ರಾಜ್ಯಸಭೆಗೆ ಪಂಜಾಬ್‌ನಿಂದ ಹರ್ಭಜನ್ ಸಿಂಗ್ ಅಭ್ಯರ್ಥಿ: AAPಯಿಂದ ಘೋಷಣೆ
ದೆಹಲಿ: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಆಮ್ ಆದ್ಮಿ ಪಕ್ಷವು ತನ್ನ ಪಂಜಾಬ್ ಅಭ್ಯರ್ಥಿಯಾಗಿ ಹರ್ಭಜನ್ ಸಿಂಗ್‌ರನ್ನು ಆಯ್ಕೆ ಮಾಡಿದೆ. ಎಎಪಿ ಈ ತಿಂಗಳ ಅಂತ್ಯದ ವೇಳೆಗೆ ಐದು ಸ್ಥಾನಗಳನ್ನು ಸಾಧಿಸಲು ಗುರಿಯಾಗಿಸಿಕೊಂಡಿದೆ ಎನ್ನಲಾಗಿದೆ.
ಭಗವಂತ್ ಮಾನ್ ನೇತೃತ್ವದಲ್ಲಿ ರಚನೆಯಾದ ಪಂಜಾಬ್‌ನ ಹೊಸ ಸರ್ಕಾರದಲ್ಲಿ, ಹರ್ಭಜನ್ ಸಿಂಗ್‌ಗೆ ಕ್ರೀಡಾ ವಿಶ್ವವಿದ್ಯಾಲಯದ ಮೇಲೆ ಸಂಪೂರ್ಣ ಅಧಿಕಾರವನ್ನು ನೀಡಲು ಸಿದ್ಧರಾಗಿದ್ದಾರೆ.
ಫೆಬ್ರವರಿಯಲ್ಲಿ ಪಂಜಾಬ್ ಚುನಾವಣೆಗೂ ಮುನ್ನ ಹರ್ಭಜನ್ ಸಿಂಗ್ ಬಿಜೆಪಿ ಸೇರಿದ್ದರು ಎಂಬ ವದಂತಿ ಹರಿದಾಡಿತ್ತು. ಹರ್ಭಜನ್ ಸಿಂಗ್ ಮತ್ತು ಯುವರಾಜ್ ಸಿಂಗ್ ಅವರ ಪರವಾಗಿದ್ದಾರೆ ಎಂದು ಹಿರಿಯ ನಾಯಕರೊಬ್ಬರು ಹೇಳಿದು ಜೊತೆಗೆ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರೊಂದಿಗೆ ಫೋಟೋ ತೆಗೆಸಿಕೊಂಡರು. ಆ ಸಂದರ್ಭದಲ್ಲಿ ಕಾಂಗ್ರೆಸ್ ಸೇರ್ತಾರೆ ಎಂಬ ಮಾತುಗಳು ಹರಿದಾಡ್ತಿದ್ದವು. ತದನಂತರ ಈ ಎಲ್ಲಾ ವದಂತಿಗಳನ್ನು ಹರ್ಭಜನ್ ಸಿಂಗ್ ತಳ್ಳಿಹಾಕಿದ್ರು. ಇದೀಗ ಆಮ್ ಆದ್ಮಿ ಪಕ್ಷ ಅಧಿಕೃತವಾಗಿ ಮಾಡಿರುವ ಘೋಷಣೆ ಆ ಎಲ್ಲಾ ವದಂತಿಗಳಿಗೆ ಬ್ರೇಕ್ ಹಾಕಿದೆ.