Politics

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ; ಬಿಜೆಪಿಯಿಂದ ಅಚ್ಚರಿ ನಿರ್ಧಾರ!

ಚಿಕ್ಕಬಳ್ಳಾಪುರ; ಲೋಕಸಭಾ ಚುನಾವಣೆಗೆ ಎಲ್ಲ ಪಕ್ಷಗಳೂ ಸಜ್ಜಾಗುತ್ತಿವೆ. ಈಗಾಗಲೇ ಕಾಂಗ್ರೆಸ್‌ ಪಕ್ಷ ರಾಜ್ಯದ ಏಳು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಆದ್ರೆ ಬಿಜೆಪಿಯಿಂದ ಮೊದಲ ಪಟ್ಟಿ ರಿಲೀಸ್‌ ಆಗಿದ್ದರೂ ರಾಜ್ಯದಲ್ಲಿ ಅಭ್ಯರ್ಥಿಗಳು ಘೋಷಣೆಯಾಗಿಲ್ಲ. ಇಂದು ಬಹುತೇಕ ಅಭ್ಯರ್ಥಿಗಳ ಪಟ್ಟಿ ಫೈನಲ್‌ ಆಗುವ ನಿರೀಕ್ಷೆ ಇದೆ. ಹೀಗಿರುವಾಗಲೇ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಾರಾಗ್ತಾರೆ ಎಂಬುದರ ಬಗ್ಗೆ ಕುತೂಹಲ ಕೆರಳಿಸಿದೆ. ಹೈಕಮಾಂಡ್‌ ತೀರ್ಮಾನದ ಬಗ್ಗೆ ಎಲ್ಲರ ಕುತೂಹಲ ನೆಟ್ಟಿದೆ.

ಡಾ.ಕೆ.ಸುಧಾಕರ್‌ ವರ್ಸಸ್‌ ಅಲೋಕ್‌ ವಿಶ್ವನಾಥ್‌..!;

ಡಾ.ಕೆ.ಸುಧಾಕರ್‌ ವರ್ಸಸ್‌ ಅಲೋಕ್‌ ವಿಶ್ವನಾಥ್‌..!; ಮಾಜಿ ಸಚಿವ ಡಾ.ಕೆ.ಸುಧಾಕರ್‌ ಅವರು ಬಿಜೆಪಿ ಟಿಕೆಟ್‌ ಬಯಸುತ್ತಿದ್ದಾರೆ. ಆದ್ರೆ ರೇಸ್‌ನಲ್ಲಿ ಮತ್ತೊಬ್ಬ ಪ್ರಬಲ ಆಕಾಂಕ್ಷಿ ಇದ್ದಾರೆ. ಅವರೇ ಯಲಹಂಕ ಶಾಸಕ ಎಸ್.ಆರ್‌.ವಿಶ್ವನಾಥ್‌ ಅವರ ಪುತ್ರ ಅಲೋಕ್‌ ವಿಶ್ವನಾಥ್‌. ಎಸ್‌.ಆರ್‌.ವಿಶ್ವನಾಥ್‌ ಮೂಲ ಬಿಜೆಪಿಯವರು.. ಜೊತೆಗೆ ಸತತವಾಗಿ ಯಲಹಂಕದಲ್ಲಿ ಗೆದ್ದು ಪ್ರಾಬಲ್ಯ ಉಳಿಸಿಕೊಂಡಿದ್ದಾರೆ. ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ಹೈಕಮಾಂಡ್‌ ಸಂಪರ್ಕವಿದೆ. ರೆಡ್ಡಿ ಒಕ್ಕಲಿಗ ಜಾತಿಗೆ ಸೇರಿದ ವಿಶ್ವನಾಥ್‌ ಅವರು ತಮ್ಮ ಮಗನಿಗೆ ಟಿಕೆಟ್‌ ಕೊಟ್ಟಿರೆ ಗೆಲ್ಲಿಸಿಕೊಂಡು ಬರೋದಾಗಿ ಹೇಳುತ್ತಿದ್ದಾರೆ. ಹೈಕಮಾಂಡ್‌ ಬಳಿ ಒತ್ತಡ ಕೂಡಾ ಹೇರುತ್ತಿದ್ದಾರೆ. ಇವರಿಗೆ ಆರ್‌ಎಸ್‌ಎಸ್‌ ಹಾಗೂ ಯಡಿಯೂರಪ್ಪ ಕುಟುಂಬದ ಶ್ರೀರಕ್ಷೆ ಇದೆ.

