HealthPolitics

ಟಿಕೆಟ್‌ ಸಿಗದಿದ್ದಕ್ಕೆ ನಿದ್ದೆ ಮಾತ್ರೆ ಸೇವಿಸಿದ್ದ ಸಂಸದ ಆಸ್ಪತ್ರೆಯಲ್ಲಿ ಸಾವು!

ಚೆನ್ನೈ; ಚುನಾವಣೆ ಸಮಯದ ಬಂತು ಅಂದ್ರೆ ಸ್ಪರ್ಧೆ ಮಾಡಲು ಟಿಕೆಟ್‌ ಗಾಗಿ ದೊಡ್ಡ ಪೈಪೋಟಿ ಇರುತ್ತದೆ.. ಟಿಕೆಟ್‌ ಸಿಗದಿದ್ದರೆ ಅಸಮಾಧಾನಗೊಂಡು ಬೇರೆ ಪಕ್ಷಕ್ಕೆ ಹಾರುವವರೂ ಇದ್ದಾರೆ.. ಇಲ್ಲದೇ ಹೋದರೆ ಬಂಡಾಯವಾಗಿ ಸ್ಪರ್ಧೆ ಮಾಡಿ, ಪಕ್ಷದ ಅಧಿಕೃತ ಅಭ್ಯರ್ಥಿಗೆ ಸೋಲುಣಿಸುವ ಕೆಲಸಗಳೂ ನಡೆಯುತ್ತವೆ.. ಆದ್ರೆ ಟಿಕೆಟ್‌ ಸಿಕ್ಕಿಲ್ಲ ಅಂತ ಆತ್ಮಹತ್ಯೆ ಮಾಡಿಕೊಳ್ಳುವಂತಹ ನಾಯಕರು ಅಪರೂಪರಲ್ಲಿ ಅಪರೂಪ.. ಆದ್ರೆ ತಮಿಳುನಾಡಿನಲ್ಲಿ ಹಾಲಿ ಸಂಸದರೊಬ್ಬರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್‌ ಸಿಗಲಿಲ್ಲ ಎಂನ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ..

ಇದನ್ನೂ ಓದಿ; ಮತ್ತೊಂದು ರೆಸ್ಟೋರೆಂಟ್‌ಗೆ ಬಂತು ಬಾಂಬ್‌ ಬೆದರಿಕೆ; ಕಾರಣ ಕೇಳಿ ಪೊಲೀಸರೇ ಬೇಸ್ತು..!

ಆತ್ಮಹತ್ಯೆಗೆ ಯತ್ನಿಸಿದ್ದ ಸಂಸದ ಆಸ್ಪತ್ರೆಯಲ್ಲಿ ಸಾವು;

2019ರಲ್ಲಿ ತಮಿಳುನಾಡಿನ ಈರೋಡ್‌ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ್ದ ಗಣೇಶ್‌ ಮೂರ್ತಿಯವರೇ ಆತ್ಮಹತ್ಯೆ ಮಾಡಿಕೊಂಡವರು.. ಇವರು ಎಂಡಿಎಂಕೆ ಪಕ್ಷದಿಂದ ಇಲ್ಲಿ ಕಳೆದ ಬಾರಿ ಸ್ಪರ್ಧೆ ಮಾಡಿದ್ದರು.. ಈ ಬಾರಿಯೂ ಕೂಡಾ ಈರೋಡ್‌ ಕ್ಷೇತ್ರದಿಂದ ಟಿಕೆಟ್‌ ಬಯಸಿದ್ದರು.. ಕಳೆದ ಬಾರಿ ಎಂಡಿಎಂಕೆ ಹಾಗೂ ಡಿಎಂಕೆ ಮೈತ್ರಿ ಮಾಡಿಕೊಂಡಿದ್ದವು.. ಆದ್ರೆ ಈ ಬಾರಿ ಡಿಎಂಕೆ ಎಲ್ಲಾ ಕ್ಷೇತ್ರಗಳಲ್ಲೂ ಸ್ವತಂತ್ರವಾಗಿ ಸ್ಪರ್ಧೆ ಮಾಡಿವೆ.. ಹೀಗಾಗಿ ಈ ಬಾರಿ ಗಣೇಶ್‌ ಮೂರ್ತಿಯವರಿಗೆ ಟಿಕೆಟ್‌ ಸಿಕ್ಕಿರಲಿಲ್ಲ.. ಇದರ ಬೇಜಾರಿನಲ್ಲಿ ಅವರು ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನ ಮಾಡಿದ್ದರು..

