Politics

ಮಂಡ್ಯ ಕ್ಷೇತ್ರಕ್ಕೆ ಕುಮಾರಸ್ವಾಮಿ ಫಿಕ್ಸ್‌; ಸಂಜೆ ಅಧಿಕೃತ ಘೋಷಣೆ!

ಮಂಡ್ಯ; ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಜೆಡಿಎಸ್‌-ಬಿಜೆಪಿ ಮೈತ್ರಿ ಅಭ್ಯರ್ಥಿ ಯಾರು ಅನ್ನೋ ಕುತೂಹಲಕ್ಕೆ ಕೊನೆಗೂ ಉತ್ತರ ಸಿಕ್ಕಿದೆ.. ಮಾಜಿ ಸಿಎಂ ಕುಮಾರಸ್ವಾಮಿಯವರೇ ಅಭ್ಯರ್ಥಿಯಾಗೋದು ಪಕ್ಕಾ ಆಗಿದೆ.. ಸಂಜೆ ಈ ಬಗ್ಗೆ ಅಧಿಕೃತ ಘೋಷಣೆಯಾಗಲಿದೆ.. ಸಂಜೆ ಜೆಡಿಎಸ್‌ ಕೋರ್‌ ಕಮಿಟಿ ಸಭೆ ನಡೆಯಲಿದ್ದು, ಸಭೆಯ ನಂತರ ಜೆಡಿಎಸ್‌ ಪಾಲಿನ ಮೂರೂ ಕ್ಷೇತ್ರಗಳಿಗೆ ಅಧಿಕೃತವಾಗಿ ಅಭ್ಯರ್ಥಿಗಳನ್ನು ಪ್ರಕಟ ಮಾಡಲಾಗುತ್ತದೆ..

ಇದನ್ನೂ ಓದಿ; ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ; ಬಾಂಬರ್‌ ಸಂಪರ್ಕದಲ್ಲಿದ್ದ ಇಬ್ಬರು ವಶ!

ಚನ್ನಪಟ್ಟಣ ಕಾರ್ಯಕರ್ತರ ಮನವೊಲಿಸಿದ ಕುಮಾರಣ್ಣ;

ಕುಮಾರಸ್ವಾಮಿಯವರು ಮಂಡ್ಯದಲ್ಲಿ ಸ್ಪರ್ಧೆ ಮಾಡಲೇಬೇಕು ಅಂತ ಮಂಡ್ಯದ ಜನ ಪಟ್ಟು ಹಿಡಿದಿದ್ದರು.. ಆದ್ರೆ ಚನ್ನಪಟ್ಟಣದ ಜನ ಮಾತ್ರ ಯಾವ ಕಾರಣಕ್ಕೂ ಚನ್ನಪಟ್ಟಣ ಬಿಟ್ಟುಹೋಗಬಾರದು ಎಂದು ಪಟ್ಟು ಹಿಡಿದಿದ್ದರು.. ಆದ್ರೆ ಮಂಡ್ಯದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್‌ ಚಂದ್ರು ಜೊತೆ ಫೈಟ್‌ ಮಾಡಬೇಕಾದರೆ ಪ್ರಬಲ ಅಭ್ಯರ್ಥಿ ಬೇಕಿತ್ತು.. ನಿಖಿಲ್‌ ಕುಮಾರಸ್ವಾಮಿಯವರಾಗಲೀ, ಪುಟ್ಟರಾಜು ಅವರಾಗಲೀ ಸಾಕಾಗುತ್ತಿರಲಿಲ್ಲ.. ಈ ಕಾರಣಕ್ಕಾಗಿ ಕುಮಾರಸ್ವಾಮಿಯವರೇ ಕಣಕ್ಕಿಳಿಯಲು ತೀರ್ಮಾನ ಮಾಡಿದ್ದಾರೆ.. ಕುಮಾರಸ್ವಾಮಿಯವರು ಚೆನ್ನಪಟ್ಟಣದ ಜನರನ್ನು ಸಮಾಧಾನ ಮಾಡಿದ್ದು, ಮಂಡ್ಯದಲ್ಲಿ ಸ್ಪರ್ಧೆಗೆ ರೆಡಿಯಾಗಿದ್ದಾರೆ ಎಂದು ತಿಳಿದುಬಂದಿದೆ..