ಇನ್ನು ಡಾ.ಕೆ.ಸುಧಾಕರ್‌ ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದವರು. ಬೊಮ್ಮಾಯಿ ಹಾಗೂ ಯಡಿಯೂರಪ್ಪ ಸರ್ಕಾರದಲ್ಲಿ ಸಚಿವರಾಗಿದ್ದ ಸುಧಾಕರ್‌ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರದೀಪ್‌ ಈಶ್ವರ್‌ ವಿರುದ್ಧ ಸೋಲನುಭವಿಸಿದ್ದಾರೆ. ಹೀಗಾಗಿ ಅವರಿಗೆ ಈಗ ಒಂದು ಅಧಿಕಾರ ಬೇಕಾಗಿದೆ. ಈ ಕಾರಣಕ್ಕಾಗಿಯೇ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಬಯಸುತ್ತಿದ್ದಾರೆ. ಆದ್ರೆ ಯಡಿಯೂರಪ್ಪ ಅವರಾಗಲೀ, ವಿಜಯೇಂದ್ರ ಅವರಾಗಲೀ ಇವರ ಬೆಂಬಲಕ್ಕಿಲ್ಲ. ಸುಧಾಕರ್‌ ಬೆಂಬಲಕ್ಕೆ ಮಾಜಿ ಸಿಎಂ ಬೊಮ್ಮಾಯಿ ಮಾತ್ರ ಇದ್ದಾರೆ. ಇದರ ಜೊತೆಗೆ ಎನ್‌ಡಿಎ ಮಿತ್ರಪಕ್ಷವಾಗಿರುವ ಜೆಡಿಎಸ್‌ನ ಕುಮಾರಸ್ವಾಮಿ ಹಾಗೂ ದೇವೇಗೌಡರು ಕೂಡಾ ಡಾ.ಕೆ.ಸುಧಾಕರ್‌ ಪರವಾಗಿ ಲಾಬಿ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಇಬ್ಬರಲ್ಲಿ ಯಾರ ಕೈ ಮೇಲಾಗುತ್ತೆ ಎಂಬ ಕುತೂಹಲ ಶುರುವಾಗಿದೆ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿ ಎಷ್ಟು..?;

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿ ಎಷ್ಟು..?; ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ  ಎಂಟು ವಿಧಾನಸಭಾ ಕ್ಷೇತ್ರಗಳು ಬರಲಿದೆ. ಸುಮಾರು ಹತ್ತು ತಾಲ್ಲೂಕುಗಳು ಇದರ ವ್ಯಾಪ್ತಿಯಲ್ಲಿರಲಿಲ್ಲ. ಬಾಗೇಪಲ್ಲಿ, ಗೌರಿಬಿದನೂರು, ಚಿಕ್ಕಬಳ್ಳಾಪುರ, ಯಲಹಂಕ,  ದೊಡ್ಡಬಳ್ಳಾಪುರ, ಹೊಸಕೋಟೆ , ನೆಲಮಂಗಲ, ದೇವನಹಳ್ಳಿ ವಿಧಾನಸಭಾ ಕ್ಷೇತ್ರಗಳು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರಲಿವೆ.. ಇಲ್ಲಿ ಕ್ಷೇತ್ರದಲ್ಲಿ ಒಕ್ಕಲಿಗ ಮತಗಳೇ ಹೆಚ್ಚಿವೆ. ಅದು ಬಿಟ್ಟರೆ ಹಿಂದುಳಿದ ಹಾಗೂ ದಲಿತ ಮತಗಳು ಹೆಚ್ಚಿವೆ. ಚಿಕ್ಕಬಳ್ಳಾಪುರ ಹಾಗೂ ಬಾಗೇಪಲ್ಲಿ ಕ್ಷೇತ್ರದಲ್ಲಿ ಬಲಜಿಗ ಮತಗಳು ಹೆಚ್ಚಿವೆ.

ಕಳೆದ ಚುನಾವಣೆಯಲ್ಲಿ ಬಿಜೆಪಿ ಗೆಲುವು;