ಇದನ್ನೂ ಓದಿ; ಹಿಟ್ಟಿಗೆ ಹುಳ ಹಿಡಿಯುತ್ತಿದೆಯೇ..?; ಹಾಗಾದ್ರೆ ಈ ಟ್ರಿಕ್ಸ್‌ ಯೂಸ್‌ ಮಾಡಿ!

ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವು!;

ಗಣೇಶ ಮೂರ್ತಿಯವರು ಈ ಬಾರಿಯೂ ಈರೋಡ್‌ ಕ್ಷೇತ್ರದಿಂದ ಟಿಕೆಟ್‌ ಬಯಸಿದ್ದರು.. ಈ ಬಾರಿಯೂ ಗೆಲ್ಲುವ ವಿಶ್ವಾಸ ಇಟ್ಟುಕೊಂಡಿದ್ದರು.. ಆದ್ರೆ ಈ ಬಾರಿ ಟಿಕೆಟ್‌ ಕೈತಪ್ಪಿದೆ.. ಈ ಕಾರಣದಿಂದಾಗಿ ಅವರು ತೀವ್ರ ನಿರಾಸೆ ಅನುಭವಿಸಿದ್ದರು.. ಮಾರ್ಚ್‌ 24ರಂದು ಅವರು ಮಾತ್ರೆ ಸೇರಿಸಿ ಆತ್ಮಹತ್ಯೆಗೆ ಯತ್ನ ಮಾಡಿದ್ದರು.,. ಕೂಡಲೇ ಅವರನ್ನು ಕೊಯಮತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಗಣೇಶಮೂರ್ತಿಯವರು ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ..

ಇದನ್ನೂ ಓದಿ; ಮುಖ ಸುಕ್ಕುಗಟ್ಟದಂತೆ ಯಾವಾಗಲೂ ಯಂಗ್‌ ಆಗಿ ಕಾಣುಲು ಹೀಗೆ ಮಾಡಿ!

ಇಂದು ಅಂತ್ಯಕ್ರಿಯೆ;

ಗಣೇಶ್‌ ಮೂರ್ತಿ ತುಂಬಾ ಭಾವುಕ ಜೀವಿಯಾಗಿದ್ದರು.. ಕಳೆದ ಐದು ವರ್ಷಗಳಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿಸಿದ್ದರು.. ಒಳ್ಳೆಯ ಹೆಸರು ಗಳಿಸಿಕೊಂಡಿದ್ದರು.. ಆದ್ರೆ ಈ ಬಾರಿ ಮೈತ್ರಿ ಮುರಿದುಬಿದ್ದಿದರಿಂದ ಡಿಎಂಕೆ ಸ್ವತಂತ್ರವಾಗಿ ಸ್ಪರ್ಧೆ ಮಾಡಿದೆ.. ಹೀಗಾಗಿ ಗಣೇಶ್‌ ಮೂರ್ತಿಗೆ ಟಿಕೆಟ್‌ ಕೈತಪ್ಪಿದೆ.. ಈ ಬಾರಿಯೂ ಅವರು ಸಂಸದರಾಗಿ ಜನಸೇವೆ ಮಾಡಲು ಬಯಸಿದ್ದರು.. ಈಗಾಗಲೇ ಕ್ಷೇತ್ರದಾದ್ಯಂತ ಓಡಾಡಿದ್ದರು.. ಆದ್ರೆ ಟಿಕೆಟ್‌ ಕೈತಪ್ಪಿತ್ತು., ಇದರಿಂದಾಗಿ ಗಣೇಶ್‌ ಮೂರ್ತಿ ತೀವ್ರ ಆಘಾತಕ್ಕೊಳಗಾಗಿದ್ದರು.. ಮಾನಸಿಕ ಒತ್ತಡದಿಂದಾಗಿ ಅವರು ಮಾತೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನ ಮಾಡಿದ್ದರು..

ಇಂದು ಗಣೇಶಮೂರ್ತಿಯವರ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ.. ತಮಿಳುನಾಡು ಸಿಎಂ ಸೇರಿ ಹಲವು ನಾಯಕರು ಗಣೇಶ್‌ ಮೂರ್ತಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ; ರಾತ್ರಿಯಿಡೀ ನೆನೆಸಿಟ್ಟ ಒಣದ್ರಾಕ್ಷಿ ತಿಂದರೆ ಅನಾರೋಗ್ಯಕ್ಕೆ ಚೆಕ್‌!

 

Share Post