Politics

ಕೊನೆಗೂ ಟ್ರ್ಯಾಕ್‌ಗೆ ಬಂದ ಬಿಜೆಪಿ-ಜೆಡಿಎಸ್‌ ಮೈತ್ರಿ; ಬೃಹತ್‌ ಸಮಾವೇಶಕ್ಕೆ ಮೆಗಾ ಪ್ಲ್ಯಾನ್‌

ಬೆಂಗಳೂರು; ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಮಾಡಿಕೊಂಡಿದೆ.. ದೆಹಲಿಯಲ್ಲಿ ಎರಡೂ ಪಕ್ಷದ ನಾಯಕರು ಕೂತು ಮೈತ್ರಿ ಫೈನಲ್‌ ಮಾಡಿಕೊಂಡಿದ್ದು ಬಿಟ್ಟರೆ, ಮತ್ತೆ ಎಂದೂ ಅವರು ರಾಜ್ಯದಲ್ಲಿ ಒಂದಾಗಿ ಹೋಗಿದ್ದಿಲ್ಲ.. ಪ್ರಧಾನಿ ಮೋದಿಯವರು ಎರಡು ಬಾರಿ ರಾಜ್ಯಕ್ಕೆ ಬಂದಾಗಲೂ, ಜೆಡಿಎಸ್‌ ನಾಯಕರನ್ನು ಕರೆದಿರಲಿಲ್ಲ.. ಇತ್ತ ಜೆಡಿಎಸ್‌ ಸಭೆಗಳಿಗೂ ಬಿಜೆಪಿ ನಾಯಕರನ್ನು ಕರೆದಿರಲಿಲ್ಲ.. ಆದ್ರೆ ಕೊನೆಗೂ ಈಗ ಎರಡೂ ಪಕ್ಷಗಳು ಟ್ರ್ಯಾಕ್‌ಗೆ ಬಂದಿವೆ… ಎರಡೂ ಪಕ್ಷದ ನಾಯಕರು ಸೇರಿ ಇಂದು ಸಮನ್ವಯ ಸಮಿತಿ ಸಭೆ ನಡೆಸಿದ್ದಾರೆ..

ಇದನ್ನೂ ಓದಿ; ಕಾಂಗ್ರೆಸ್‌ ಪಕ್ಷ 1700 ಕೋಟಿ ತೆರಿಗೆ ಕಟ್ಟಿಲ್ಲವಂತೆ!; ನೋಟಿಸ್‌ ಜಾರಿ!

ಎಲ್ಲರೂ ಸೇರಿ ಒಗ್ಗಟ್ಟು ಪ್ರದರ್ಶನ;

