Cinema

ಉಚಿತ ಆಸ್ಪತ್ರೆ ಕಟ್ಟಿಸಲು 12 ಎಕರೆ ಭೂಮಿ ಖರೀದಿಸಿದ ರಜಿನಿಕಾಂತ್!

ಚೆನ್ನೈ; ಸೂಪರ್‌ ಸ್ಟಾರ್‌ ರಜಿನಿಕಾಂತ್‌ ಕೇವಲ ಚಲನಚಿತ್ರಗಳಲ್ಲಿ ಮಾತ್ರ ಅವರು ಹೀರೋ ಅಲ್ಲ.. ಜೀವನ ಜೀವನದಲ್ಲೂ ಅವರು ಹೀರೋನೇ.. ಅವರು ಸಾಕಷ್ಟು ಸಾಮಜಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ಪರಮ ದೈವ ಭಕ್ತರಾಗಿರುವ ಅವರು ಅತ್ಯಂತ ಸರಳಜೀವಿ ಕೂಡಾ ಹೌದು. ಅವರು ಸಾಕಷ್ಟು ಸಮಾಜಸೇವೆಗಳನ್ನು ಮಾಡಿದ್ದರೂ ಅವರು ಎಂದಿಗೂ ಅದನ್ನು ಬಹಿರಂಗ ಮಾಡುವುದಿಲ್ಲ. ತೆರೆಮರೆಯಲ್ಲಿಯೇ ಕೆಲಸ ಮಾಡುತ್ತಿರುತ್ತಾರೆ. ಇದೀಗ ಅವರು ಬಡವರಿಗಾಗಿ ಬೃಹತ್‌ ಆಸ್ಪತ್ರೆಯೊಂದು ಕಟ್ಟಲು ಮುಂದಾಗಿದ್ದಾರೆ. ಇದನ್ನು ಅವರು ಸ್ವತಃ ತಿಳಿಸಿ ಪ್ರಚಾರ ಪಡೆದುಕೊಳ್ಳದಿದ್ದರೂ ಈ ವಿಚಾರ ಬೇರೆಯವರ ಮೂಲಕ ಎಲ್ಲೆಡೆ ವೈರಲ್‌ ಆಗುತ್ತಿದೆ.

ಆಸ್ಪತ್ರೆ ಕಟ್ಟಲೆಂದೇ ಭೂಮಿ ಖರೀದಿಸಿದ ರಜಿನಿಕಾಂತ್‌;

ಆಸ್ಪತ್ರೆ ಕಟ್ಟಲೆಂದೇ ಭೂಮಿ ಖರೀದಿಸಿದ ರಜಿನಿಕಾಂತ್‌; ರಜಿನಿಕಾಂತ್‌ ಅವರು ರಾಜಕೀಯಕ್ಕೆ ಬಂದು ಹೊಸ ಪಕ್ಷ ಕಟ್ಟಿ ಜನಸೇವೆ ಮಾಡೋದಕ್ಕೆ ಮುಂದಾಗಿದ್ದರು.. ಆದ್ರೆ ಅನಾರೋಗ್ಯದ ಕಾರಣದಿಂದಾಗಿ ಅದು ಸಾಧ್ಯವಾಗಲಿಲ್ಲ. ಹೀಗಾಗಿ ರಜಿನಿಕಾಂತ್‌ ಅವರು ಸಿನಿಮಾಗಳನ್ನು ಮಾಡಿಕೊಂಡೇ ತಮ್ಮ ಕೈಲಾದ ಜನಸೇವೆಯನ್ನು ಮುಂದುವರೆಸಿದ್ದಾರೆ. ಈಗ ಅವರು ತಮಿಳುನಾಡಿನಲ್ಲಿ ಒಂದು ಬೃಹತ್‌ ಆಸ್ಪತ್ರೆ ನಿರ್ಮಾಣ ಮಾಡಿ, ಅದರಲ್ಲಿ ಬಡವರಿಗೆ ಉಚಿತ ಸೇವೆ ಒದಗಿಸಲು ಮುಂದಾಗಿದ್ದಾರೆ. ಅದಕ್ಕಾಗಿ ಜಾಗವನ್ನೂ ಈಗಾಗಲೇ ಖರೀದಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ತಿರುಪ್ಪೂರಿನಲ್ಲಿ 12 ಎಕರೆ ಜಮೀನು ನೋಂದಣಿ;

