Politics

ಶಿವಮೊಗ್ಗದಲ್ಲಿ ಈಶ್ವರಪ್ಪ ಬಂಡಾಯ ಫಿಕ್ಸ್‌; ಯಡಿಯೂರಪ್ಪ ಪುತ್ರನಿಗೆ ಗೆಲುವು ಕಷ್ಟವಾಗುತ್ತಾ..?

ಶಿವಮೊಗ್ಗ; ಬಿಜೆಪಿ ನಾಯಕ ಈಶ್ವರಪ್ಪ ಸಾಕಷ್ಟು ಗರಂ ಆಗಿದ್ದಾರೆ.. ಈ ಬಾರಿ ಅವರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆಸೋದಕ್ಕೆ ರೆಡಿ ಎಂಬಂತೆ ವರ್ತಿಸುತ್ತಿದ್ದಾರೆ.. ಇಂದು ವೇಳೆ ಬರುತ್ತಿರುವ ಸುದ್ದಿಗಳಂತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕೆ.ಎಸ್.ಈಶ್ವರಪ್ಪ ಅವರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದರೆ ಯಡಿಯೂರಪ್ಪ ಪುತ್ರ ವಿಜಯೇಂದ್ರಗೆ ಗೆಲ್ಲೋದು ತುಂಬಾನೇ ಕಷ್ಟ ಆಗುತ್ತೆ.. ಕಾಂಗ್ರೆಸ್‌ನ ಗೀತಾ ಶಿವರಾಜ್‌ಕುಮಾರ್‌ ಗೆಲುವಿನಗೆ ಈಶ್ವರಪ್ಪ ಅನುಕೂಲ ಮಾಡಿಕೊಡಬಹುದು ಎಂದೇ ಲೆಕ್ಕಾಚಾರ ಹಾಕಲಾಗುತ್ತಿದೆ.

ಇದನ್ನೂ ಓದಿ;ಚಿಕ್ಕಬಳ್ಳಾಪುರ; ಸುಧಾಕರ್‌ಗೆ ಕೈತಪ್ಪುತ್ತಾ ಬಿಜೆಪಿ ಟಿಕೆಟ್‌..?; ಅಲೋಕ್‌ ಪರ ಅಷ್ಟೊಂದು ಒಲವು ಯಾಕೆ..?

ಈಶ್ವರಪ್ಪ ಪುತ್ರನಿಗೆ ಟಿಕೆಟ್‌ ತಪ್ಪಿಸಿದರಾ ಯಡಿಯೂರಪ್ಪ..?

ಮಾಜಿ ಸಿಎಂ ಯಡಿಯೂರಪ್ಪ ಅವರು ಈಶ್ವರಪ್ಪ ಅವರ ಪುತ್ರ ಕಾಂತೇಶ್‌ಗೆ ಹಾವೇರಿ ಲೋಕಸಭಾ ಕ್ಷೇತ್ರದಿಂದ ಟಿಕೆಟ್‌ ಕೊಡಿಸೋದಾಗಿ ಭರವಸೆ ನೀಡಿದ್ದರು.. ಈ ಹಿನ್ನೆಲೆಯಲ್ಲಿ ಕಾಂತೇಶ್‌ ಅವರು ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಓಡಾಡಿ ಪಕ್ಷ ಸಂಘಟನೆ ಮಾಡಿದ್ದರು.. ಆದ್ರೆ ಅಲ್ಲಿ ಬಸವರಾಜ ಬೊಮ್ಮಾಯಿಯವರಿಗೆ ಟಿಕೆಟ್‌ ನೀಡಲಾಗಿದೆ.. ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಈಶ್ವರಪ್ಪ ತಮ್ಮ ಪುತ್ರನಿಗೆ ಶಿವಮೊಗ್ಗ ಕ್ಷೇತ್ರದಿಂದ ಟಿಕೆಟ್‌ ಕೇಳಿದ್ದರು.. ಆಗಲೂ ಟಿಕೆಟ್‌ ತಪ್ಪಿಸಲಾಗಿತ್ತು. ಈಗಲೂ ಕಾಂತೇಶ್‌ಗೆ ಟಿಕೆಟ್‌ ತಪ್ಪಿಸಲಾಗಿದೆ.. ಯಡಿಯೂರಪ್ಪ ಅವರೇ ನಮ್ಮ ಪುತ್ರನಿಗೆ ಟಿಕೆಟ್‌ ತಪ್ಪಿಸಿದ್ದಾರೆ ಎಂದು ಈಶ್ವರಪ್ಪ ಗರಂ ಆಗಿದ್ದಾರೆ.. ನಾನು ಯಡಿಯೂರಪ್ಪ ಅವರ ಮನೆಗೇ ಹೋಗಿ ನಮ್ಮ ಪುತ್ರನಿಗೆ ಟಿಕೆಟ್‌ ಕೇಳಿದ್ದೆ. ಕೊಡಿಸುತ್ತೇನೆ ಎಂದು ಹೇಳಿದ್ದರು.. ಆದ್ರೆ ಈಗ ಕೊಟ್ಟ ಮಾತು ಉಳಿಸಿಕೊಂಡಿಲ್ಲ ಎಂದು ಈಶ್ವರಪ್ಪ ಕಿಡಿಕಾರಲು ಶುರು ಮಾಡಿದ್ದಾರೆ.