ಮೈತ್ರಿ ಮಾಡಿಕೊಂಡಿದ್ದರೂ ಎರಡೂ ಪಕ್ಷಗಳಿಂದ ಮೈತ್ರಿ ಧರ್ಮ ಪಾಲನೆಯಾಗಿರಲಿಲ್ಲ.. ರಾಜ್ಯದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಅಂತಿಮಗೊಳಿಸುವಾಗ ಜೆಡಿಎಸ್‌ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿರಲಿಲ್ಲ.. ಜೆಡಿಎಸ್‌ ನಾಯಕರೂ ಅದೇ ರೀತಿ ವರ್ತಿಸಿದ್ದರು.. ಇನ್ನು ಪ್ರಧಾನಿ ನರೇಂದ್ರ ಮೋದಿಯವರು ಕಲಬುರಗಿ ಹಾಗೂ ಶಿವಮೊಗ್ಗದಲ್ಲಿ ಸಮಾವೇಶ ನಡೆಸಿದರು.. ಈ ಸಮಾವೇಶಕ್ಕೆ ಜೆಡಿಎಸ್‌ ವರಿಷ್ಠರನ್ನಾಗಲೀ ಅಥವಾ ಸ್ಥಳೀಯ ಜೆಡಿಎಸ್‌ ಮುಖಂಡರನ್ನಾಗಲೀ ಕರೆದಿರಲಿಲ್ಲ.. ಜೊತೆಗೆ ಸೀಟು ಹಂಚಿಕೆ ವಿಚಾರದಲ್ಲೂ ಸರಿಯಾಗಿ ಮಾತುಕತೆ ಆಗಲೇ ಇಲ್ಲ.. ಪಕ್ಕದ ಆಂಧ್ರ ಪ್ರದೇಶದಲ್ಲಿ ಎಲ್ಲಾ ಮಾತುಕತೆಗಳು ಸರಿಯಾಗಿ ಆಗಿದ್ದವು.. ಆದ್ರೆ ರಾಜ್ಯದಲ್ಲಿ ಜೆಡಿಎಸ್‌ ಜೊತೆ ಬಿಜೆಪಿ ಎಲ್ಲಾ ವಿಚಾರದಲ್ಲೂ ಸೂಕ್ತವಾಗಿ ಮಾತುಕತೆ ಮಾಡಿರಲಿಲ್ಲ.. ಹೀಗಾಗಿ ಮೈತ್ರಿ ಮುರಿಯಬಹುದು ಎಂದೇ ಹೇಳಲಾಗಿತ್ತು.. ಆದ್ರೆ ಕೊನೆಗೂ ಎರಡೂ ಪಕ್ಷಗಳ ಎಚ್ಚೆತ್ತಿದ್ದಾರೆ.. ಎಲ್ಲರೂ ಸೇರಿ ಈಗ ಒಗ್ಗಟ್ಟಿನ ಮಂತ್ರ ಪಠಿಸಿದ್ದಾರೆ.. ಒಟ್ಟಿಗೆ ಪ್ರಚಾರ ನಡೆಸುವ, ಕಾಂಗ್ರೆಸ್‌ ಮಣಿಸುವ ತಂತ್ರಗಳ ಬಗ್ಗೆ ಮಾತುಕತೆಗಳು ನಡೆದಿವೆ.. ಖಾಸಗಿ ಹೋಟೆಲ್‌ನಲ್ಲಿ ನಡೆದ ಸಮನ್ವಯ ಸಮತಿ ಸಭೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವ ಬಗ್ಗೆ ಮಾತನಾಡಿದ್ದಾರೆ..

ಇದನ್ನೂ ಓದಿ; ರೆಫ್ರಿಜರೇಟರ್‌ ಸ್ವಚ್ಛ ಮಾಡದೇ ಹೋದರೆ ಏನಾಗುತ್ತೆ..?; ಫ್ರಿಡ್ಜ್‌ ಕ್ಲೀನ್‌ ಮಾಡೋದು ಹೇಗೆ..?

ದೇವೇಗೌಡರ ಬೆಂಬಲದಿಂದ ನಮಗೆ ಆನೆಬಲ;

ಮಾಜಿ ಪ್ರಧಾನಿ ದೇವೇಗೌಡರ ಬೆಂಬಲದಿಂದಾಗಿ ನಮಗೆ ಆನೆಬಲ ಬಂದಂತಾಗಿದೆ.. ರಾಜ್ಯದಲ್ಲಿ ನಮ್ಮ ಮೈತ್ರಿಕೂಟ 28 ಕ್ಕೆ 28 ಕ್ಷೇತ್ರಗಳಲ್ಲೂ ಗೆಲ್ಲಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.. ಸಮನ್ವಯ ಸಮಿತಿ ಸಭೆ ಬಳಿ ಮಾತನಾಡಿದ ಅವರು, ಈ ಜೆಡಿಎಸ್‌-ಬಿಜೆಪಿ ಸಮ್ಮಿಲನ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹದ್ದು ಎಂದು ಹೇಳಿದ್ದಾರೆ.. ಈ ಹಿಂದೆ 2006ರಲ್ಲಿ ಜೆಡಿಎಸ್‌ ಜೊತೆ ನಾವು ಹೊಂದಾಣಿಕೆ ಮಾಡಿಕೊಂಡಿದ್ದೆವು.. ಆದ್ರೆ ಆಗಿನ ಕಾಲಘಟ್ಟದಲ್ಲಿ ಸೈದ್ಧಾಂತಿಕವಾಗಿ ದೇವೇಗೌಡರು ಮೈತ್ರಿಯನ್ನು ಒಪ್ಪಿರಲಿಲ್ಲ.. ಆದ್ರೆ ಈಗ ದೇವೇಗೌಡರು ಮತ್ತೊಮ್ಮೆ ಮೋದಿಯವರು ಪ್ರಧಾನಿಯಾಗಬೇಕೆಂದು ಆಶೀರ್ವಾದ ಮಾಡುತ್ತಿದ್ದಾರೆ.. ಇದರಿಂದಾಗಿ ನಮಗೆ ಆನೆಬಲ ಬಂದಂತಾಗಿದೆ ಎಂದು ವಿಜಯೇಂದ್ರ ಹೇಳಿದ್ದಾರೆ..

