BengaluruPolitics

ನಾಳೆ ತೆಲಂಗಾಣ ಚುನಾವಣೆ ಫಲಿತಾಂಶ; ಸಂಜೆ ಹೈದರಾಬಾದ್‌ನತ್ತ ಡಿಕೆಶಿ

ಬೆಂಗಳೂರು; ಡಿಸಿಎಂ ಡಿ.ಕೆ.ಶಿವಕುಮಾರ್‌ ಕಾಂಗ್ರೆಸ್‌ನ ಟ್ರಬಲ್‌ ಶೂಟರ್‌ ಎಂದೇ ಹೆಸರು. ದೇಶದಲ್ಲಿ ಎಲ್ಲೇ ಕಾಂಗ್ರೆಸ್‌ ಶಾಸಕರಿಗೆ ಭೀತಿ ಎದುರಾದರೂ ಅವರನ್ನು ಕಾಪಾಡುವ ಜವಾಬ್ದಾರಿ ಇತ್ತೀಚಿನ ದಿನಗಳಲ್ಲಿ ಡಿ.ಕೆ.ಶಿವಕುಮಾರ್‌ ಹೆಗಲ ಮೇಲೆ ಬೀಳುತ್ತದೆ. ಅದೇ ರೀತಿ ತೆಲಂಗಾಣ ಚುನಾವಣೆಯಲ್ಲಿ ಕಾಂಗ್ರೆಸ್‌ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ಎಲ್ಲಾ ಸಾಧ್ಯತೆಗಳೂ ಇವೆ. ಚುನಾವಣೋತ್ತರ ಸಮೀಕ್ಷೆಗಳು ಅದನ್ನೇ ಹೇಳುತ್ತಿವೆ. ಕಾಂಗ್ರೆಸ್‌ ಬಹುಮತ ಸಿಗಬಹುದು, ಇಲ್ಲವೆ ಕಾಂಗ್ರೆಸ್‌ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಬಹುದು ಎಂದು ಸಮೀಕ್ಷೆಗಳು ಹೇಳುತ್ತಿವೆ. ನಾಳೆಯೇ ಮತ ಎಣಿಕೆ ಇದೆ. ಈ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್‌ ಅವರು ಇಂದು ಸಂಜೆ ಹೈದರಾಬಾದ್‌ಗೆ ತೆರಳುತ್ತಿದ್ದಾರೆ.

ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಬಂದರೆ ಓಕೆ. ಒಂದು ವೇಳೆ ಅತಂತ್ರ ಫಲಿತಾಂಶ ಬಂದರೆ, ಕಾಂಗ್ರೆಸ್‌ ಶಾಸಕರು ಬೇರೆ ಪಕ್ಷದವರ ಆಮಿಷಕ್ಕೆ ಒಳಗಾಗದಂತೆ ತಡೆಯಲು ಕಸರತ್ತು ನಡೆದಿದೆ. ಒಂದು ವೇಳೆ ಅತಂತ್ರ ಫಲಿತಾಂಶ ಬಂದರೆ, ನೂತನವಾಗಿ ಆಯ್ಕೆಯಾದ ಕಾಂಗ್ರೆಸ್‌ ಶಾಸಕರನ್ನು ಬೆಂಗಳೂರಿಗೆ ಕರೆತರುತ್ತಾರೆಂದು ಹೇಳಲಾಗುತ್ತಿದೆ. ಅದಕ್ಕಾಗಿ ಈಗಾಗಲೇ ರೆಸಾರ್ಟ್‌ ಒಂದನ್ನೂ ನಿಗದಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಕಾರಣದಿಂದಾಗಿಯೇ ನೂತನ ಶಾಸಕರನ್ನು ಸೇಫಾಗಿ ಹೈದರಾಬಾದ್‌ಗೆ ಕರೆತರುವ ಉದ್ದೇಶದಿಂದಲೇ ಡಿ.ಕೆ.ಶಿವಕುಮಾರ್‌ ಸಂಜೆ ಹೈದರಾಬಾದ್‌ಗೆ ತೆರಳುತ್ತಿದ್ದಾರೆ.

 

Share Post