ಇದನ್ನೂ ಓದಿ; ವಿರೋಧಿಗಳಿಗೆ ಟಿಕೆಟ್‌ ತಪ್ಪಿಸಿದರಾ ಮಾಜಿ ಸಿಎಂ ಯಡಿಯೂರಪ್ಪ?; ಬಂಡಾಯಕ್ಕೆ ನಲುಗುತ್ತಾ ಕಮಲ ಪಕ್ಷ?

ನಾಳೆ ಬೆಂಬಲಿಗರ ಸಭೆ ಕರೆದಿರುವ ಕೆ.ಎಸ್‌.ಈಶ್ವರಪ್ಪ;

ಮಗನಿಗೆ ಟಿಕೆಟ್‌ ಕೈತಪ್ಪೋದು ಎರಡು ದಿನದ ಹಿಂದೆಯೇ ಈಶ್ವರಪ್ಪ ಅವರಿಗೆ ಗೊತ್ತಾಗಿತ್ತು.. ಹೀಗಾಗಿ ಆಗಲೇ ಅಸಮಾಧಾನ ಗೊಂಡಿದ್ದರು..  ಮಗನಿಗೆ ಟಿಕೆಟ್‌ ಕೊಡದಿದ್ದರೆ ಶಿವಮೊಗ್ಗದಿಂದ ನೀವೇ ಪಕ್ಷೇತರರಾಗಿ ಸ್ಪರ್ಧೆ ಮಾಡಿ ಎಂದು ಅವರ ಬೆಂಬಲಿಗರು ಪಟ್ಟು ಹಿಡಿದಿದ್ದರು.. ಅದಕ್ಕಾಗಿ ಇಂದು ಈಶ್ವರಪ್ಪ ಬೆಂಬಲಿಗರ ಸಭೆ ಕರೆದಿದ್ದರು.. ಆದ್ರೆ ಸಭೆಯನ್ನು ನಾಳೆಗೆ ಮುಂದೂಡಲಾಗಿದೆ.. ನಾಳೆ ಈಶ್ವರಪ್ಪ ಬೆಂಬಲಿಗರೊಂದಿಗೆ ಚರ್ಚೆ ಮಾಡಲಿದ್ದಾರೆ. ಈ ಬಗ್ಗೆ ಅವರೇ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಬೆಂಬಲಿಗರೆಲ್ಲಾ ಶಿವಮೊಗ್ಗ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಕೇಳುತ್ತಿದ್ದಾರೆ. ಆದ್ರೆ ನಾನು ಇನ್ನೂ ಯಾವ ನಿರ್ಧಾರವನ್ನೂ ಮಾಡಿಲ್ಲ. ಇದರಲ್ಲಿ ನನ್ನ ಭವಿಷ್ಯ, ರಾಜ್ಯದ ಭವಿಷ್ಯ, ಪಕ್ಷದ ಭವಿಷ್ಯ ಅಡಗಿದೆ.  ನಾಳೆ ನಾನು ಬೆಂಬಲಿಗರ ಸಭೆ ನಡೆಸುತ್ತೇನೆ. ಅನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಈಶ್ವರಪ್ಪ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ; ಕಾಂತೇಶ್‌ಗೆ ಟಿಕೆಟ್‌ ಇಲ್ಲ, ಶೆಟ್ಟರ್‌ಗೆ ಟಿಕೆಟ್‌ ಕನ್ಫರ್ಮ್‌ ಇಲ್ಲ!

ತಾಯಿಯ ಕುತ್ತಿಗೆ ಹಿಸುಕುತ್ತಿದ್ದಾರೆ;

ಪ್ರತಾಪ ಸಿಂಹ, ಸಿ.ಟಿ.ರವಿ ಹಾಗೂ ನಿಮಗೆ ಟಿಕೆಟ್‌ ನೀಡಿಲ್ಲ. ನಿಷ್ಠಾವಂತರಿಗೇ ಟಿಕೆಟ್‌ ನೀಡಿಲ್ಲ. ಈ ಮೂಲಕ ತಾಯಿಯ ಕತ್ತನ್ನೇ ಹಿಸುಕು ಪ್ರಯತ್ನ ನಡೆದಿದೆ. ಹೀಗಾಗಿ ನಿಮ್ಮ ವೈಯಕ್ತಿಕ ಸಾಧನೆಗಾಗಿ ಒಂದು ನಿರ್ಧಾರ ತೆಗೆದುಕೊಳ್ಳಿ ಎಂದು ಈಶ್ವರಪ್ಪ ಅವರನ್ನು ಬೆಂಬಲಿಗರು ಒತ್ತಾಯಿಸುತ್ತಿದ್ದಾರಂತೆ. ಹೀಗಾಗಿ ಸಭೆ ಕರೆದಿದ್ದೇನೆ. ಸಭೆಯಲ್ಲಿ ಏನು ಚರ್ಚೆಯಾಗುತ್ತೆ ನೋಡಿಕೊಂಡು ಮುಂದಿನ ತೀರ್ಮಾನ ಮಾಡುತ್ತೇನೆ. ಮಾಜಿ ಸಿಎಂ ಯಡಿಯೂರಪ್ಪ ಅವರು ಹಠಕ್ಕೆ ಬಿದ್ದು ಶೋಭಾ ಕರಂದ್ಲಾಜೆ ಹಾಗೂ ಬಸವರಾಜ ಬೊಮ್ಮಾಯಿ ಅವರಿಗೆ ಟಿಕೆಟ್ ಕೊಟ್ಟಿದ್ದಾರೆ. ನನ್ನ ಮಗನಿಗೆ ಟಿಕೇಟ್ ಕೊಡಿಸಲು ಆಗಲಿಲ್ಲವೇ? ಎಂದು ಈಶ್ವರಪ್ಪ ಪ್ರಶ್ನೆ ಮಾಡುತ್ತಿದ್ದಾರೆ.

