದನ್ನೂ ಓದಿ; ಅಲ್ಲಿ ಆಪರೇಷನ್ ಹಸ್ತ.. ಇಲ್ಲಿ ಆಪರೇಷನ್ ಜೆಡಿಎಸ್; ಯಾರು ಯಾವ ಪಕ್ಷಕ್ಕೆ ಹೋದರು..?
30 ಬಿಜೆಪಿ ಮುಖಂಡರು ಇಂದು ಕಾಂಗ್ರೆಸ್ ಸೇರ್ಪಡೆ;
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಹಾಗೂ ಚಾಮರಾಜನಗರ ಕ್ಷೇತ್ರಗಳಲ್ಲಿ ಗೆಲ್ಲೋದು ಸಿದ್ದರಾಮಯ್ಯ ಅವರಿಗೆ ಪ್ರತಿಷ್ಠೆಯ ಪ್ರಶ್ನೆ.. ಯಾಕಂದ್ರೆ, ರಾಜ್ಯದ ಸಿಎಂ ಆಗಿದ್ದುಕೊಂಡು ತವರು ಕ್ಷೇತ್ರಗಳಲ್ಲಿ ಗೆಲ್ಲದೇ ಹೋದರೆ ಸಿಎಂಗೆ ಅವಮಾನವಾಗೋದು ಗ್ಯಾರೆಂಟಿ.. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಭರ್ಜರಿ ಆಪರೇಷನ್ ಹಸ್ತಕ್ಕೆ ಇಳಿದಿದ್ದಾರೆ.. ಯಾರೇ ಕಾಂಗ್ರೆಸ್ ಪಕ್ಷಕ್ಕೆ ಬಂದರೂ ಬೇಡ ಎನ್ನದೇ ಎಲ್ಲರನ್ನೂ ಪಕ್ಷಕ್ಕೆ ಬರ ಮಾಡಿಕೊಳ್ಳಲಾಗುತ್ತಿದೆ.. ಒಂದಷ್ಟು ಮತಗಳನ್ನು ತಂದುಕೊಡುವ ಶಕ್ತಿ ಹೊಂದಿರುವ ಮುಖಂಡರನ್ನು ಸಂಪರ್ಕ ಮಾಡಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ.. ಇಂದು ಹೀಗೆ 30ಕ್ಕೂ ಹೆಚ್ಚು ಬಿಜೆಪಿ ಮುಖಂಡರನ್ನು ಕಾಂಗ್ರೆಸ್ಗೆ ಬರಮಾಡಿಕೊಳ್ಳಲಾಗುತ್ತಿದೆ..
ಇದನ್ನೂ ಓದಿ; ಬಿಸಿಲಲ್ಲಿ ನೀವು ಮಾಡುವ ಮಿಸ್ಟೇಕ್ ಕ್ಯಾನ್ಸರ್ಗೆ ಕಾರಣವಾಗುತ್ತೆ ಹುಷಾರ್!
ಸಂಸದ ಶ್ರೀನಿವಾಸ ಪ್ರಸಾದ್ ಸಹೋದರನಿಗೇ ಗಾಳ;
ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದ ವಿ.ಶ್ರೀನಿವಾಸಪ್ರಸಾದ್ ಸದ್ಯಕ್ಕೆ ಬಿಜೆಪಿಯಲ್ಲಿದ್ದಾರೆ.. ಅವರು ಈ ಹಿಂದೆ ಜನತಾ ಪರಿವಾರ ಹಾಗೂ ಕಾಂಗ್ರೆಸ್ನಲ್ಲಿದ್ದವರು.. ಸಿದ್ದರಾಮಯ್ಯ ಅವರ ಜೊತೆ ಜಗಳ ಮಾಡಿಕೊಂಡು ಅವರು ಬಿಜೆಪಿಗೆ ಹೋಗಿದ್ದರು.. ವಯಸ್ಸಿನ ಕಾರಣದಿಂದ ಅವರು ಈ ಬಾರಿ ಚುನಾವಣಾ ಅಖಾಡಕ್ಕಿಳಿದಿಲ್ಲ.. ಆದ್ರೆ ಅವರು ಹೇಳಿದವರಿಗೆ ಟಿಕೆಟ್ ಕೊಟ್ಟಿಲ್ಲ ಅನ್ನೋದು ಬೇಸರ ಶ್ರೀನಿವಾಸ ಪ್ರಸಾದ್ ಅವರಿಗಿದೆ.. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕಾಂಗ್ರೆಸ್ ನಾಯಕರು, ಶ್ರೀನಿವಾಸ ಪ್ರಸಾದ್ ಕುಟುಂಬದ ಸದಸ್ಯರನ್ನು ಸೆಳೆಯುತ್ತಿದೆ.. ಶ್ರೀನಿವಾಸ ಪ್ರಸಾದ್ ಅವರನ್ನು ಕೂಡಾ ಕೆಲ ಕಾಂಗ್ರೆಸ್ ನಾಯಕರು ಸಂಪರ್ಕ ಮಾಡಿ ಬೆಂಬಲ ಕೋರಿದ್ದಾರೆ.. ಈ ನಡುವೆ ಶ್ರೀನಿವಾಸ ಪ್ರಸಾದ್ ಸಹೋದರ ವಿ.ರಾಮಸ್ವಾಮಿ ಸೇರಿ ಹಲವು ಮುಖಂಡರು ಇಂದು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ..
