Lifestyle

ಹುಡುಗರಲ್ಲಿ ಸುಂದರ ಹುಡುಗಿಯರು ಇಷ್ಟಪಡೋದು ಇದೇನಂತೆ!

ಬೆಂಗಳೂರು; ಹದಿಹರೆಯದ ಹುಡುಗ-ಹುಡುಗಿಯರು ಸಂಗಾತಿಗಾಗಿ ಹುಡುಕಾಟ ನಡೆಸುತ್ತಿರುತ್ತಾರೆ… ಅದ್ರಲ್ಲೂ ಕಾಲೇಜು ಹಂತದಲ್ಲಿ ಹುಡುಗರು ಸುಂದರ ಹುಡುಗಿ ಸಿಕ್ಕರೆ ಸಾಕು ಆಕೆಯ ಹಿಂದೆ ಬಿದ್ದಿರುತ್ತಾರೆ.. ಹುಡುಗಿಯ ಸ್ನೇಹ ಬೆಳೆಸಲು ಸತತ ಪ್ರಯತ್ನ ಮಾಡುತ್ತಿರುತ್ತಾರೆ.. ಆದ್ರೆ ಸುಂದರ ಹುಡುಗಿಯರು ತನ್ನ ಬಾಯ್‌ ಫ್ರೆಂಡ್‌ ಆಯ್ಕೆ ಮಾಡಿಕೊಳ್ಳುವಾಗ ಒಂದಷ್ಟು ಕ್ವಾಲಿಟಿಗಳನ್ನು ನೋಡುತ್ತಾಳೆ.. ಎಲ್ಲರೂ ಅಂದುಕೊಳ್ಳೋದು ಹಣ ಇದ್ದರೆ ಸಾಕು ಎಂತಹ ಹುಡುಗಿಯನ್ನು ಬೇಕಾದರೂ ಪಟಾಯಿಸಬಹುದು ಅಂತ.. ಆದ್ರೆ, ಸಮೀಕ್ಷೆಗಳ ಪ್ರಕಾರ ಹುಡುಗಿಯರು ಬಯಸೋದು ಹಣ ಅಲ್ಲವೇ ಅಲ್ಲ.. ಅವರು ಹುಡುಗರಲ್ಲಿ ಬಯಸೋದು ಬೇರೆಯದೇ ಇದೆ..

ಇದನ್ನೂ ಓದಿ; ಸಚಿವರ ಭಾಷಣಕ್ಕೆ ಆಕ್ಷೇಪ; ಹಾಸನದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಕಿತ್ತಾಟ!

ಮುಖ ಗಂಟಿಕ್ಕಿಕೊಂಡಿದ್ದರೆ ನಿಮ್ಮ ಕಡೆ ನೋಡಲ್ಲ;

