Politics

Loksabha; ಇಂದು ಬಿಜೆಪಿ 2ನೇ ಪಟ್ಟಿ ರಿಲೀಸ್‌?; ಕರ್ನಾಟಕದಲ್ಲಿ ಇವರಿಗೆ ಟಿಕೆಟ್‌ ಫಿಕ್ಸ್‌ ಆಯ್ತಾ..?

ಬೆಂಗಳೂರು; ಕೆಲ ದಿನಗಳ ಹಿಂದಷ್ಟೇ  ಲೋಕಸಭಾ ಚುನಾವಣೆಗೆ ಬಿಜೆಪಿ 195 ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್‌ ಮಾಡಿತ್ತು. ಇದೀಗ ಎರಡನೇ ಪಟ್ಟಿ ರಿಲೀಸ್‌ ಮಾಡೋದಕ್ಕೆ ಸಿದ್ಧತೆ ನಡೆದಿದೆ. ಈ ಸಂಬಂಧ ಇಂದು ದೆಹಲಿಯಲ್ಲಿ ಮಹತ್ವದ ಸಭೆ ನಡೆಯುತ್ತಿದೆ. ಸಾಧ್ಯವಾದರೆ ಇವತ್ತೇ ಎರಡು ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಮೊದಲ ಪಟ್ಟಿಯಲ್ಲಿ ಕರ್ನಾಟಕದ ಅಭ್ಯರ್ಥಿಗಳ ಹೆಸರು ರಿಲೀಸ್‌ ಮಾಡಿರಲಿಲ್ಲ. ಈಗ ಎರಡನೇ ಪಟ್ಟಿಯಲ್ಲಿ ಕರ್ನಾಟಕದ ಅಭ್ಯರ್ಥಿಗಳ ಪಟ್ಟಿ ರಿಲೀಸ್‌ ಮಾಡಲಾಗುತ್ತದೆ. ಹೀಗಾಗಿ ಕುತೂಹಲಕ್ಕೆ ಕಾರಣವಾಗಿದೆ.

ಸಭೆಯಲ್ಲಿ ಪಾಲ್ಗೊಂಡಿರುವ ರಾಜ್ಯ ನಾಯಕರು;

ಸಭೆಯಲ್ಲಿ ಪಾಲ್ಗೊಂಡಿರುವ ರಾಜ್ಯ ನಾಯಕರು; ದೆಹಲಿಯಲ್ಲಿ ಬಿಜೆಪಿ ಹೈಕಮಾಂಡ್‌ ನಾಯಕರ ಸಭೆ ನಡೆಯುತ್ತಿದೆ. ಎರಡನೇ ಪಟ್ಟಿ ಅಂತಿಮ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಸಭೆಯಲ್ಲಿ ಮಾಜಿ ಸಿಎಂ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಪ್ರತಿಪಕ್ಷ ನಾಯಕ ಆರ್.ಅಶೋಕ್ ಭಾಗವಹಿಸಿದ್ದಾರೆ. ಇಂದೇ ಪಟ್ಟಿ ಅಂತಿಮವಾಗಿ, ಇಂದೇ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಎಲ್ಲರ ಚಿತ್ತ ದೆಹಲಿಯತ್ತ ನೆಟ್ಟಿದೆ..

ಸಂಭವನೀಯ ಪಟ್ಟಿಯಲ್ಲಿ ಯಾರು, ಯಾರು ಇದ್ದಾರೆ..?

ಉಡುಪಿ-ಚಿಕ್ಕಮಗಳೂರು; ಶೋಭಾ ಕರಂದ್ಲಾಜೆ ಅಥವಾ ಸಿ.ಟಿ. ರವಿ ಅಥವಾ ಪ್ರಮೋದ್ ಮಧ್ವರಾಜ್
ದಾವಣಗೆರೆ; ಜಿ.ಎಂ. ಸಿದ್ದೇಶ್ವರ್‌ ಅಥವಾ ಎಂ.ಪಿ. ರೇಣುಕಾಚಾರ್ಯ
ಶಿವಮೊಗ್ಗ ; ಬಿ.ವೈ. ರಾಘವೇಂದ್ರ
ಹಾವೇರಿ; ಬಸವರಾಜ ಬೊಮ್ಮಾಯಿ ಅಥವಾ ಕೆ.ಇ. ಕಾಂತೇಶ್‌ ಅಥವಾ ಜಗದೀಶ್ ಶೆಟ್ಟರ್ ಅಥವಾ ಬಿ.ಸಿ. ಪಾಟೀಲ್
ಚಿಕ್ಕಬಳ್ಳಾಪುರ; ಡಾ. ಕೆ. ಸುಧಾಕರ್‌ ಅಥವಾ ಅಲೋಕ್‌ ವಿಶ್ವನಾಥ್‌

