Beauty Tips; ಕೆಂಪು ತೊಗರಿ ಬೇಳೆ ಫೇಸ್ಪ್ಯಾಕ್ ನಿಮ್ಮ ಅಂದ ಹೆಚ್ಚಿಸುತ್ತೆ!
ಬೆಂಗಳೂರು; ಹೊಳೆಯುವ ಮುಖದ ಸೌಂದರ್ಯಕ್ಕೆ (Face beauty) ವಿಶೇಷ ಕಾಳಜಿ ಮಾಡುವುದು ತುಂಬಾನೇ ಅತ್ಯಗತ್ಯ. ಇದಕ್ಕಾಗಿ ಮಾರುಕಟ್ಟೆಯಲ್ಲಿ ದೊರೆಯುವ ದುಬಾರಿ ಬೆಲೆಯ ರಾಸಾಯನಿಕ ಉತ್ಪನ್ನಗಳನ್ನು ಬಹುತೇಕ ಎಲ್ಲರೂ ಬಳಸುತ್ತಾರೆ. ಆದ್ರೆ ಅವುಗಳ ಬಳಕೆಯಿಂದ ಹಲವಾರು ಅಡ್ಡಪರಿಣಾಮಗಳಾಗುತ್ತವೆ. ಆದರೆ, ಅಡುಗೆಮನೆಯಲ್ಲಿ ಲಭ್ಯವಿರುವ ಕೆಲವು ಬಗೆಯ ಬೇಳೆಕಾಳುಗಳು ಮತ್ತು ಮಸಾಲೆಗಳಿಂದ ನೈಸರ್ಗಿಕವಾಗಿ ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ಕೆಂಪು ತೊಗರಿ ಬೇಳೆಯಿಂದ ಕೂಡಾ ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು. ಇದು ಆರೋಗ್ಯಕ್ಕೆ ಮಾತ್ರವಲ್ಲ, ತ್ವಚೆಯ ಸೌಂದರ್ಯಕ್ಕೂ ಒಳ್ಳೆಯದು. ಚರ್ಮದ ಪೋಷಣೆಯ ವಿಷಯದಲ್ಲಿ ಇದು ಅದ್ಭುತಗಳನ್ನು ಮಾಡುತ್ತದೆ. ಇದು ಚರ್ಮಕ್ಕೆ ಅಗತ್ಯವಾದ ಜೀವಸತ್ವಗಳು, ಖನಿಜಗಳನ್ನು ನೀಡುತ್ತದೆ. ಮಸ್ಸೂರ್ ತೊಗರಿ ಬೇಳೆಯಿಂದ ಫೇಸ್ ಪ್ಯಾಕ್ಗಳನ್ನು ಮಾಡಬಹುದು. ಅದರ ಡೀಟೇಲ್ಸ್ ನೋಡೋಣ ಬನ್ನಿ.
ಇದನ್ನೂ ಓದಿ; YASH; ನ್ಯೂ ಲುಕ್ನಲ್ಲಿ ಕಾಣಿಸಿಕೊಂಡ ನಟ ಯಶ್; ಅಭಿಮಾನಿಗಳು ಫುಲ್ ಖುಷ್
ಜೇನು ತುಪ್ಪ ಹಾಗೂ ಕೆಂಪು ತೊಗರಿ ಬೇಳೆ;
ಜೇನು ತುಪ್ಪ ಹಾಗೂ ಕೆಂಪು ತೊಗರಿ ಬೇಳೆ; ಕೆಂಪು ತೊಗರಿ ಬೇಳೆ ಮಾಯಿಶ್ಚರೈಸರ್ ಹೊಂದಿರಬೇಕಾದ ಎಲ್ಲಾ ಗುಣಲಕ್ಷಣಗಳನ್ನೂ ಹೊಂದಿದೆ. ಇದು ಚರ್ಮವನ್ನು ಹೈಡ್ರೇಟ್ ಆಗಿ ಇಡಲು ಅತ್ಯಂತ ಸಹಾಯ ಮಾಡುತ್ತದೆ. ಒಂದು ಚಮಚ ಕೆಂಪು ತೊಗರಿ ಬೇಳೆ ಪುಡಿಗೆ ಎರಡು ಚಮಚ ಜೇನುತುಪ್ಪ ಸೇರಿಸಿ ಪೇಸ್ಟ್ ಮಾಡಬೇಕು. ಈ ಮಿಶ್ರಣವನ್ನು ದಪ್ಪ ಫೇಸ್ ಪ್ಯಾಕ್ ಆಗಿ ಹಚ್ಚಿಕೊಳ್ಳಬೇಕು. ಸುಮಾರು 15 ನಿಮಿಷಗಳ ಕಾಲ ಅದನ್ನು ಹಾಗೆಯೇ ಬಿಡಬೇಕು. ಅದರ ನಂತರ, ಉಗುರು ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆದುಕೊಳ್ಳಬೇಕು. ಕೆಂಪು ತೊಗರಿ ಬೇಳೆಯಿಂದ ಈ ಪ್ಯಾಕ್ ಮುಖಕ್ಕೆ ಹಚ್ಚುವುದರಿಂದ ಮುಖದ ಮೇಲಿನ ಕಲೆಗಳು ಮತ್ತು ಪಿಗ್ಮೆಂಟೇಶನ್ ಶೀಘ್ರದಲ್ಲೇ ಮಾಯವಾಗುತ್ತದೆ.