ಇದನ್ನೂ ಓದಿ; ಬೆಳ್ಳುಳ್ಳಿ ರಸಂ ತಿನ್ನಿ; ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ
ಇಂದು ಮಧ್ಯಾಹ್ನ 3 ಗಂಟೆಗೆ ಸೇರ್ಪಡೆ ಕಾರ್ಯಕ್ರಮ;
ಇಂದು ಮಧ್ಯಾಹ್ನ 3 ಗಂಟೆಗೆ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.. ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಸಹೋದರ ವಿ.ರಾಮಸ್ವಾಮಿ ಹಾಗೂ ಅವರ ಪುತ್ರ ಭರತ್ ರಾಮಸ್ವಾಮಿ ಸೇರಿ 30 ಬಿಜೆಪಿ ಮುಖಂಡರು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರಲಿದ್ದಾರೆ.. ಕೆಲ ದಿನಗಳ ಹಿಂದೆ ಮೂರು ದಿನಗಳ ಕಾಲ ಎಚ್ಡಿ ಕೋಟೆ ಬಳಿ ಖಾಸಗಿ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದ ಸಿದ್ದರಾಮಯ್ಯ ಅವರು ಆಪರೇಷನ್ ಹಸ್ತಕ್ಕೆ ಕೈಹಾಕಿದ್ದರು.. ಅದಾದ ನಂತರವೂ ಕೂಡಾ ಅವರು ಬಿಜೆಪಿ, ಜೆಡಿಎಸ್ ನಾಯಕರಿಗೆ ಗಾಳ ಹಾಕುತ್ತಿದ್ದಾರೆ.. ಲಕ್ಷ್ಮಣ್ ಗೆಲುವು ನನ್ನ ಗೆಲುವು ಎಂದು ಹೇಳುತ್ತಿರುವ ಸಿಎಂ ಸಿದ್ದರಾಮಯ್ಯ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರವನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡಿದ್ದಾರೆ..
ಇದನ್ನೂ ಓದಿ; ಕಣ್ಣು ಮಂಜಾಗುತ್ತಿದೆಯಾ..?; ಹಾಗಾದರೆ ಈ ಟ್ರಿಕ್ಸ್ ಬಳಸಿ, ಕಣ್ಣುಗಳನ್ನು ಕಾಪಾಡಿ!
ವರುಣಾದಲ್ಲಿ 60 ಸಾವಿರ ಲೀಡ್ ಕೇಳುತ್ತಿರುವ ಸಿಎಂ;
ಸಿಎಂ ಸಿದ್ದರಾಮಯ್ಯ ಅವರಿಗೆ ವರುಣಾ ಕ್ಷೇತ್ರ ಅತ್ಯಂತ ಅದೃಷ್ಟದ ಕ್ಷೇತ್ರ.. ಈ ಕ್ಷೇತ್ರದಲ್ಲಿ ಗೆದ್ದಾಗಲೇ ಎರಡು ಬಾರಿ ಸಿಎಂ ಆಗಿರೋದು.. ಹೀಗಾಗಿ, ಅವರು ಇದೇ ಅಸ್ತ್ರವನ್ನು ವರುಣಾ ಕ್ಷೇತ್ರದ ಜನರ ಮುಂದೆ ಪ್ರಯೋಗ ಮಾಡುತ್ತಿದ್ದಾರೆ.. ವರುಣಾ ನನ್ನ ಅದೃಷ್ಟದ ಕ್ಷೇತ್ರ.. ಈ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷಕ್ಕೆ 60 ಸಾವಿರ ಲೀಡ್ ಬೇಕು ಎಂದು ಕೇಳುತ್ತಿದ್ದಾರೆ.. ನಿನ್ನೆ ವರುಣಾ ಕ್ಷೇತ್ರದಲ್ಲಿ ಅವರು ಸಭೆ ನಡೆಸಿದ್ದು, ನಾನು ಸಿಎಂ ಆಗಿ ಮುಂದುವರೆಯಬೇಕಾದ್ರೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಕೇಳಿದ್ದಾರೆ.. ಇನ್ನು ಇವತ್ತು ಚಾಮರಾಜ ಹಾಗೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಭೆಗಳನ್ನು ಮಾಡಲಿದ್ದಾರೆ.. ಚಾಮರಾಜ ವಿಧಾನಸಭ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುವ ಬಹಿರಂಗ ಪ್ರಚಾರ ಸಭೆಯಲ್ಲಿ ಭಾಗಿಯಾಗಲಿದ್ದಾರೆ.. ಅನಂತರ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿದುಬಂದಿದೆ..
ಇದನ್ನೂ ಓದಿ; ಈ ತರಕಾರಿ ನೀರು ಕುಡಿದರೆ ಸ್ಲಿಮ್ ಆಗಬಹುದು!