ಹುಬ್ಬಳ್ಳಿ-ಧಾರವಾಡ; ಪ್ರಹ್ಲಾದ್ ಜೋಶಿ
ಚಿತ್ರದುರ್ಗ; ಎ. ನಾರಾಯಣ ಸ್ವಾಮಿ ಅಥವಾ ಮಾದಾರ ಚನ್ನಯ್ಯ ಸ್ವಾಮೀಜಿ
ಬಾಗಲಕೋಟೆ; ಪಿ.ಸಿ. ಗದ್ದಿಗೌಡರ್
ಬಳ್ಳಾರಿ; ಬಿ. ಶ್ರೀರಾಮುಲು ಅಥವಾ ದೇವೇಂದ್ರಪ್ಪ
ಕೊಪ್ಪಳ; ಕರಡಿ ಸಂಗಣ್ಣ
ವಿಜಯಪುರ; ರಮೇಶ್‌ ಜಿಗಜಿಣಗಿ
ಕಲ್ಬುರ್ಗಿ; ಉಮೇಶ್‌ ಜಾಧವ್‌
ಬೆಳಗಾವಿ; ಜಗದೀಶ್‌ ಶೆಟ್ಟರ್‌ ಅಥವಾ ರಮೇಶ್ ಕತ್ತಿ ಅಥವಾ ಮಂಗಳಾ ಅಂಗಡಿ
ಬೀದರ್ ; ಭಗವಂತ್‌ ಖೂಬಾ
ಚಿಕ್ಕೋಡಿ; ಅಣ್ಣಾಸಾಹೇಬ್ ಜೊಲ್ಲೆ ಅಥವಾ ರಮೇಶ್‌ ಕತ್ತಿ
ರಾಯಚೂರು; ರಾಜಾ ಅಮರೇಶ್ವರ ನಾಯಕ್ ಅಥವಾ ರಾಜೂ ಗೌಡ

ಬೆಂಗಳೂರು ಗ್ರಾಮಾಂತರ; ಡಾ. ಸಿ.ಎನ್‌. ಮಂಜುನಾಥ್‌ ಅಥವಾ ಸಿ .ಪಿ. ಯೋಗೇಶ್ವರ್
ಚಾಮರಾಜನಗರ; ಡಾ. ಮೋಹನ್
ಬೆಂಗಳೂರು ಕೇಂದ್ರ; ಪಿ.ಸಿ. ಮೋಹನ್‌
ತುಮಕೂರು; ವಿ.ಸೋಮಣ್ಣ ಅಥವಾ ಜೆ‌.ಸಿ. ಮಾಧುಸ್ವಾಮಿ
ಬೆಂಗಳೂರು ದಕ್ಷಿಣ; ತೇಜಸ್ವಿ ಸೂರ್ಯ
ಬೆಂಗಳೂರು ಉತ್ತರ; ಡಿ.ವಿ. ಸದಾನಂದ ಗೌಡ ಅಥವಾ ಸಿ.ಟಿ. ರವಿ  ಅಥವಾ ನಾರಾಯಣ್ ಅಥವಾ ವಿವೇಕ್ ಸುಬ್ಬಾರೆಡ್ಡಿ
ಮೈಸೂರು; ಪ್ರತಾಪ್‌ ಸಿಂಹ
ಉತ್ತರ ಕನ್ನಡ; ಅನಂತ ಕುಮಾರ್‌ ಹೆಗಡೆ ಅಥವಾ ವಿಶ್ವೇಶ್ವರ ಹೆಗಡೆ ಕಾಗೇರಿ
ದಕ್ಷಿಣ ಕನ್ನಡ: ನಳಿನ್‌ ಕುಮಾರ್‌ ಕಟೀಲ್‌ ಅಥವಾ ಕ್ಯಾ. ಬ್ರಿಜೇಶ್ ಚೌಟ

ರಾಜ್ಯದಿಂದ ಕಳುಹಿಸಿರುವ ಸಂಭವನೀಯರ ಪಟ್ಟಿಯಲ್ಲಿ ಮೇಲಿನ ಹೆಸರುಗಳಿವೆ. ಆದ್ರೆ ಅಚ್ಚರಿ ಹೆಸರುಗಳ ಘೋಷಣೆ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ನಿರ್ಮಲಾ ಸೀತಾರಾಮನ್‌ ಸೇರಿದಂತೆ ಹಲವು ರಾಷ್ಟ್ರೀಯ  ನಾಯಕರನ್ನು ರಾಜ್ಯದಿಂದ ಕಣಕ್ಕಿಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎರಡನೇ ಪಟ್ಟಿ ಬಗ್ಗೆ ತೀವ್ರ ಕುತೂಹಲ ಇದೆ. ಕಾಂಗ್ರೆಸ್‌  ನಾಯಕರು ಕಾದುನೋಡುವ ತಂತ್ರ ಅನುಸರಿಸುತ್ತಿದ್ದು, ಬಿಜೆಪಿ ಪಟ್ಟಿ ರಿಲೀಸ್‌ ಆದ ಮೇಲೆ ಅಳೆದೂ ತೂಗಿ ಪಟ್ಟಿ ರಿಲೀಸ್‌ ಮಾಡುವ ಸಾಧ್ಯತೆ ಇದೆ.

Share Post