ವಿದ್ಯುತ್ ಬಳಕೆದಾರರಿಗೆ ಗುಡ್ ನ್ಯೂಸ್; ಇಂದಿನಿಂದ ದರ ಕಡಿತ!
ಬೆಂಗಳೂರು; ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ವಿದ್ಯುತ್ ಬಳಕೆ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದೆ.. ಅದ್ರಲ್ಲೂ ಕೂಡಾ 100 ಯೂನಿಟ್ ಮೇಲೆ ಬಳಕೆ ಮಾಡುವ ಗ್ರಾಹಕರಿಗೆ ಇದು ಗುಡ್ ನ್ಯೂಸ್ ಯಾಕಂದ್ರೆ, 100 ಯೂನಿಟ್ ನಂತರ ಬಳಕೆಯಾಗುವ ಯೂನಿಟ್ ದರದಲ್ಲಿ ಕಡಿತ ಮಾಡಲಾಗಿದೆ.. ಇಂದಿನಿಂದಲೇ ಹೊಸ ದರ ಜಾರಿಗೆ ಬಂದಿದೆ..
ಇದನ್ನೂ ಓದಿ; PF ಹೊಸ ರೂಲ್ಸ್; ಉದ್ಯೋಗಿಗಳಿಗೆ ಇದು ಗುಡ್ ನ್ಯೂಸ್
ಯೂನಿಟ್‌ಗೆ 1.10 ಪೈಸೆ ದರ ಕಡಿತ;
ಹೌದು, ಲೋಕಸಭಾ ಚುನಾವಣೆ ಸಮಯದಲ್ಲಿ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಲಾಗಿದೆ.. ಇಂದಿನಿಂದ ಹೊಸ ಹಣಕಾಸು ವರ್ಷ ಪ್ರಾರಂಭವಾಗಿದ್ದು, ಮೊದಲ ದಿನವೇ ವಿದ್ಯುತ್ ಬಳಕೆದಾರರಿಗೆ ಖುಷಿ ಸುದ್ದಿ ಸಿಕ್ಕಿದೆ.. ಇಂದಿನಿಂದ ಕೆಇಆರ್ಸಿ ನೂತನ ವಿದ್ಯುತ್ ದರ ಜಾರಿಗೆ ತಂದಿದೆ.. 100 ಯುನಿಟ್ ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡುವ ಗ್ರಾಹಕರಿಗೆ ಯುನಿಟ್ ಗೆ 1 ರೂಪಾಯಿ 10 ಪೈಸೆ ಕಡಿತ ಮಾಡಿರುವುದಾಗಿ ತಿಳಿದುಬಂದಿದೆ..
ಇದನ್ನೂ ಓದಿ; ಬೆಳ್ಳುಳ್ಳಿ ರಸಂ ತಿನ್ನಿ; ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ
15 ವರ್ಷಗಳ ಬಳಿಕ ಮೊದಲ ಬಾರಿಗೆ ದರ ಇಳಿಕೆ;
15 ವರ್ಷಗಳ ಹಿಂದೆ ವಿದ್ಯುತ್ ದರ ಇಳಿಕೆ ಮಾಡಲಾಗಿತ್ತು.. ಅನಂತರ ಏರಿಕೆ ಮಾಡುತ್ತಲೇ ಬರಲಾಗುತ್ತಿತ್ತು.. ಆದ್ರೆ ಈಗ ದರ ಇಳಿಕೆ ಮಾಡಿ, ಗ್ರಾಹಕರಿಗೆ ಖುಷಿ ತರಿಸಲಾಗಿದೆ.. 2024-25ನೇ ಸಾಲಿಗೆ ಈ ಹೊಸ ದರ ಅನ್ವಯವಾಗುತ್ತದೆ ಎಂದು ಕೆಇಆರ್ಸಿ ಆದೇಶ ಹೊರಡಿಸಿದೆ. ರಾಜ್ಯದ ಎಲ್ಲಾ ಎಸ್ಕಾಂಗಳಲ್ಲೂ ಏಕರೂಪದ ದರ ಜಾರಿಯಲ್ಲಿದೆ. ಹೀಗಾಗಿ ರಾಜ್ಯದ ಎಲ್ಲಾ ಕಡೆ ಈ ದರ ಅನ್ವಯವಾಗಲಿದೆ.. ಮುಂದಿನ ತಿಂಗಳು ಬರುವ ಬಿಲ್ ನಲ್ಲಿ ಪರಿಷ್ಕರಣೆಯ ದರದಂತೆ ಬಿಲ್ ಬರಲಿದೆ..