ಇದನ್ನೂ ಓದಿ; Deepika padukone; ತಾಯಿಯಾಗ್ತಿದ್ದಾರಂತೆ ನಟಿ ದೀಪಿಕಾ ಪಡುಕೋಣೆ!
ಕೆಂಪು ತೊಗರಿಬೇಳೆ, ಅಕ್ಕಿಹಿಟ್ಟು, ಹಸಿ ಹಾಲು;
ಕೆಂಪು ತೊಗರಿಬೇಳೆ, ಅಕ್ಕಿಹಿಟ್ಟು, ಹಸಿ ಹಾಲು; ಒಂದು ಕಪ್ ನಲ್ಲಿ ಕೆಂಪು ತೊಗರಿ ಬೇಳೆ ಪುಡಿ ಮತ್ತು ಅಕ್ಕಿಹಿಟ್ಟನ್ನು ಸಮನಾಗಿ ತೆಗೆದುಕೊಳ್ಳಬೇಕು. ಇದಕ್ಕೆ ಹಸಿ ಹಾಲನ್ನು ಬೆರೆಸಿ ಫೇಸ್ ಪ್ಯಾಕ್ ಮಾಡಿಕೊಳ್ಳಿ. ಈಗ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಸುಮಾರು 15 ನಿಮಿಷಗಳ ಕಾಲ ಒಣಗಲು ಬಿಡಬೇಕು. ಅದರ ನಂತರ ಅದನ್ನು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಈ ರೀತಿ ಆಗಾಗ ಮಾಡುತ್ತಿದ್ದರೆ ಚರ್ಮದ ಕೋಶಗಳಲ್ಲಿ ಶೇಖರಣೆಯಾಗಿರುವ ಸತ್ತ ಜೀವಕೋಶಗಳು ನಿವಾರಣೆಯಾಗಿ ತ್ವಚೆ ಸ್ವಚ್ಛವಾಗುತ್ತದೆ.
ಇದನ್ನೂ ಓದಿ; Vidyabalan; ನಟಿ ವಿದ್ಯಾಬಾಲನ್ಗೆ ಕಿರಿಕಿರಿ ಮಾಡಿದ ವ್ಯಕ್ತಿ; ವಿಡಿಯೋ ಇದೆ!
ಕೆಂಪು ತೊಗರಿ ಬೇಳೆ, ಹಾಲು, ಬಾದಾಮಿ ಎಣ್ಣೆ;
ಕೆಂಪು ತೊಗರಿ ಬೇಳೆ, ಹಾಲು, ಬಾದಾಮಿ ಎಣ್ಣೆ; ಅರ್ಧ ಕಪ್ ಕೆಂಪು ತೊಗರಿ ಬೇಳೆಯನ್ನು ರಾತ್ರಿಯಿಡೀ ನೆನೆಸಿ ಮತ್ತು ಬೆಳಿಗ್ಗೆ ನಿಧಾನವಾಗಿ ಮಿಶ್ರಣ ಮಾಡಬೇಕು. ಈಗ ಅದಕ್ಕೆ ಒಂದು ಚಮಚ ಹಸಿ ಹಾಲು ಮತ್ತು ಒಂದು ಚಮಚ ಬಾದಾಮಿ ಎಣ್ಣೆಯನ್ನು ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಬೇಕು. ಅರ್ಧ ಗಂಟೆಯ ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆದುಕೊಳ್ಳಬೇಕು. ಹೀಗೆ ಮಾಡುವುದರಿಂದ ಮುಖ ಕಾಂತಿಯುತವಾಗುವುದಲ್ಲದೆ, ಕಲೆಗಳು ಮತ್ತು ಮೊಡವೆಗಳನ್ನು ಕಡಿಮೆ ಮಾಡುತ್ತದೆ.