ಇದನ್ನೂ ಓದಿ; ಮೈಸೂರು ಗೆಲ್ಲಲು ʻಆಪರೇಷನ್‌ ಹಸ್ತʼ; ಯಡಿಯೂರಪ್ಪ ಆಪ್ತರೇ ಸಿಎಂ ಸಿದ್ದರಾಮಯ್ಯ ಟಾರ್ಗೆಟ್‌

ಪಕ್ಷ ಉಳಿಸುವುದಕ್ಕಾಗಿ ಮಂಡ್ಯದಲ್ಲಿ ಸ್ಪರ್ಧೆ ಅನಿವಾರ್ಯ;

ಮಂಡ್ಯದಲ್ಲಿ ಕಾಂಗ್ರೆಸ್‌ ಪಕ್ಷ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.. ಸ್ಟಾರ್‌ ಚಂದ್ರ ಹಣ ಬಲ, ಜನ ಬಲ ಎರಡೂ ಹೊಂದಿದ್ದಾರೆ.. ಇದರ ಜೊತೆಗೆ ಈ ಬಾರಿ ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಬಹುಪಾಲು ಸ್ಥಾನಗಳನ್ನು ಗೆದ್ದುಕೊಂಡಿದೆ.. ಹೀಗಾಗಿ ಕಾಂಗ್ರೆಸ್‌ ಪರವಾದಂತಹ ವಾತಾವರಣವಿದೆ.. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಸೋಲಿಸಬೇಕೆಂದರೆ ಪ್ರಬಲ ಅಭ್ಯರ್ಥಿಯೇ ಬೇಕು.. ಇದಕ್ಕಾಗಿಯೇ ಮಂಡ್ಯದ ಜನ ಕುಮಾರಸ್ವಾಮಿಯವರೇ ಅಭ್ಯರ್ಥಿಯಾಗಬೇಕು ಎಂದು ಪಟ್ಟು ಹಿಡಿದಿದ್ದರು.. ಆದ್ರೆ ಚನ್ನಪಟ್ಟಣದ ಕಾರ್ಯಕರ್ತರು ನೀವು ಅಲ್ಲಿಗೆ ಹೋದರೆ ನಾವು ಅನಾಥರಾಗುತ್ತೇವೆ ಎಂದು ಅಳಲು ತೋಡಿಕೊಂಡಿದ್ದರು.. ಆದ್ರೆ ಕುಮಾರಸ್ವಾಮಿ, ಇಷ್ಟು ನಾನು ನಿಮ್ಮ ಜೊತೆ  ನಿಂತಿದ್ದೇನೆ.. ಮುಂದೆಯೂ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ.. ಪಕ್ಷದ ಉಳಿವಿಗಾಗಿ ಮಂಡ್ಯಕ್ಕೆ ಹೋಗಲು ಅವಕಾಶ ಮಾಡಿಕೊಡಿ ಎಂದು ಕೇಳಿದ್ದಾರೆ ಎಂದು ತಿಳಿದುಬಂದಿದೆ.. ಈ ಹಿನ್ನೆಲೆಯಲ್ಲಿ ಚನ್ನಪಟ್ಟಣದ ಕಾರ್ಯಕರ್ತರು ಕೂಡಾ ಮಂಡ್ಯದಲ್ಲಿ ಕುಮಾರಸ್ವಾಮಿ ಸ್ಪರ್ಧೆಗೆ ಗ್ರೀನ್‌ ಸಿಗ್ನಲ್‌ ತೋರಿಸಿದ್ದಾರೆ.

ಇದನ್ನೂ ಓದಿ; ಜೋಳದ ರೊಟ್ಟಿ ತಿಂದವರು ಗಟ್ಟಿಯಾಗಿರುತ್ತಾರೆ..!; ಯಾಕೆ ಗೊತ್ತಾ..?

ಸಂಜೆ ಜೆಡಿಎಸ್‌ ಕೋರ್‌ ಕಮಿಟಿ ಸಭೆ;