ತಿರುಪ್ಪೂರಿನಲ್ಲಿ 12 ಎಕರೆ ಜಮೀನು ನೋಂದಣಿ; ರಜಿನಿಕಾಂತ್‌ ಅವರು ಚಂಗಲ್ಪಟ್ಟು ಜಿಲ್ಲೆಯ ತಿರುಪ್ಪೂರಿನಲ್ಲಿ ಬೃಹತ್‌ ಆಸ್ಪತ್ರೆ ಕಟ್ಟಲು ತೀರ್ಮಾನ ಮಾಡಿದ್ದಾರೆ. ಅದಕ್ಕಾಗಿ ಅವರು 12 ಎಕರೆ ಜಾಗವನ್ನು ಖರೀದಿ ಮಾಡಿದ್ದಾರೆ. ಅವರು ಇತ್ತೀಚೆಗೆ ಈ ಜಾಗದ ರಿಜಿಸ್ಟ್ರೇಷನ್‌ ಮಾಡಿಸಿಕೊಂಡಿದ್ದಾರೆ. ಈ ಕಾರಣದಿಂದಾಗಿ ಎಲ್ಲರಿಗೂ ಈ ವಿಚಾರ ಗೊತ್ತಾಗಿದೆ. ಈ 12 ಜಾಗದಲ್ಲಿ ರಜಿಕಾಂತ್‌ ಅವರು ತಮ್ಮ ಟ್ರಸ್ಟ್‌ ಮೂಲಕ ಆಸ್ಪತ್ರೆ ಕಟ್ಟಿಸಿ ಬಡ ರೋಗಿಗಳಿಗೆ ಉತ್ತಮ ಚಿಕಿತ್ಸೆ ದೊರೆಯುವಂತೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಕೆಲವೇ ದಿನಗಳಲ್ಲಿ ನಡೆಯುತ್ತೆ ಭೂಮಿ ಪೂಜೆ;

ಕೆಲವೇ ದಿನಗಳಲ್ಲಿ ನಡೆಯುತ್ತೆ ಭೂಮಿ ಪೂಜೆ; ಭೂಮಿ ಖರೀದಿ ಆಗಿದೆ. ಅದರ ಪರಿವರ್ತನೆ ಮಾಡಬೇಕಿದೆ. ಸರ್ಕಾರದಿಂದ ಕೆಲವೊಂದು ಅನುಮತಿಗಳನ್ನು ಪಡೆಯಬೇಕಿದೆ.. ಅದೆಲ್ಲಾ ಆದ ಮೇಲೆ ಕೆಲವೇ ದಿನಗಳಲ್ಲಿ ಭೂಮಿ ಪೂಜೆ ನೆರವೇರಲಿದೆ. ಈ ಚೆನ್ನೈ ಹಾಗೂ ತಿರುಪ್ಪೂರು 45 ಕಿಲೋ ಮೀಟರ್‌ ಅಂತರವಿದೆ. ಹೀಗಾಗಿ ಚೆನ್ನೈಗೂ ಇದು ಹತ್ತಿರವಾಗಲಿದೆ. ಈ ಜಾಗ ಸದ್ಯ ಕೃಷಿ ಜಾಗವಾಗಿದ್ದು, ಇದನ್ನು ಪರಿವರ್ತನೆ ಮಾಡಬೇಕಿದೆ. ಅದಾದ ನಂತರ ಭೂಮಿ ಪೂಜೆ ನೆರವೇರಿಸಿ, ಆಸ್ಪತ್ರೆ ಕಟ್ಟಡ ಕಾಮಗಾರಿ ಶುರುವಾಗಲಿದೆ. ಶೀಘ್ರದಲ್ಲೇ ಇದೆಲ್ಲಾ ನಡೆಯಲಿದೆ ಎಂದು ತಿಳಿದುಬಂದಿದೆ.

ಸಂಪೂರ್ಣ ಉಚಿತ ಚಿಕಿತ್ಸೆ ಸಾಧ್ಯತೆ;

ಸಂಪೂರ್ಣ ಉಚಿತ ಚಿಕಿತ್ಸೆ ಸಾಧ್ಯತೆ; ರಜಿನಿಕಾಂತ್‌ ಅವರು ಜನಕ್ಕಾಗಿ ಏನನ್ನಾದರೂ ಮಾಡಬೇಕು ಎಂದು ಯಾವಾಗಲೂ ತುಡಿಯುತ್ತಿದ್ದರು. ಈ ಕಾರಣಕ್ಕಾಗಿ ಅವರು ಇಂತಹದ್ದೊಂದು ಬೃಹತ್‌ ಯೋಜನೆ ಹಮ್ಮಿಕೊಂಡಿದ್ದಾರೆ. ಬಡವರು ಕಾಯಿಲೆ ಬಂದರೆ ಅದಕ್ಕೆ ಚಿಕಿತ್ಸೆ ಪಡೆಯಾಗದೆ ಸಾಯುತ್ತಿದ್ದಾರೆ. ಹೀಗಾಗಿ ಕಡುಬಡವರಿಗೆ ಉಚಿತ ಚಿಕಿತ್ಸೆ ಕೊಡಿಸುವ ಮೂಲಕ ಅವರ ಜೀವಕ್ಕೆ ಭರವಸೆ ತುಂಬಲು ರಜಿನಿಕಾಂತ್‌ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಈ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.

Share Post