CrimeNational

ಹೋಳಿ ಆಚರಣೆ ವೇಳೆ ಬೈಕ್‌ನಲ್ಲಿ ಹುಚ್ಚಾಟ; 80,500 ರೂಪಾಯಿ ದಂಡ!

ನೋಯ್ಡಾ; ಬೈಕ್‌ ಮೇಲೆ ಹುಚ್ಚಾಟವಾಡುವ, ಅದನ್ನು ರೀಲ್ಸ್‌ ಮಾಡಿ ವೈರಲ್‌ ಮಾಡುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚಾಗುತ್ತಿದೆ.. ಜೀವವನ್ನೂ ಲೆಕ್ಕಿಸದೇ ಬೈಕ್‌ ಮೇಲೆ ಸ್ಟಂಟ್‌ ಮಾಡುವುದು, ಎಲ್ಲರೆದುರೇ ಅಸಭ್ಯವಾಗಿ ವರ್ತಿಸುವುದು ನಡೆಯುತ್ತಿದೆ.. ಇದೇ ರೀತಿ ಹೋಳಿ ಹಬ್ಬದಂದು ಬೈಕ್‌ ಮೇಲೆ ಇಬ್ಬರು ಯುವತಿಯರು ಅಸಭ್ಯ ವರ್ತನೆ ತೋರಿದ್ದು, ಅವರಿಗೆ ಈಗ ಬರೋಬ್ಬರಿ 80,500 ರೂಪಾಯಿ ದಂಡ ವಿಧಿಸಲಾಗಿದೆ..

ಇದನ್ನೂ ಓದಿ; ಅನುಮಾಸ್ಪದವಾಗಿ ತಿರುಗಾಡುತ್ತಿದ್ದ ಬಳಿ ಇತ್ತು 5 ಕೆಜಿ ಚಿನ್ನ!

ಹೋಳಿ ಹಬ್ಬದಂದು ಬೈಕ್‌ನಲ್ಲಿ ಹುಚ್ಚಾಟ;

ನೋಯ್ಡಾದಲ್ಲಿ ಯುವಕ-ಯುವತಿಯರು ಸೇರಿ ಹೋಳಿ ಆಡಿದ್ದಾರೆ.. ನಂತರ ಒಬ್ಬ ಯುವಕ, ಇಬ್ಬರು ಯುವತಿಯರನ್ನು ಬೈಕ್‌ ನಲ್ಲಿ ಹತ್ತಿಸಿಕೊಂಡು ಸುತ್ತಾಡಿದ್ದಾನೆ.. ಈ ವೇಳೆ ಸಾರ್ವಜನಿಕವಾಗಿ ಬೈಕ್‌ನಲ್ಲೇ ಇಬ್ಬರು ಯುವತಿಯರು ಅಸಭ್ಯವಾಗಿ ವರ್ತನೆ ಮಾಡಿದ್ದಾರೆ.. ಜೊತೆಗೆ ಅಡ್ಡಾದಿಡ್ಡಿಯಾಗಿ ಬೈಕ್‌ ಓಡಿಸಲಾಗಿದೆ.. ಇದರಿಂದಾಗಿ ನೋಯ್ಡಾದ ಜನರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ.. ಇವರ ಹುಚ್ಚಾಟ ಕಂಡ ಪೊಲೀಸರು ಅವರನ್ನು ಹಿಡಿದು ಮೊದಲಿಗೆ 33 ಸಾವಿರ ರೂಪಾಯಿ ದಂಡ ಹಾಕಿ ಕಳುಹಿಸಲಾಗಿತ್ತು.. ಅನಂತರ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ವೈರಲ್‌ ಆಗಿದೆ.. ಇದರಿಂದಾಗಿ ಮತ್ತೆ ಅವರಿಗೆ 47,500 ರೂಪಾಯಿ ದಂಡ ಹಾಕಲಾಗಿದೆ.. ಇದರಿಂದಾಗಿ ಒಟ್ಟು 80,500 ರೂಪಾಯಿ ದಂಡ ಹಾಕಿದಂತಾಗಿದೆ..