ಈಶ್ವರಪ್ಪ ಬಂಡಾಯವೆದ್ದರೆ ರಾಘವೇಂದ್ರಗೆ ಕಷ್ಟವಾಗುತ್ತಾ..?;

ಶಿವಮೊಗ್ಗದಲ್ಲಿ ಈಶ್ವರಪ್ಪ ಅವರಿಗೆ ತಮ್ಮ ಆದ ವೋಟ್‌ ಬ್ಯಾಂಕ್‌ ಇದೆ.. ಯಾಕಂದ್ರೆ ಯಡಿಯೂರಪ್ಪ ಹಾಗೂ ಈಶ್ವರಪ್ಪ ಒಟ್ಟಿಗೆ ರಾಜಕೀಯಕ್ಕೆ ಬಂದವರು.. ಹೀಗಾಗಿ ಪಕ್ಷದ ಬೆಳವಣಿಗೆಯಲ್ಲಿ ಈಶ್ವರಪ್ಪ ಪಾತ್ರವೂ ದೊಡ್ಡದಿದೆ… ಹೀಗಾಗಿ ಅವರ ಬೆಂಬಲಿಗರು ದೊಡ್ಡ ಮಟ್ಟದಲ್ಲಿದ್ದಾರೆ.. ಹೀಗಾಗಿ ಅವರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದರ ಮೇಲೆ ಯಡಿಯೂರಪ್ಪ ಅವರ ಪುತ್ರ ಬಿ.ವೈ.ರಾಘವೇಂದ್ರ ಅವರ ಭವಿಷ್ಯ ನಿಂತಿದೆ. ಒಂದು ವೇಳೆ ಈಶ್ವರಪ್ಪ ಅವರು ಹಠಕ್ಕೆ ಬಿದ್ದು ಬಂಡಾಯ ಅಭ್ಯರ್ಥಿಯಾಗಿ ಶಿವಮೊಗ್ಗದಲ್ಲಿ ಸ್ಪರ್ಧೆ ಮಾಡಿದರೆ ಬಿಜೆಪಿ ಮತಗಳು ವಿಭಜನೆಯಾಗುತ್ತವೆ. ಆಗ ಕಾಂಗ್ರೆಸ್‌ನ ಗೀತಾ ಶಿವರಾಜ್‌ಕುಮಾರ್‌ ಅವರಿಗೆ ಅನುಕೂಲವಾಗಬಹುದು..

ಇದನ್ನೂ ಓದಿ; ಬಿಜೆಪಿ ಎರಡನೇ ಪಟ್ಟಿ ಪ್ರಕಟ; ಕರ್ನಾಟಕದ 20 ಕ್ಷೇತ್ರಗಳ ಅಭ್ಯರ್ಥಿಗಳ ವಿವರ

ಈಶ್ವರಪ್ಪ ಧೈರ್ಯ ಮಾಡೋದು ಡೌಟು;

ಈಶ್ವರಪ್ಪ ದೊಡ್ಡ ನಾಯಕ ಅನ್ನೋದು ಎಲ್ಲರಿಗೂ ಗೊತ್ತಿದೆ.. ಅವರಿಗೆ ದೊಡ್ಡ ಬೆಂಬಲಿಗ ಪಡೆಯೂ ಇದೆ.. ಹಾಗಂತ ಅವರು ಪಕ್ಷ ಬಿಟ್ಟು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲಾರರು.. ಅವರು ಬಂಡಾಯ ಸ್ಪರ್ಧೆಗೆ ನಿರ್ಧಾರ ತೆಗೆದುಕೊಂಡರೂ ಮೋದಿ ಒಂದು ಕರೆ ಮಾಡಿದರೆ ಸುಮ್ಮನಾಗುತ್ತಾರೆ.. ಹೀಗೆ ಮಾಡಬಹುದು ಎಂಬ ಕಾರಣಕ್ಕಾಗಿಯೇ ಕಾಂತೇಶ್‌ಗೆ ಟಿಕೆಟ್‌ ತಪ್ಪಿಸಲಾಗಿದೆ ಎಂದು ಹೇಳಲಾಗುತ್ತಿದೆ.

 

Share Post