ತೆಲಂಗಾಣದಲ್ಲಿ ೨ ದಿನಗಳ ಕಾಲ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಸೂಚನೆ
ತೆಲಂಗಾಣ: ಮೊನ್ನೆಯಷ್ಟೇ ಮಳೆಯ ರೌದ್ರಾವತಾರದಿಂದ ನಿರಾಳರಾದ ತೆಲಂಗಾಣ ಜನತೆಗೆ ಇನ್ನೊಂದು ಶಾಕ್ ಕಾದಿದೆ. ಗುರುವಾರ, ಶುಕ್ರವಾರ ಎರಡೂ ದಿನ ರಾಜ್ಯದಲ್ಲಿ ಮಳೆಯಾಗುವ ಸಂಭವ ಇದೆ ಎಂದು ಹೈದರಾಬಾದ್ ಹವಾಮಾನ ಇಲಾಖೆ ಸೂಚಿಸಿದೆ. ಶ್ರೀಲಂಕಾದಿಂದ ಪಶ್ಚಿಮ ಬಂಗಾಳದವರೆಗೂ ವಿಪರೀತವಾದ ಮೇಲ್ಮೈ ತೊಟ್ಟಿಗಳ ಅಲೆಗಳು ಆವರಿಸಿವೆ. ಇವು ಸಮುದ್ರ ಮಟ್ಟದಿಂದ 0.9ಕಿ.ಮೀಟರ್ ಎತ್ತರದಲ್ಲಿರುವುದರಿಂದ ಪೂರ್ವ ದಿಕ್ಕಿನಿಂದ ಗಾಳಿ ಚಲನೆ ಬಹಳ ವೇಗವಾಗಿರುವ ಕಾರಣದಿಂದ ತೆಲಂಗಾಣ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.