ಕೋಲಾರ ಕಾಂಗ್ರೆಸ್ ಟಿಕೆಟ್ ಕಗ್ಗಂಟು; 5 ಕಾಂಗ್ರೆಸ್ ಶಾಸಕರ ರಾಜೀನಾಮೆ ಬೆದರಿಕೆ!
ಕೋಲಾರ; ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದೆ.. ಕಳೆದ ಬಾರಿಯಂತೆ ಈ ಬಾರಿಯೂ ಕೆ.ಹೆಚ್.ಮುನಿಯಪ್ಪ ವಿರುದ್ಧ ದೊಡ್ಡ ಬಂಡಾಯ ಶುರುವಾಗಿದೆ.. ಕರ್ನಾಟಕ ಸರ್ಕಾರದಲ್ಲಿ ಸಚಿವರೂ ಆಗಿರುವ ಕೆ.ಹೆಚ್.ಮುನಿಯಪ್ಪ ಅವರು ತಮ್ಮ ಅಳಿಯ ಚಿಕ್ಕ ಪೆದ್ದಣ್ಣಗೆ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದಾರೆ.. ಬಹುತೇಕ ಚಿಕ್ಕಪೆದ್ದಣ್ಣಗೆ ಟಿಕೆಟ್ ಸಿಗೋದು ಪಕ್ಕಾ ಆಗಿದೆ.. ಇದು ತಿಳಿಯುತ್ತಿದ್ದಂತೆ ಇಬ್ಬರು ಪರಿಷತ್ ಸದಸ್ಯರು ಸೇರಿ ಐವರು ಕಾಂಗ್ರೆಸ್ ಶಾಸಕರು ರಾಜೀನಾಮೆಗೆ ಮುಂದಾಗಿದ್ದಾರೆ.. ಇದು ಕಾಂಗ್ರೆಸ್ ಹೈಕಮಾಂಡ್‌ಗೆ ತಲೆಬಿಸಿ ತರಿಸಿದೆ..
ಇದನ್ನೂ ಓದಿ; ಬೂದಿಯಲ್ಲಿ ಮುಚ್ಚಿಟ್ಟರೆ 6 ತಿಂಗಳವರೆಗೂ ಟೊಮ್ಯಾಟೋ ಫ್ರೆಶ್!
ಚಿಕ್ಕಪೆದ್ದಣ್ಣ ವಿರುದ್ಧ ನಿಂತ ರಮೇಶ್‌ಕುಮಾರ್ ಬಣ;
ಕಳೆದ ಲೋಕಸಭಾ ಚುನಾವಣೆ ಸಮಯದಲ್ಲಿ ರಮೇಶ್‌ಕುಮಾರ್ ಬಣ ಹಾಗೂ ಕೆ.ಹೆಚ್.ಮುನಿಯಪ್ಪ ಬಣದ ನಡುವೆ ಬಿಗ್ ಫೈಟ್ ನಡೆದಿತ್ತು.. ರಮೇಶ್ ಕುಮಾರ್ ಬಣ ಕೆ.ಹೆಚ್.ಮುನಿಯಪ್ಪ ವಿರುದ್ಧ ನಿಂತಿದ್ದಕ್ಕಾಗಿಯೇ ಅವರು ಆಗ ಸೋತಿದ್ದರು.. ಆ ಜಿದ್ದು ಈಗಲೂ ಮುಂದವರೆದಿದೆ.. ಇತ್ತೀಚೆಗೆ ಕೋಲಾರದಲ್ಲಿ ನಡೆದ ಸಭೆ ವೇಳೆ ಕಿತ್ತಾಟ ನಡೆದಿತ್ತು.. ಎರಡೂ ಬಣದ ನಾಯಕರು ಪರಸ್ಪರ ಕೈಕೈ ಮಿಲಾಯಿಸಿಕೊಂಡಿದ್ದರು.. ಇದೀಗ ಕೆ.ಹೆಚ್.ಮುನಿಯಪ್ಪ ಅವರು ತಮ್ಮ ಅಳಿಯ ಚಿಕ್ಕಪೆದ್ದಣ್ಣ ಅವರಿಗೆ ಕೋಲಾರ ಲೋಕಸಭಾ ಟಿಕೆಟ್ ಕೇಳುತ್ತಿದ್ದಾರೆ.. ಆದ್ರೆ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಶಾಸಕರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ..
ಇದನ್ನೂ ಓದಿ; ಸಮುದ್ರದ ಉಪ್ಪು ನೀರಿಂದ ಚಲಿಸುತ್ತಂತೆ ಈ ಕಾರು!; ಹೊಸ ಆವಿಷ್ಕಾರ!
