BengaluruPolitics

ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ; ಮತ ಎಣಿಕೆ ಪ್ರಕ್ರಿಯೆ ಹೇಗಿರುತ್ತೆ ಗೊತ್ತಾ..?

ಬೆಂಗಳೂರು; ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದೆ. ಎಲ್ಲಾ ಅಭ್ಯರ್ಥಿಗಳ ಎದೆಯಲ್ಲಿ ಢವಢವ ಶುರುವಾಗಿದೆ. ಮತಯಂತ್ರಗಳು ಸ್ಟ್ರಾಂಗ್‌ ರೂಮ್‌ಗಳಲ್ಲಿ ಭದ್ರವಾಗಿದ್ದು, ನಾಳೆ ಬೆಳಗ್ಗೆ ಎಂಟು ಗಂಟೆಗೆ ತೆರೆಯಲ್ಪಡುತ್ತವೆ. ಬೆಳಗ್ಗೆ 11-12ಗಂಟೆ ಹೊತ್ತಿಗೆ ಒಂದು ಸ್ಪಷ್ಟ ಚಿತ್ರಣ ದೊರೆಯಲಿದೆ. ಮತ ಎಣಿಕೆಗಾಗಿ ಈಗಾಗಲೇ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಎಲ್ಲಾ ಕಡೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ. ನಾಳೆ ಬೆಂಗಳೂರಿನಲ್ಲಿ ನಿಷೇಧಾಜ್ಞೆ ಕೂಡಾ ಜಾರಿ ಮಾಡಲಾಗಿದೆ.

ಮತ ಎಣಿಕೆ ಹೇಗೆ ನಡೆಯುತ್ತದೆ..?
===================
– ರಿಟರ್ನಿಂಗ್‌ ಆಫಿಸರ್‌ ಮೇಲ್ವಿಚಾರಣೆಯಲ್ಲಿ ಮತ ಎಣಿಕೆ ನಡೆಯುತ್ತದೆ
– ಮೂರು ಹಂತದ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತದೆ
– ಚುನಾವಣಾ ಏಜೆಂಟರು ಹಾಗೂ ಅಭ್ಯರ್ಥಿ ಎಣಿಕೆ ಸ್ಥಳದಲ್ಲಿರಲು ಅವಕಾಶವಿದೆ
– ಬೆಳಗ್ಗೆ ಎಂಟು ಗಂಟೆಗೆ ಮತ ಎಣಿಕೆ ಆರಂಭವಾಗುತ್ತೆ
– ಮೊದಲಿಗೆ ಅಂಚೆ ಮತಗಳನ್ನು ಎಣಿಕೆ ಮಾಡಲಾಗುತ್ತದೆ
– ಅನಂತರ ವಿದ್ಯುನ್ಮಾನ ಮತಯಂತ್ರಗಳಲ್ಲಿ ಭದ್ರವಾಗಿರುವ ಮತಗಳ ಎಣಿಕೆ ನಡೆಯುತ್ತದೆ
– ಸುಮಾರು ಒಂದು ಕ್ಷೇತ್ರದ ಮತ ಎಣಿಕೆ ಸುಮಾರು ಹದಿನೈದರಿಂದ ಇಪ್ಪತ್ತುನ ಸುತ್ತುಗಳು ಇರುತ್ತದೆ
– ಚುನಾವಣಾಧಿಕಾರಿಗಳು ಹಾಗೂ ಏಜೆಂಟರು ಬೆಳಗ್ಗೆ 5 ಗಂಟೆಯ ವೇಳೆ ಎಣಿಕಾ ಕೇಂದ್ರಕ್ಕೆ ಬರಬೇಕು
– 8 ಗಂಟೆಗೆ ಸರಿಯಾಗಿ ಮತ ಎಣಿಕೆ ಶುರುವಾಗುತ್ತದೆ. ಸಂಜೆ 6 ಗಂಟೆಯೊಳಗೆ ಮತ ಎಣಿಕೆ ಪೂರ್ಣಗೊಳ್ಳುವ ಸಾಧ್ಯತೆ ಇದೆ

Share Post