ಇದನ್ನೂ ಓದಿ; 12 ಕ್ಷೇತ್ರಗಳಲ್ಲಿ ರಾಜವಂಶಸ್ಥರನ್ನು ಕಣಕ್ಕಿಳಿಸಿದ ಬಿಜೆಪಿ; ಯಾರು ಅವರು..?
7 ರೂಪಾಯಿಯಿಂದ 5.90 ರೂಪಾಯಿಗೆ ಇಳಿಕೆ;
ಹಾಲಿ ದರ ಪಟ್ಟಿ ನೋಡೋದಾದರೆ 0-100 ಯೂನಿಟ್ ವರೆಗಿನ ಬಳಕೆ ಯೂನಿಟ್‌ಗೆ 4.75 ರೂಪಾಯಿ ಇತ್ತು.. ಅದು ಹಾಗೆಯೇ ಮುಂದುವರೆಯಲಿದೆ.. ಆದ್ರೆ 100 ಯೂನಿಟ್ ಮೇಲಿನ ವಿದ್ಯುತ್ ಬಳಕೆಗೆ ಪ್ರತಿ ಯೂನಿಟ್‌ಗೆ 7 ರೂಪಾಯಿ ಇತ್ತು.. ಇದರಲ್ಲಿ ಈಗ 1 ರೂಪಾಯಿ 10 ಪೈಸೆ ಇಳಿಕೆ ಮಾಡಲಾಗಿದೆ.. ಹೀಗಾಗಿ ನೂರು ಯೂನಿಟ್ ಮೇಲಿನ ಬಳಕೆಯ ಪ್ರತಿ ಯೂನಿಟ್ ವಿದ್ಯುತ್ ದರ ಈಗ 5 ರೂಪಾಯಿ 90 ಪೈಸೆ ಆಗಲಿದೆ..
ಇದನ್ನೂ ಓದಿ; ಠಾಣೆಗೇ ನುಗ್ಗಿದ ಮಹಿಳೆ; ಎಎಸ್‌ಐಗೆ ಬಾಟಲಿಯಿಂದ ಇರಿತ!
ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್;
ಇನ್ನು ನೂರು ಯೂನಿಟ್‌ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡುತ್ತಿರುವ ಬಹುತೇಕ ಎಲ್ಲರಿಗೂ ಉಚಿತವಾಗಿ ವಿದ್ಯುತ್ ಸಿಗುತ್ತಿದೆ.. ಇನ್ನು ಹಿಂದಿನ ವರ್ಷದ ವಿದ್ಯುತ್ ಬಳಕೆ ಲೆಕ್ಕಾಚಾರ ತೆಗೆದುಕೊಂಡಿರುವುದರಿಂದ ಕೆಲವರಿಗೆ ನೂರು ಯೂನಿಟ್ ಮೇಲೆ ಬಳಕೆ ಮಾಡುವವರಿಗೆ ಹೆಚ್ಚುವರಿ ದರ ಬರುತ್ತಿದೆ.. ಇಂತಹವರಿಗೆ ಈ ಹೊಸ ದರ ಖುಷಿ ಕೊಡಲಿದೆ.
ಇದನ್ನೂ ಓದಿ; ವಿಜಯಪುರದಲ್ಲಿ ಅಕಾಲಿಕ ಮಳೆ; ದ್ರಾಕ್ಷಿ, ಬಾಳೆ ತೋಟ ನಾಶ!