ಕೇಕ್ನಲ್ಲೇ ಇದ್ದ ಯಮರಾಯ; ಹುಟ್ಟಹಬ್ಬದಂದೇ ಬಾಲಕಿ ಕೇಕ್ಗೆ ಬಲಿ!
ಚಂಡೀಗಢ; ಆನ್ಲೈನ್ ಮೂಲಕ ಆಹಾರ ಪದಾರ್ಥಗಳನ್ನು ತರಿಸಿಕೊಳ್ಳುವವರು ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ಇದೆ.. ಇಲ್ಲದೆ ಹೋದರೆ ಪ್ರಾಣವನ್ನೇ ಕಳೆದುಕೊಳ್ಳಬೇಕಾದ ಅಪಾಯವಿದೆ.. ಇದೇ ರೀತಿ ಆನ್ಲೈನ್ನಲ್ಲಿ ಆರ್ಡರ್ ಮಾಡಿದ ತರಿಸಿದ್ದ ಕೇಕ್ ತಿಂದು ಹುಟ್ಟುಹಬ್ಬದ ದಿನವೇ ಬಾಲಕಿಯೊಬ್ಬಳು ಸಾವನ್ನಪ್ಪಿದ್ದಾಳೆ..
ಕೇಕ್ ತಿಂದು ಹತ್ತು ವರ್ಷ ಬಾಲಕಿ ಸಾವು;
ಪಂಜಾಬ್ನ ಪಟಿಯಾಲ ನಗರದ ಮನ್ವಿ ಎಂಬ ಹತ್ತು ವರ್ಷದ ಬಾಲಕಿಗೆ ನಿನ್ನೆ ಹುಟ್ಟುಹಬ್ಬವಿತ್ತು.. ಹೀಗಾಗಿ ಆನ್ಲೈನ್ ಮೂಲಕ ಕೇಕ್ ಆರ್ಡರ್ ಮಾಡಲಾಗಿತ್ತು. ಆ ಕೇಕ್ ತಿಂದ ಬಾಲಕಿಗೆ ತಡರಾತ್ರಿಯಲ್ಲಿ ವಾಂತಿ ಶುರುವಾಗಿದೆ.. ಆಕೆಯ ಸಹೋದರಿಗೂ ಇದೇ ಸಮಸ್ಯೆಯಾಗಿದೆ.. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಪೋಷಕರು ಕೂಡಲೇ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ.. ಆದ್ರೆ ಮನ್ವಿ ಸಾವನ್ನಪ್ಪಿದ್ದಾಳೆ.. ಸಹೋದರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಪೋಷಕರು ಕೂಡಾ ಅಸ್ವಸ್ಥ;
ಮಕ್ಕಳು ಅಲ್ಲದೆ ಮನೆಯಲ್ಲಿದ್ದ ಹಿರಿಯರಿಗೆ ಕೂಡಾ ಇದೇ ಸಮಸ್ಯೆ ಆಗಿದೆ.. ಆದ್ರೆ ಹಿರಿಯರಾದ್ದರಿಂದ ತಡೆಯುವ ಶಕ್ತಿ ಅವರಿಗಿದ್ದು, ಕೊಂಚ ಚೇತರಿಸಿಕೊಳ್ಳುತ್ತಿದ್ದಾರೆ.. ಚಿಕಿತ್ಸೆಪಡೆದು ಮನೆಗೆ ಬಂದಿದ್ದಾರೆ.. ಒಬ್ಬ ಬಾಲಕಿ ಮಾತ್ರ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆಕೆ ಕೂಡಾ ತೀವ್ರ ಅಸ್ವಸ್ಥಳಾಗಿದ್ದಾಳೆಂದು ತಿಳಿದುಬಂದಿದೆ.
ಕೇಕ್ ಡೆಲಿವರಿ ಮಾಡೇ ಇಲ್ಲ ಎನ್ನುವ ಅಂಗಡಿಯವರು;
ಇನ್ನು ಆನ್ಲೈನ್ ಮೂಲಕ ಕೇಕ್ ಆರ್ಡರ್ ಮಾಡಲಾಗಿತ್ತು… ಯಾವ ಅಂಗಡಿಯಿಂದ ಆರ್ಡರ್ ಮಾಡಲಾಗಿತ್ತೋ ಆ ಅಂಗಡಿಯವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.. ಆದ್ರೆ ಅಂಗಡಿಯವರು ನಾವಿನ್ನೂ ಕೇಕ್ ಡೆಲಿವರಿ ಮಾಡಿಯೇ ಇಲ್ಲ ಎಂದು ಹೇಳುತ್ತಿದ್ದಾರೆ.. ಹೀಗಾಗಿ, ಆ ಕೇಕ್ ಎಲ್ಲಿಂದ ಬಂತು ಎಂಬುದರ ಬಗ್ಗೆ ಅನುಮಾನ ಮೂಡುತ್ತಿದೆ.. ಯಾರಾದರೂ ಆಗದವರು ವಿಷದ ಕೇಕ್ ತಂದುಕೊಟ್ಟರೇ, ಅಥವಾ ಮನೆಯವರೇ ಆತ್ಮಹತ್ಯೆ ಮಾಡಿಕೊಳ್ಳಲೆಂದು ಹೀಗೆ ಮಾಡಿದರೆ ಎಂಬ ಅನುಮಾನ ಕಾಡುತ್ತಿದೆ.. ವಿಚಾರಣೆ ನಡೆದ ಬಳಿಕವಷ್ಟೇ ನಿಜ ವಿಷಯ ತಿಳಿಯೋದು.