ಸಂಜೆ ಜೆಡಿಎಸ್‌ ಪಾಲಿಗೆ ಬಂದಿರುವ ಹಾಸನ, ಮಂಡ್ಯ ಹಾಗೂ ಕೋಲಾರ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಫೈನಲ್‌ ಮಾಡುವ ವಿಚಾರವಾಗಿ ಕೋರ್‌ ಕಮಿಟಿ ಸಭೆ ಕರೆಯಲಾಗಿದೆ.. ಸಭೆಯಲ್ಲಿ ಅಧಿಕೃತವಾಗಿ ಮೂವರು ಅಭ್ಯರ್ಥಿಗಳ ಹೆಸರನ್ನು ಫೈನಲ್‌ ಮಾಡಲಾಗುತ್ತದೆ.. ಸಭೆಯ ನಂತರ ಅಧಿಕೃತವಾಗಿ ಅಭ್ಯರ್ಥಿಗಳನ್ನು ಹೆಸರುಗಳನ್ನು ಘೋಷಣೆ ಮಾಡಲಾಗುತ್ತದೆ.. ಈಗಾಗಲೇ ಹಾಸನಕ್ಕೆ ಪ್ರಜ್ವಲ್‌ ರೇವಣ್ಣ, ಮಂಡ್ಯಕ್ಕೆ ಕುಮಾರಸ್ವಾಮಿ ಅಭ್ಯರ್ಥಿಗಳಾಗೋದು ಪಕ್ಕಾ ಆಗಿದೆ.. ಕೋಲಾರಕ್ಕೆ ಯಾರಿಗೆ ಟಿಕೆಟ್‌ ಕೊಡ್ತಾರೆ ಅನ್ನೋದು ಕುತೂಹಲ ಇದೆ.. ಸಂಜೆ ಈ ಕುತೂಹಲಕ್ಕೆ ಉತ್ತರ ಸಿಗಲಿದೆ..

ಇದನ್ನೂ ಓದಿ; ಬಾಳೆಹಣ್ಣಿಗಿಂತ ಬಾಳೆಕಾಯಿ ಹೆಚ್ಚು ಆರೋಗ್ಯವಂತೆ; ಇದ್ರಿಂದ ಏನೆಲ್ಲಾ ಪ್ರಯೋಜನ..?

ಅನಾರೋಗ್ಯದ ನಡುವೆಯೂ ಕುಮಾರಸ್ವಾಮಿ ಸ್ಪರ್ಧೆಗೆ ನಿರ್ಧಾರ;

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಕೇವಲ 19 ಸ್ಥಾನಗಳಲ್ಲಿ ಗೆದ್ದಿತ್ತು.. ಇದರಿಂದಾಗಿ ಜೆಡಿಎಸ್‌ ಜನಪ್ರಿಯತೆ ಕುಸಿದಿದೆ.. ಇನ್ನು ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಮೈತ್ರಿ ಪಕ್ಷ ಬಿಜೆಪಿ ನಾಯಕರು ಜೆಡಿಎಸ್‌ಗೆ ಕೇವಲ 3 ಕ್ಷೇತ್ರ ಬಿಟ್ಟುಕೊಟ್ಟಿದ್ದಾರೆ.. ಹೀಗಾಗಿ ಮೂರೂ ಕ್ಷೇತ್ರಕ್ಕೆ ಗೆದ್ದರೆ ಜೆಡಿಎಸ್‌ಗೆ ಶಕ್ತಿ ಬರಲಿದೆ.. ಜೆಡಿಎಸ್‌ ಕಾರ್ಯಕರ್ತರಲ್ಲಿ ಚೈತನ್ಯ ಮೂಡಲಿದೆ.. ಈ ಕಾರಣಕ್ಕಾಗಿಯೇ ಕುಮಾರಸ್ವಾಮಿಯವರು ಅನಾರೋಗ್ಯದ ನಡುವೆಯೂ ಮಂಡ್ಯದಲ್ಲಿ ಸ್ಪರ್ಧೆಗೆ ರೆಡಿಯಾಗಿದ್ದಾರೆ.. ಮಾರ್ಚ್‌ 21 ರಂದು ಚೆನ್ನೈನಲ್ಲಿ ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಕುಮಾರಸ್ವಾಮಿಯವರು ವಿಶ್ರಾಂತಿ ಪಡೆಯುತ್ತಿದ್ದಾರೆ.. ಇಂದು ಸಭೆಯಲ್ಲಿ ಪಾಲ್ಗೊಳ್ಳುವ ಅವರು ಎರಡು ಮೂರು ದಿನಗಳಲ್ಲಿ ಸಕ್ರಿಯ ರಾಜಕಾರಣಕ್ಕೆ ಮರಳುವ ಸಾಧ್ಯತೆ ಇದೆ..

ಇದನ್ನೂ ಓದಿ; ಮಲ್ಲಿಗೆ ಹೂವಿನ ಎಣ್ಣೆಯಿಂದ ನೋವು ಮಾಯ, ಮಾನಸಿಕ ಒತ್ತಡ ದೂರ!

 

Share Post