ಇದನ್ನೂ ಓದಿ; ಚಿಕ್ಕಬಳ್ಳಾಪುರ ಲೋಕಸಭಾ; ಜನಕ್ಕೆ ʻರಕ್ಷಾʼ ಬೇಕು.. ನಾಯಕರಿಗೆ ʻಮೊಯ್ಲಿʼ ಬೇಕು..!

ಮೈತ್ರಿಯನ್ನು ಜನ ಗಂಭೀರವಾಗಿ ತೆಗೆದುಕೊಂಡಿದ್ದಾರೆ;

ಇನ್ನು ರಾಜ್ಯದ ಜನ ಕೂಡಾ ನಮ್ಮ ಮೈತ್ರಿಯನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ.. ಮಾಜಿ ಸಿಎಂ ಕುಮಾರಸ್ವಾಮಿಯವರು ತಮ್ಮ ಆರೋಗ್ಯವನ್ನು ಕೂಡಾ ಕಡೆಗಣಿಸಿ ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದಾರೆ.. ನಮ್ಮ ಮೈತ್ರಿ ಎಷ್ಟು ಗಟ್ಟಿಯಾಗಿದೆ ಎಂದರೆ ಕಾಂಗ್ರೆಸ್‌ ಮಂತ್ರಿಗಳೇ ಹೆದರಿಕೊಂಡಿದ್ದಾರೆ.. ಸಿಎಂ ಸಿದ್ದರಾಮಯ್ಯ ಅವರು 15-20 ಕ್ಷೇತ್ರಗಳಲ್ಲಿ ಹಾಲಿ ಸಚಿವರನ್ನೇ ಕಣಕ್ಕಿಳಿಸಲು ಬಯಸಿದ್ದರು.. ಆದ್ರೆ, ನಮಗೆ ಭಯಬಿದ್ದು ಯಾವೊಬ್ಬ ಮಂತ್ರಿಯೂ ಸ್ಪರ್ಧೆಗೆ ಮುಂದಾಗಲಿಲ್ಲ ಎಂದು ವಿಜಯೇಂದ್ರ ಅವರು ಹೇಳಿದರು..

ಇದನ್ನೂ ಓದಿ; ಚಿಕ್ಕಬಳ್ಳಾಪುರ ಲೋಕಸಭಾ; ಜನಕ್ಕೆ ʻರಕ್ಷಾʼ ಬೇಕು.. ನಾಯಕರಿಗೆ ʻಮೊಯ್ಲಿʼ ಬೇಕು..!

ಮೈತ್ರಿ ಇಲ್ಲಿಗೇ ಮುಗಿಯಲ್ಲ ಎಂದ ಕುಮಾರಸ್ವಾಮಿ;