ಕಳೆದ ಚುನಾವಣೆಯಲ್ಲಿ ಬಿಜೆಪಿ ಗೆಲುವು; ಕಳೆದ ಅಂದ್ರೆ 2019ರ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿತ್ತು. ಬಿಜೆಪಿಯಿಂದ ಕಣಕ್ಕಿಳಿದಿದ್ದ ಬಿ.ಎನ್‌.ಬಚ್ಚೇಗೌಡ ಅವರು ಕಾಂಗ್ರೆಸ್‌ನ ವೀರಪ್ಪ ಮೊಯ್ಲಿ ವಿರುದ್ಧ ಭಾರಿ ಬಹುಮತದಿಂದ ಗೆದ್ದು ಬೀಗಿದ್ದರು. ಆಗ ಬಿಜೆಪಿಯ ಬಿಎನ್‌ ಬಚ್ಚೇಗೌಡ 745912 ಮತಗಳನ್ನು ಪಡೆದರೆ, ಕಾಂಗ್ರೆಸ್‌ನ ವೀರಪ್ಪ ಮೊಯ್ಲಿ 5,63,802 ಮತಗಳನ್ನಷ್ಟೇ ಗಳಿಸಲು ಶಕ್ತರಾಗಿದ್ದರು. ಈ ಹಿಂದೆ ಎರಡು ಬಾರಿ ಸತತವಾಗಿ ಸಂಸದರಾಗಿದ್ದ ವೀರಪ್ಪ ಮೊಯ್ಲಿ ಕಳೆದ ಚುನಾವಣೆಯಲ್ಲಿ ಸೋಲನುಭವಿಸಿದ್ದರು. ಈ ಬಾರಿ ವೀರಪ್ಪ ಮೊಯ್ಲಿಯವರು ಕಾಂಗ್ರೆಸ್‌ನಿಂದ ಟಿಕೆಟ್‌ ಬಯಸಿದ್ದಾರೆ. ಹಾಲಿ ಸಂಸದ ಬಿ.ಎನ್.ಬಚ್ಚೇಗೌಡ ವಯಸ್ಸಿನ ಕಾರಣದಿಂದ ಕಣದಿಂದ ಹಿಂದೆ ಸರಿದ್ದಾರೆ. ಈ ನಡುವೆ ಅವರ ಪುತ್ರ ಶರತ್‌ ಬಚ್ಚೇಗೌಡ ಕಾಂಗ್ರೆಸ್‌ನಲ್ಲಿ ಶಾಸಕರಾಗಿದ್ದಾರೆ.

ಜಾತಿ ನೋಡಿ ಮತ ಹಾಕದ ಚಿಕ್ಕಬಳ್ಳಾಪುರದ ಜನ;

ಜಾತಿ ನೋಡಿ ಮತ ಹಾಕದ ಚಿಕ್ಕಬಳ್ಳಾಪುರದ ಜನ; ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಎಂದಿಗೂ ಇಲ್ಲಿನ ಮತದಾನ ಜಾತಿ ನೋಡಿ ಮತ ಹಾಕಿಲ್ಲ.. ಈ ಕಾರಣಕ್ಕಾಗಿಯೇ ಅತಿ ಕಡಿಮೆ ಮತಗಳನ್ನು ಹೊಂದಿರುವ ಈಡಿಗ ಸಮುದಾಯದ ಜಾಲಪ್ಪ, ಬ್ರಾಹ್ಮಣ ಸಮುದಾಯದ ಕೃಷ್ಣರಾವ್‌, ದೇವಾಡಿಗ ಸಮಾಜದ ವೀರಪ್ಪ ಮೊಯ್ಲಿ ಹಲವು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಆದ್ರೆ ಇತ್ತೀಚಿನ ದಿನಗಳಲ್ಲಿ ಕೊಂಚ ಜಾತಿ ಕೆಲಸ ಮಾಡುತ್ತಿದ್ದೆ. ಈ ಕ್ಷೇತ್ರದಲ್ಲಿ ಮೊರಸು ಒಕ್ಕಲಿಗರು ಹೆಚ್ಚಿದ್ದಾರೆ. ಡಾ.ಕೆ.ಸುಧಾಕರ್‌ ಅದೇ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಅವರಿಗೇ ಟಿಕೆಟ್‌ ಕೊಟ್ಟರೆ ಬಿಜೆಪಿಗೆ ಗೆಲುವು  ಸುಲಭ ಎಂಬ ವಾದ ಮುಂದಿಡಲಾಗಿದೆ. ಇನ್ನು ಎಸ್‌.ಆರ್‌.ವಿಶ್ವನಾಥ್‌ ಅವರು ಕೂಡಾ ಒಕ್ಕಲಿಗರೇ ಆಗಿದ್ದರೂ, ಅವರು ಆಂಂಧ್ರದ ರೆಡ್ಡಿಗಳು. ಹೀಗಾಗಿ, ಚಿಕ್ಕಬಳ್ಳಾಪುರ ವ್ಯಾಪ್ತಿಯಲ್ಲಿ ಬರುವ ಒಕ್ಕಲಿಗರು, ಈ ರೆಡ್ಡಿಗಳಿಗೂ ಸಂಬಂಧವಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಆದ್ರೆ ಈ ಕ್ಷೇತ್ರದಲ್ಲಿ ಜಾತಿ, ಪಕ್ಷಕ್ಕಿಂತ ವ್ಯಕ್ತಿ ಮುಖ್ಯವಾಗುತ್ತಾರೆ ಅನ್ನೋದು ಈಗಾಗಲೇ ಸಾಬೀತಾಗಿದೆ. ಹೀಗಾಗಿ, ಬಿಜೆಪಿ ಹೈಕಮಾಂಡ್‌ ಜಾರಿಗೆ ಮಣೆ ಹಾಕುತ್ತೆ ಅನ್ನೋದು ಕುತೂಹಲದ ಸಂಗತಿ.

Share Post