ಐದು ಶಾಸಕರು ರಾಜೀನಾಮೆ ನೀಡ್ತಿವಿ ಎಂದ ಕೊತ್ತೂರು;
ಕೊತ್ತೂರು ಮಂಜುನಾಥ್ ಅವರು ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕರು.. ಇವರು ತುಮಕೂರಿನಲ್ಲಿ ಮಾತನಾಡಿದ್ದು, ನಾವು ಐವರು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡುತ್ತೇವೆ.. ಚಿಕ್ಕಪೆದ್ದಣ್ಣಗೆ ಟಿಕೆಟ್ ನೀಡುವುದಕ್ಕೆ ನಮ್ಮ ವಿರೋಧ ಇದೆ ಎಂದು ಹೇಳಿದ್ದಾರೆ.. ಕೆ.ಹೆಚ್.ಮುನಿಯಪ್ಪ ಅವರ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡದಂತೆ ನಾವು ಒತ್ತಾಯ ಮಾಡಿದ್ದೇವೆ. ಒಂದು ವೇಳೆ ಟಿಕೆಟ್ ನೀಡಿದರೆ ಮಾಲೂರು ಶಾಸಕ ನಂಜೇಗೌಡ, ಸಚಿವ ಎಂ.ಸಿ.ಸುಧಾಕರ್, ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಅನಿಲ್ ಕುಮಾರ್, ನಜೀರ್ ಅಹ್ಮದ್ ಜೊತೆ ಸೇರಿ ನಾನೂ ನಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುತ್ತೇವೆ ಎಂದು ಕೊತ್ತೂರು ಮಂಜುನಾಥ್ ಹೇಳಿದ್ದಾರೆ.
ಇದನ್ನೂ ಓದಿ; ಕಣ್ಣು ದೊಡ್ಡದು ಮಾಡಿದ ಸುಧಾಕರ್..!; ʻಕೈʼ ಶಾಸಕರನ್ನೇ ಬುಟ್ಟಿಗೆ ಬೀಳಿಸಿದ್ರಾ ಮಾಜಿ ಸಚಿವ..?
ಕೋಲಾರ, ಚಿಕ್ಕಬಳ್ಳಾಪುರ ಗೆಲ್ಲಿಸುವ ಜವಾಬ್ದಾರಿ ನಮ್ಮದು;
ಕೋಲಾರ ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಮ್ಮದು.. ಆದ್ರೆ ನಾವು ಹೇಳಿದವರಿಗೆ ಟಿಕೆಟ್ ಕೊಡಬೇಕು.. ಕೆ.ಹೆಚ್.ಮುನಿಯಪ್ಪ ಅಳಿಯನಿಗೆ ಟಿಕೆಟ್ ಕೊಟ್ಟರೆ ನಾವು ಖಂಡಿತವಾಗಿಯೂ ಅಧಿಕಾರದಲ್ಲಿ ಇರುವುದಿಲ್ಲ.. ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ.. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರಿಗೆ ದೊಡ್ಡ ತಲೆನೋವಾಗಿದೆ.. ಒಂದು ಕಡೆ ಕೆ.ಹಚ್.ಮುನಿಯಪ್ಪ ಅವರು ಹೈಕಮಾಂಡ್‌ಗೆ ಹತ್ತಿರದವರು.. ಹೈಕಮಾಂಡ್ ಮಟ್ಟದಲ್ಲೇ ಅವರು ಲಾಬಿ ಮಾಡಿದ್ದಾರೆ.. ಇದರ ಜೊತೆಗೆ ಟಿಕೆಟ್ ಆಕಾಂಕ್ಷಿಯಾಗಿರುವ ಎಲ್.ಹನುಮಂತಯ್ಯ ಅವರ ಬಳಿ ಹಣವಿಲ್ಲ.. ಹೀಗಾಗಿ ಚಿಕ್ಕಪೆದ್ದಣ್ಣಗೆ ಟಿಕೆಟ್ ಕೊಡುವುದೇ ಸೂಕ್ತ ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಇದೆ.. ಆದ್ರೆ ಇದನ್ನು ಕಾಂಗ್ರೆಸ್ ಶಾಸಕರೇ ತೀವ್ರವಾಗಿ ವಿರೋಧಿಸುತ್ತಿದ್ದಾರೆ.. ಹೀಗಾಗಿ ಹೈಕಮಾಂಡ್ ಏನು ಮಾಡುತ್ತೇ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ..
ಇದನ್ನೂ ಓದಿ; ಚಿಕ್ಕಬಳ್ಳಾಪುರಕ್ಕೆ ಯಾರು ಕಾಂಗ್ರೆಸ್ ಅಭ್ಯರ್ಥಿ..?; ಸೋನಿಯಾ ಅಂಗಳದಲ್ಲಿ ಚೆಂಡು..!