ಇದನ್ನೂ ಓದಿ; ಕೋಲಾರ ವಿಚಾರ; ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡುವುದಿಲ್ಲ; ಡಿ.ಕೆ. ಶಿವಕುಮಾರ್

ಮಾರ್ಚ್‌ 25ರಂದು ವಿಡಿಯೋ ಎಲ್ಲೆಡೆ ವೈರಲ್‌;

ಇಬ್ಬರು ಹುಡುಗಿಯರ ಜೊತೆ ಒಬ್ಬ ಹುಡುಗ ಬೈಕ್‌ನಲ್ಲಿ ಸುತ್ತಾಡಿದ್ದಾನೆ.. ಈ ವೇಳೆ ಇಬ್ಬರು ಹುಡುಗಿಯರು ಅಸಭ್ಯವಾಗಿ ವರ್ತನೆ ಮಾಡಿದ್ದಾರೆ.. ಯುವಕನ ಹಿಂದೆ ಇಬ್ಬರು ಯುವತಿಯರು ಎದುರು ಬದುರಾಗಿ ಕೂತಿದ್ದಾರೆ.. ಸಾರ್ವಜನಿಕವಾಗಿ ಇಬ್ಬರೂ ಅಸಭ್ಯವಾಗಿ ವರ್ತನೆ ಮಾಡಿದ್ದಾರೆ.. ತಬ್ಬಿಕೊಳ್ಳುವುದು, ಕಿಸ್‌ ಮಾಡುವುದು ಮಾಡಿದ್ದಾರೆ.. ಇದನ್ನು ವಿಡಿಯೋ ಮಾಡಿ ವೈರಲ್‌ ಮಾಡಲಾಗಿದೆ.. ಇದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶಗಳು ವ್ಯಕ್ತವಾಗಿದ್ದವು.. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಹಿಡಿದು ದಂಡ ವಿಧಿಸಿದ್ದಾರೆ. ಮತ್ತೊಮ್ಮೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ..

ಇದನ್ನೂ ಓದಿ; ಟಿಕೆಟ್‌ ಸಿಗದಿದ್ದಕ್ಕೆ ನಿದ್ದೆ ಮಾತ್ರೆ ಸೇವಿಸಿದ್ದ ಸಂಸದ ಆಸ್ಪತ್ರೆಯಲ್ಲಿ ಸಾವು!

ಸ್ಕೂಟಿಯ ಮಾಲೀಕರಿಗೆ ಬಿತ್ತು ದಂಡ;

ಒಂದು ಕಡೆ ಅಡ್ಡಾದಿಡ್ಡಿ ಓಡಿಸಿದ್ದು, ಜೊತೆಗೆ ಮೂವರನ್ನು ಕೂರಿಸಿಕೊಂಡಿದ್ದಕ್ಕೆ 33 ಸಾವಿರ ರೂಪಾಯಿ ದಂಡ ವಿಧಿಸಲಾಗಿತ್ತು.. ಅನಂತರ 47,500 ರೂಪಾಯಿ ದಂಡ ವಿಧಿಸಲಾಗಿದೆ.. ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋ ಆಧಾರದ ಮೇಲೆ ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸಿದ್ದಕ್ಕೆ ಈ ದಂಡ ವಿಧಿಸಲಾಗಿದೆ.. ಈ ಎರಡೂ ಘಟನೆಯಿಂದಾಗಿ ಸ್ಕೂಟಿಯ ಮಾಲೀಕರಿಗೆ 80,500 ರೂಪಾಯಿ ದಂಡ  ಬಿದ್ದಂತಾಗಿದೆ.. ಈ ಬಗ್ಗೆ ಡೆಪ್ಯೂಟಿ ಕಮೀಷನರ್ ಆಫ್ ಪೊಲೀಸ್ (ಟ್ರಾಫಿಕ್) ಅನಿಲ್ ಕುಮಾರ್ ಮಾಹಿತಿ ನೀಡಿದ್ದಾರೆ. ಐಪಿಸಿ ಸೆಕ್ಷನ್ 279 (ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆ), 290 (ಸಾರ್ವಜನಿಕರಿಗೆ ತೊಂದರೆ), 336 ಮತ್ತು 337 (ಇತರರ ಜೀವಕ್ಕೆ ಹಾನಿಯುಂಟು ಮಾಡುವ) ಅಡಿಯಲ್ಲಿ ಕೇಸ್​ ದಾಖಲಿಸಿಕೊಳ್ಳಲಾಗಿದೆ.

ಇದನ್ನೂ ಓದಿ; ಮತ್ತೊಂದು ರೆಸ್ಟೋರೆಂಟ್‌ಗೆ ಬಂತು ಬಾಂಬ್‌ ಬೆದರಿಕೆ; ಕಾರಣ ಕೇಳಿ ಪೊಲೀಸರೇ ಬೇಸ್ತು..!

Share Post