ಮತ ಹಾಕಲು ಕ್ಯೂ ನಿಲ್ಲದ ಶಾಸಕ; ಪ್ರಶ್ನಿಸಿದ್ದಕ್ಕೆ ಹಲ್ಲೆ, ಮತದಾರನಿಂದಲೂ ಕಪಾಳಮೋಕ್ಷ!
ಗುಂಟೂರು; ಇತ್ತೀಚೆಗೆ ಎಷ್ಟೇ ದೊಡ್ಡವರಾದರೂ, ರಾಜಕಾರಣಿಗಳು, ಸಚಿವರಾದರೂ ಮತದಾನ ಮಾಡುವಾಗ ಕ್ಯೂನಲ್ಲಿ ನಿಲ್ಲುತ್ತಾರೆ.. ಅದು ನಿಯಮ ಕೂಡಾ.. ಆದ್ರೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಶಾಸಕನೊಬ್ಬ ಕ್ಯೂನಲ್ಲಿ ನಿಲ್ಲದೆ ನೇರವಾಗಿ ಹೋಗಿ ಮಾತ ಹಾಕಲು ಯತ್ನಿಸಿದ್ದಾರೆ.. ಈ ವೇಳೆ ಮತದಾರರೊಬ್ಬರು ಪ್ರಶ್ನೆ ಮಾಡಿದ್ದಾರೆ.. ಇದರಿಂದ ರೊಚ್ಚಿಗೆದ್ದ ಶಾಸಕ ಮತದಾರನಿಗೆ ಕಪಾಳಮೋಕ್ಷ ಮಾಡಿದ್ದಾರೆ.. ಇದರಿಂದಾಗಿ ಮತದಾರನೂ ಕೂಡಾ ಶಾಸಕರ ಕಪಾಳಕ್ಕೆ ಹೊಡೆದಿದ್ದಾನೆ..
ತೆನಾಲಿ ವಿಧಾನಸಭಾ ಕ್ಷೇತ್ರದಲ್ಲಿ ಈ ಘಟನೆ ನಡೆದಿದೆ.. ಇಲ್ಲಿ ವೈಎಸ್ಆರ್ಸಿಪಿ ಶಾಸಕ ಶಿವಕುಮಾರ್ ಮತದಾನ ಮಾಡಲು ಐತಾನಗರದ ಮತಗಟ್ಟೆಗೆ ಬಂದಿದ್ದರು.. ಈ ವೇಳೆ ಅವರು ಸರತಿ ಸಾಲಿನಲ್ಲಿ ನಿಲ್ಲದೆ ನೇರವಾಗಿ ಮತ ಹಾಕಲು ಹೋಗಿದ್ದಾರೆ.. ಇದನ್ನು ಮತದಾರರೊಬ್ಬರು ಪ್ರಶ್ನೆ ಮಾಡಿದ್ದಾರೆ.. ಇದರಿಂದ ಸಿಟ್ಟಿಗೆದ್ದ ಶಾಸಕ ಸೊಕ್ಕಿನಿಂದ ಅವನ ಬಳಿಗೆ ಹೋಗಿ ಕಪಾಳಮೋಕ್ಷ ಮಾಡಿದ್ದಾರೆ.. ಇದ್ರಿಂದ ಮತ್ತಷ್ಟು ಆಕ್ರೋಶಗೊಂಡ ಮತದಾರ ಕೂಡಾ ಶಾಸಕ ಶಿವಕುಮಾರ್ ಕೆನ್ನೆಗೆ ಬಾರಿಸಿದ್ದಾರೆ..
ಮತದಾರ ಶಾಸಕನ ಕೆನ್ನೆಗೆ ಬಾರಿಸುತ್ತಿದ್ದಂತೆ ಶಾಸಕನ ಬೆಂಬಲಿಗರು ರೊಚ್ಚಿಗೆದ್ದಿದ್ದಾರೆ.. ಮತದಾನ ಮೇಲೆ ಮನಬಂದಂತೆ ಥಳಿಸಿದ್ದಾರೆ.. ಇದರಿಂದಾಗಿ ಮತದಾನ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ..