ಎಂಜಿಎಂ ಕಂಪನಿ 50 ಬ್ರಾಂಚ್‌ಗಳ ಮೇಲೆ ಐಟಿ ದಾಳಿ
ಬೆಂಗಳೂರು; ಎಂ.ಜಿ.ಮುತ್ತು ಮಾಲೀಕತ್ವದ ಎಂಜಿಎಂ ಕಂಪನಿ ಎಲ್ಲಾ ಐವತ್ತು ಬ್ರಾಂಚ್‌ಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ಬೆಂಗಳೂರು, ಚೆನ್ನೈ, ಕೊಚ್ಚಿ, ಹೈದರಾಬಾದ್ ಸೇರಿದಂತೆ ಐವತ್ತು ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಗಿದ್ದು, ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ.
ಎಂಜಿಎಂ ಕಂಪನಿ ವಿರುದ್ಧ 250 ಕೋಟಿ ರೂಪಾಯಿ ವಂಚನೆ ಆರೋಪವಿದೆ. ಈ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನ ಜಯನಗರದಲ್ಲಿ ಎಂಜಿಎಂ ಶಾಖೆ ಇದ್ದು, ಅಲ್ಲೂ ಕೂಡಾ ಐಟಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.