ಕೆಂಪು ತೊಗರಿ ಬೇಳೆ, ಹಾಲು, ಅರಿಶಿನ, ತೆಂಗಿನೆಣ್ಣೆ;
ಕೆಂಪು ತೊಗರಿ ಬೇಳೆ, ಹಾಲು, ಅರಿಶಿನ, ತೆಂಗಿನೆಣ್ಣೆ; ಒಂದು ಕಪ್ನಲ್ಲಿ ಒಂದು ಚಮಚ ಕೆಂಪು ತೊಗರಿಬೇಳೆ ಬೇಳೆ ಪುಡಿ, ಎರಡು ಚಮಚ ಹಾಲು, ಚಿಟಿಕೆ ಅರಿಶಿನ, ಮೂರು ಹನಿ ತೆಂಗಿನೆಣ್ಣೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ಈಗ ಈ ಮಿಶ್ರಣವನ್ನು ನಿಮ್ಮ ಬೆರಳುಗಳಿಂದ ಮುಖಕ್ಕೆ ಹಚ್ಚಿ ಮತ್ತು ಮೃದುವಾಗಿ ಮಸಾಜ್ ಮಾಡಿ. ಹತ್ತು ನಿಮಿಷಗಳ ನಂತರ ಮುಖವನ್ನು ಸ್ವಚ್ಛಗೊಳಿಸಬೇಕು. ಪ್ರತಿದಿನ ಹೀಗೆ ಮಾಡಿದರೆ ಮುಖ ಫ್ರೆಶ್ ಆಗಿರುತ್ತದೆ.
ಇದನ್ನೂ ಓದಿ; Pushpa-2; ಆ ಒಂದು ಸೀನ್ಗಾಗಿ 50 ಕೋಟಿ ಖರ್ಚು ಮಾಡಿದರಾ..?
ಕೆಂಪು ತೊಗರಿ ಬೇಳೆ, ಹಸಿ ಹಾಲು;
ಕೆಂಪು ತೊಗರಿ ಬೇಳೆ, ಹಸಿ ಹಾಲು; ಅರ್ಧ ಕಪ್ ಕೆಂಪು ತೊಗರಿಬೇಳೆಯನ್ನು ರಾತ್ರಿ ನೆನೆಸಿ ಬೆಳಗ್ಗೆ ರುಬ್ಬಿಕೊಳ್ಳಬೇಕು. ಇದಕ್ಕೆ ಕಾಲು ಕಪ್ ಹಸಿ ಹಾಲು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ಈಗ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಸುಮಾರು 15-20 ನಿಮಿಷಗಳ ಕಾಲ ಒಣಗಲು ಬಿಡಬೇಕು. ಅದರ ನಂತರ ಮುಖವನ್ನು ಸ್ವಚ್ಛವಾಗಿ ತೊಳೆಯಬೇಕು. ಈ ಫೇಸ್ ಪ್ಯಾಕ್ ಟ್ಯಾನ್ ಅನ್ನು ಹೋಗಲಾಡಿಸುತ್ತದೆ, ರಂಧ್ರಗಳನ್ನು ತೆಗೆಯುತ್ತದೆ ಮತ್ತು ಮುಖವನ್ನು ಹೊಳೆಯುವಂತೆ ಮಾಡುತ್ತದೆ. ಇದು ಎಣ್ಣೆಯನ್ನು ತೆಗೆದುಹಾಕುತ್ತದೆ ಮತ್ತು ಮೊಡವೆಗಳು ಬರದಂತೆ ತಡೆಯುತ್ತದೆ.
ಇದನ್ನೂ ಓದಿ; ರಶ್ಮಿಕಾಗೆ ಗಂಡ ಎಂದರೆ ವಿಜಯ್ ದೇವರಕೊಂಡ ರೀತಿ ಇರಬೇಕಂತೆ!