ಇನ್ನು ಸಭೆಯ ನಂತರ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಮೈತ್ರಿ ಇಲ್ಲಿಗೇ ಮುಗಿಯೋದಿಲ್ಲ ಎಂದು ಹೇಳಿದ್ದಾರೆ.. ಮುಂದೆಯೂ ನಮ್ಮ ಮೈತ್ರಿ ಮುಂದುವರೆಯುತ್ತದೆ.. ಮೈತ್ರಿ ನಾಯಕರು ಭದ್ರ ಬುನಾದಿ ಹಾಕಿದರೆ ರಾಜ್ಯದಲ್ಲಿ ಕಾಂಗ್ರೆಸ್ ಗೆಲುವು ಅಸಾಧ್ಯ, ಎಲ್ಲಾ ಕ್ಷೇತ್ರಗಳಲ್ಲೂ ನಾವೇ ಗೆಲ್ಲಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೋದಿಯಂತಹ ನಾಯಕರು ಮತ್ತೊಬ್ಬರಿಲ್ಲ;

ಇನ್ನು ದೇವೇಗೌಡರು ಮಾತನಾಡಿ ದೇಶದಲ್ಲಿ ಮೋದಿಯಂತಹ ನಾಯಕರು ಮತ್ತೊಬ್ಬರಿಲ್ಲ.. ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು.. ರಾಜ್ಯದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಮೈತ್ರಿಕೂಟದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಮೋದಿಗೆ ಶಕ್ತಿ  ನೀಡಬೇಕು ಎಂದು ಹೇಳಿದರು.

ಸಭೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ, ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್, ಮಾಜಿ ಸಿಎಂಗಳಾದ ಯಡಿಯೂರಪ್ಪ, ಹೆಚ್.​ಡಿ.ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್​.ಅಶೋಕ್​, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ರಾಜ್ಯ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಜೆಡಿಎಸ್​​ ಶಾಸಕ ಬಂಡೆಪ್ಪ ಕಾಶೆಂಪೂರ್​, ಎಂಎಲ್​ಸಿ ಶರವಣ, ಸಂಸದ ಸದಾನಂದಗೌಡ, ಮಾಜಿ ಸಚಿವ ಗೋವಿಂದ ಕಾರಜೋಳ, ಸಿ.ಟಿ.ರವಿ ಸೇರಿದಂತೆ ಬಿಜೆಪಿ, ಜೆಡಿಎಸ್ ನಾಯಕರು ಸಭೆಯಲ್ಲಿ ಭಾಗಿಯಾದರು.

ಬೆಂಗಳೂರಿನಲ್ಲಿ ಬೃಹತ್‌ ಸಮಾವೇಶಕ್ಕೆ ಚಿಂತನೆ;

ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಮಾಡಿಕೊಂಡಿದ್ದರೂ ಇಬ್ಬರೂ ಸೇರಿ ಒಂದು ಸಮಾವೇಶವನ್ನೂ ಇನ್ನೂ ಮಾಡಿಲ್ಲ.. ಹೀಗಾಗಿ ಮೈತ್ರಿ ಬಗ್ಗೆ ನಂಬಿಕೆ ಬರಬೇಕಾದರೆ ಇಬ್ಬರೂ ನಾಯಕರು ಸೇರಿ ಒಂದು ದೊಡ್ಡ ಸಮಾವೇಶ ನಡೆಸುವುದು ಅಗತ್ಯವಾಗಿದೆ.. ಹೀಗಾಗಿ ಏಪ್ರಿಲ್‌ ಮೂರನೇ ವಾರದಲ್ಲಿ ಬೆಂಗಳೂರಿನಲ್ಲಿ ಬೃಹತ್‌ ಸಮಾವೇಶ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.. ಪ್ರಧಾನಿ ನರೇಂದ್ರ ಮೋದಿ ಹಾಗೂ ದೇವೇಗೌಡರ ಮುಂದಾಳತ್ವದಲ್ಲಿ ಈ ಬೃಹತ್‌ ಸಭೆ ನಡೆಯಲಿದ್ದು, ಇದಕ್ಕೆ ಹತ್ತು ಲಕ್ಷಕ್ಕೂ ಅಧಿಕ ಕಾರ್ಯಕರ್ತರನ್ನು ಸೇರಿಸುವ ಚಿಂತನೆ ನಡೆದಿದೆ ಎಂದು ಹೇಳಲಾಗುತ್ತಿದೆ..

Share Post