Politics

ಬಿಜೆಪಿ-ಜೆಡಿಎಸ್‌ ಮೈತ್ರಿ ಹಾಗೂ ಕೋಲಾರ ಕ್ಷೇತ್ರದ ಬಗ್ಗೆ ಹೆಚ್ಡಿಕೆ ಹೇಳಿದ್ದೇನು..?

ಬೆಂಗಳೂರು; ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಹೊಂದಾಣಿಕೆ ಮಾಡಿಕೊಂಡಿವೆ.. ಆದ್ರೆ ಜೆಡಿಎಸ್‌ ಸೀಟ್‌ಗಳ ಬಗ್ಗೆ ಬಿಜೆಪಿ ಇನ್ನೂ ಕ್ಲಾರಿಟಿ ಕೊಟ್ಟಿಲ್ಲ.. ಇದರಿಂದಾಗಿ ಮಾಜಿ ಸಿಎಂ ಕುಮಾರಸ್ವಾಮಿ ನಿನ್ನೆ ಅಸಮಾಧಾನ ವ್ಯಕ್ತಪಡಿಸಿದ್ದರು.. ಇಂದು ಈ ಬಗ್ಗೆ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.. ನಾವು ಮೊದಲಿನಿಂದಲೂ ಜೆಡಿಎಸ್‌ಗೆ ಮೂರು ಕ್ಷೇತ್ರ ಬಿಟ್ಟುಕೊಡುವಂತೆ ಕೇಳುತ್ತಿದ್ದೇವೆ. ಆದ್ರೆ ಈ ಕ್ಷಣದವರೆಗೆ ಬಿಜೆಪಿ ನಾಯಕರು ಕ್ಷೇತ್ರ ಹಂಚಿಕೆ ಅಂತಿಮಗೊಳಿಸಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಇದನ್ನೂ ಓದಿ; ಬಿಜೆಪಿ- ಜೆಡಿಎಸ್ ಮೈತ್ರಿ ಸುಸೂತ್ರವಾಗಿ ಮುಂದುವರೆಯಲಿದೆ; ವಿಜಯೇಂದ್ರ ವಿಶ್ವಾಸ

ಬಿಜೆಪಿ ಹೈಕಮಾಂಡ್‌ ಇದುವರೆಗೂ ನಮ್ಮನ್ನು ಗೌರವಯುತವಾಗಿಯೇ ನೋಡಿಕೊಂಡಿದೆ.. ನಮ್ಮ ನಡುವೆ ಯಾವುದೇ ವಿಶ್ವಾಸ ಕಡಿಮೆಯಾಗಿಲ್ಲ. ನಮ್ಮ ಶಕ್ತಿ ಬಗ್ಗೆ ಅವರೊಂದಿಗೆ ಮಾತನಾಡಿದ್ದೇನೆ ಎಂದು ಕುಮಾರಸ್ವಾಮಿ ಸ್ಪಷ್ಟನೆ ಕೊಟ್ಟಿದ್ದಾರೆ.

ಮೈತ್ರಿಗೆ ಡಿ.ಕೆ.ಶಿವಕುಮಾರ್‌ ನಡವಳಿಕೆಯೇ ಕಾರಣ;

  ಇನ್ನು ಇದೇ ವೇಳೆ ಕುಮಾರಸ್ವಾಮಿಯವರು ಡಿ.ಕೆ.ಶಿವಕುಮಾರ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.. ನಾವು ಬಿಜೆಪಿ ಜೊತೆ ಹೋಗೋದಕ್ಕೆ ಡಿ.ಕೆ.ಶಿವಕುಮಾರ್‌ ಅವರೇ ಕಾರಣ ಎಂದು ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.. ಈ ಹಿಂದೆ ನಾನು ಸಿಎಂ ಆಗಿದ್ದಾಗ ಡಿ.ಕೆ.ಶಿವಕುಮಾರ್‌ ಅವರು ಹೇಗೆ ನಡೆದುಕೊಂಡು ಅನ್ನೋದು ನಮಗೆ ಗೊತ್ತಿದೆ.. ಬೆಂಗಳೂರು ಗ್ರಾಮಾಂತರದಲ್ಲಿ ಮಂಜುನಾಥ್‌ ಅವರನ್ನು ಕಣಕ್ಕಿಳಿಸೋದಕ್ಕೂ ನೀವೇ ಕಾರಣ ಎಂದು ಡಿ.ಕೆ.ಶಿವಕುಮಾರ್‌ ವಿರುದ್ಧ ವಾಗ್ದಾಳಿ ಮಾಡಿದರು..

ನಮ್ಮ ಶಾಕಸರ ಸೆಳೆಯಲು ಪ್ರಯತ್ನ;

  ಡಿ.ಕೆ.ಶಿವಕುಮಾರ್‌ ಅವರ ನಡವಳಿಕೆ ಕಾರಣದಿಂದಲೇ ನಾವು ಈಗ ಬಿಜೆಪಿ ಜೊತೆಗೆ ಹೋಗಿದ್ದೇನೆ.. ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌ ಸದೃಢವಾಗಿತ್ತು. ನಿಮ್ಮ ಜೊತೆ ಸರ್ಕಾರ ಮಾಡಿದ ನಂತರ ನಮ್ಮ ಪಕ್ಷವನ್ನು ಹಾಳು ಮಾಡಿದ್ದೀರಿ.. ಈ ಕಾರಣಕ್ಕಾಗಿ ನಾವು ಬಿಜೆಪಿ ಜೊತೆ ಹೋಗಿದ್ದೇನೆ.. ಈಗ ನೀವು ನಮ್ಮ ಕಾರ್ಯಕರ್ತರು ಹಾಗೂ ಶಾಸಕರನ್ನು ಸೆಳೆಯಲು ಪ್ರಯತ್ನ ಮಾಡುತ್ತಿದ್ದೀರಿ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
    ಡಿ.ಕೆ.ಶಿವಕುಮಾರ್‌ ಈಗ ಹೇಳುತ್ತಿದ್ದಾರೆ. ನಮಗೆ ಮೊದಲೇ ಗೊತ್ತಿತ್ತು ಮೈತ್ರಿ ಮುರಿದು ಬೀಳುತ್ತೆ ಅಂತ.. ಆದ್ರೆ ಬಿಜೆಪಿ ನಾಯಕರ ಜೊತೆ ನಾವು ಚೆನ್ನಾಗಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.  ನನ್ನ ಪಕ್ಷದ ಶಾಸಕರನ್ನ ಸೆಳೆಯೋಕೆ ನೀವು ಏನೆಲ್ಲಾ ಮಾಡಿದ್ದೀರಾ ಅನ್ನೋದು ಗೊತ್ತಿದೆ.. ಇವತ್ತು ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡ್ತಾ ಇದ್ದೀರಾ. ನೀವು ನಮ್ಮನ್ನ ಮುಗಿಸಲು ಹಂತ ಹಂತವಾಗಿ ಏನು ಮಾಡಿದ್ದೀರಾ ಅನ್ನೋದು ಗೊತ್ತಿದೆ ಎಂದು ಹೆಚ್‌ಡಿಕೆ ಕಿಡಿಕಾರಿದ್ದಾರೆ.
Share Post