ತುಂಬಾ ಜನ ಹುಡುಗರು ಹುಡುಗಿಯರನ್ನು ಮೆಚ್ಚಿಸಲು ಸ್ಟೈಲಿಷ್‌ ಆಗಿ ಕಾಣಿಸಿಕೊಳ್ಳುತ್ತಾರೆ.. ತರಹೇವಾರಿ ಬಟ್ಟೆಗಳನ್ನು ಹಾಕುತ್ತಾರೆ.. ಗಡ್ಡ ಬಿಟ್ಟು ಸ್ಟೈಲ್‌ ಮಾಡುತ್ತಾರೆ.. ಆದ್ರೆ ನಿಜಕ್ಕೆ ಹುಡುಗಿಯರು ಇದೇನನ್ನೂ ಬಯಸುವುದಿಲ್ಲವಂತೆ.. ಸ್ವಲ್ಪ ಡಿಗ್ನಿಫೈಡ್‌ ಆಗಿ, ನೀಟ್‌ ಆಗಿ, ಸಿಂಪಲ್‌ ಆಗಿ ಕಾಣಿಸಿದರೆ ಸಾಕು ಹುಡುಗಿಯರು ಹುಡುಗರನ್ನು ಇಷ್ಟಪಡುತ್ತಾರೆ.. ಎಷ್ಟೋ ಹುಡುಗಿಯರಿಗೆ ಗಡ್ಡ ಎಂದರೆ ಇಷ್ಟವಾಗುವುದಿಲ್ಲವಂತೆ.. ನೀವು ನೀವು ಹಿಂದೆ ಬಿದ್ದ ಹುಡುಗಿಗೂ ಗಡ್ಡ ಇಷ್ಟವಿಲ್ಲದಿದ್ದರೆ ಆಕೆ ನಿಮ್ಮನ್ನು ನೋಡೋದೇ ಇಲ್ಲ. ಇನ್ನು ಕೆಲವರು ಎಲ್ಲಾ ರೀತಿಯಲ್ಲೂ ಚೆನ್ನಾಗಿದ್ದರೂ ಯಾವಾಗಲೂ ಸೀರಿಯಸ್ಸಾಗಿರುತ್ತಾರೆ.. ಮುಖ ಗಂಟಿಕ್ಕಿಕೊಂಡೇ ಇರುತ್ತಾರೆ.. ಇಂತಹವರನ್ನು ಹುಡುಗಿಯರು ಇಷ್ಟಪಡುವುದಿಲ್ಲ ಎಂದು ಸಮೀಕ್ಷೆಗಳು ಹೇಳುತ್ತಿವೆ.. ಅದರ ಬದಲು ಯಾವಾಗಲೂ ಖುಷಿಯಿಂದ, ತಮಾಷೆ ಮಾಡುತ್ತಾ ಇರುವ ಹುಡುಗರನ್ನು ಹುಡುಗಿಯರು ಬೇಗೆ ಇಷ್ಟಪಡುತ್ತಾರಂತೆ.. ಎಲ್ಲರನ್ನೂ ಖುಷಿ ಖುಷಿಯಾಗಿ ಮಾತನಾಡಿಸುವ, ಎಲ್ಲರ ಜೊತೆಗೆ ಬೆರೆಯುವ ವ್ಯಕ್ತಿಗಳೆಂದರೆ ಹುಡುಗಿಯರಿಗೆ ತುಂಬಾ ಇಷ್ಟವಂತೆ.. ಅಷ್ಟೇ ಅಲ್ಲ, ನಿಯತ್ತಿನಿಂದ ಇರುವ ಹುಡುಗ ಅಂದ್ರೆ ಹುಡುಗಿಯರು ಪ್ರಾಣ ಬೇಕಾದ್ರೂ ಕೊಡ್ತಾರಂತೆ..

ಇದನ್ನೂ ಓದಿ; ಅಲಸಂದೆ ಸೇವನೆಯಿಂದ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆಯಾ..?

ಆತ್ಮವಿಶ್ವಾಸ ಇರುವ ಹುಡುಗರ ಬಗ್ಗೆ ಆಕರ್ಷಣೆ;

ಪ್ರಾಮಾಣಿಕ, ಜವಾಬ್ದಾರಿ ಹೊಂದಿರುವ ಮತ್ತು ಉತ್ತಮ ಆತ್ಮವಿಶ್ವಾಸವನ್ನು ಹೊಂದಿರುವ ಹುಡುಗರತ್ತ ಹುಡುಗಿಯರು ಆಕರ್ಷಿತರಾಗುತ್ತಾರೆ. ಈ ಗುಣಗಳು ಹುಡುಗನಲ್ಲಿ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಹುಡುಗಿಯರು ಆತನೊಂದಿಗೆ ಮಾತನಾಡುವಾಗಲೇ ಗುರುತಿಸಿಬಿಡುತ್ತಾರೆ..  ಅದಕ್ಕಿಂತ ಹೆಚ್ಚಾಗಿ, ಯಾರಾದರೂ ಹೇಳಿದರೆ ಏನಾದರೂ ಮಾಡುವವರಿಗಿಂತ ಹೆಚ್ಚಾಗಿ ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುವ ಹುಡುಗರನ್ನು ಹುಡುಗಿಯರು ಹೆಚ್ಚಾಗಿ ಇಷ್ಟಪಡುತ್ತಾರೆ. ವಿಶೇಷವಾಗಿ ಇತರರನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಹೊಂದಿರುವ ಹುಡುಗರೆಂದರೆ ಹುಡುಗಿಯರಿಗೆ ಬಹಳ ಇಷ್ಟವಂತೆ..!

ಇದನ್ನೂ ಓದಿ; ಪಂಚಾಮೃತ ಅಂದ್ರೆ ಏನು..?; ಇದನ್ನು ತಯಾರು ಮಾಡೋದು ಹೇಗೆ..?

ದೈಹಿಕವಾಗಿ ಫಿಟ್‌ ಆಗಿರುವ ಹುಡುಗರೆಂದರೆ ಇಷ್ಟ!

ಹುಡುಗಿಯರು ಫಿಟ್ ಆಗಿರುವ ಹುಡುಗರನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಆರೋಗ್ಯ ಮತ್ತು ಫಿಟ್ನೆಸ್ ಬಗ್ಗೆ ಕಾಳಜಿ ವಹಿಸದವರನ್ನು ಹುಡುಗಿಯರು ದೂರ ಇಡುತ್ತಾರೆ. ಸಿಕ್ಸ್ ಪ್ಯಾಕ್ ಇಲ್ಲದಿದ್ದರೂ ಪರವಾಗಿಲ್ಲ, ಆದ್ರೆ ಕನಿಷ್ಠ ಫಿಟ್ ನೆಸ್ ಕಾಪಾಡಿಕೊಳ್ಳಬೇಕು. ತೊಡುವ ಬಟ್ಟೆಯಿಂದ ಹಿಡಿದು ಎಲ್ಲದರಲ್ಲೂ ಕ್ರಿಯಾಶೀಲತೆ ಇರಬೇಕು. ಯಾವಾಗಲೂ ಜೀವನಶೈಲಿ ಬದಲಾಯಿಸಿಕೊಳ್ಳುತ್ತಿರಬೇಕು. ಆಗ ಮಾತ್ರ ನೀವು ಹುಡುಗಿಯರನ್ನು ಮೆಚ್ಚಿಸಲು ಸಾಧ್ಯವಾಗುತ್ತದೆ. ಅಲ್ಲದೆ, ನೀವು ಪ್ರಾಮಾಣಿಕವಾಗಿರಬೇಕು ಮತ್ತು ನೀವು ತಪ್ಪು ಮಾಡಿದಾಗ ಒಪ್ಪಿಕೊಳ್ಳಬೇಕು. ಈ ಗುಣ ಹುಡುಗಿಯರಿಗೆ ತುಂಬಾ ಇಷ್ಟವಾಗುತ್ತದಂತೆ.

ಇದನ್ನೂ ಓದಿ; ಕೋಲಾರ ಕಾಂಗ್ರೆಸ್‌ ನಾಯಕರ ಹೈಡ್ರಾಮಾ; ಇದರ ಹಿಂದೆ ಯಾರಿದ್ದಾರೆ..?

ಇತರರನ್ನು ಕ್ಷಮಿಸುವ ಗುಣ ಇರಬೇಕು!

ಇತರರನ್ನು ಕ್ಷಮಿಸುವ ಗುಣವನ್ನು ಹುಡುಗರು ಹೊಂದಿರಬೇಕು. ಅಂತಹ ಹುಡುಗರನ್ನು ಹುಡುಗಿಯರು ಹೆಚ್ಚು ಇಷ್ಟಪಡುತ್ತಾರೆ. ಇನ್ನೊಂದು ಮುಖ್ಯವಾದ ವಿಷಯ..  ತನ್ನ ಜೊತೆಯಲ್ಲಿದ್ದಾಗ ತನ್ನನ್ನು ಸುರಕ್ಷಿತವಾಗಿಡಬಹುದು ಎಂಬ ನಂಬಿಕೆಯ ಬರುವಂತೆ ನೋಡಿಕೊಳ್ಳಬೇಕು. ಭವಿಷ್ಯದಲ್ಲಿ ಯಾವುದೇ ಸಂದರ್ಭದ ಎದುರಾದರೂ ಧೈರ್ಯ ತುಂಬುವಂತಹವರಾಗಿರಬೇಕು.. ಆಗ ಮಾತ್ರ ತಾಯಂದಿರ ಹೃದಯದಲ್ಲಿ ಸ್ಥಾನ ಪಡೆಯಲು ಸಾಧ್ಯ. ನೀವು ಈ ಗುಣಲಕ್ಷಣಗಳನ್ನು ಹೊಂದಿದ್ದೀರಾ..?

ಇದನ್ನೂ ಓದಿ; ಬೆಂಗಳೂರು ನೀರಿನ ಸಮಸ್ಯೆಗೆ ಪರಿಹಾರ ಸೂಚಿಸಿದ ಮೆಗಾಸ್ಟಾರ್‌ ಚಿರಂಜೀವಿ!

Share Post