Cinema

Pushpa-2; ಆ ಒಂದು ಸೀನ್‌ಗಾಗಿ 50 ಕೋಟಿ ಖರ್ಚು ಮಾಡಿದರಾ..?

ಪುಷ್ಪ – 2ಗಾಗಿ ಅಲ್ಲು ಅರ್ಜುನ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಪುಷ್ಪ ಮೊದಲ ಆವೃತ್ತಿ ಅತ್ಯಂತ ಯಶಸ್ಸು ಕಂಡಿತ್ತು. ಹೀಗಾಗಿ ಪುಷ್ಪ-2 ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಕೋಟ್ಯಂತರ ಅಭಿಮಾನಿಗಳು ಪುಷ್ಪ-2ಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಸುಕುಮಾರ್ ನಿರ್ದೇಶನದ ಪುಷ್ಪ ಚಿತ್ರದ ಮೂಲಕ ಅಲ್ಲು ಅರ್ಜುನ್ ಕೇವಲ ಐಕಾನ್ ಸ್ಟಾರ್ ಆಗದೆ ಪ್ಯಾನ್ ಇಂಡಿಯಾ ಸ್ಟಾರ್ ಆದರು. ಆಗಸ್ಟ್ 15 ರಂದು ಪುಷ್ಪ ರೂಲ್ ಚಿತ್ರ ಥಿಯೇಟರ್‌ಗೆ ಬರಲಿದೆ. ಇದಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ; ರಶ್ಮಿಕಾಗೆ ಗಂಡ ಎಂದರೆ ವಿಜಯ್‌ ದೇವರಕೊಂಡ ರೀತಿ ಇರಬೇಕಂತೆ!

ಪ್ರಪಂಚದಾದ್ಯಂತ ಹೆಸರು ಗಳಿಸಿದ್ದ ಪುಷ್ಪ;

ಪ್ರಪಂಚದಾದ್ಯಂತ ಹೆಸರು ಗಳಿಸಿದ್ದ ಪುಷ್ಪ; ಪುಷ್ಪ ಮೊದಲ ಭಾಗ ಭಾರತ ಅಲ್ಲದೆ ಪ್ರಪಂಚದಾದ್ಯಂತ ಹೆಸರು ಮಾಡಿತ್ತು.. ವಿವಿಧ ದೇಶಗಳಲ್ಲಿ ಜನ ಇಷ್ಟಪಟ್ಟು ಈ ಸಿನಿಮಾ ನೋಡಿದ್ದರು. ಇದೀಗ ಪುಷ್ಪ ಸಿನಿಮಾದ ಎರಡನೇ ಭಾಗದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇತ್ತೀಚೆಗೆ ಅಲ್ಲು ಅರ್ಜುನ್ ಬರ್ಲಿನ್ ಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದರು. ಅಲ್ಲಿ ಅಲ್ಲು ಅರ್ಜುನ್‌ ಮತ್ತೊಂದು ಅಪ್‌ಡೇಟ್‌ ನೀಡಿದ್ದಾರೆ. ಪುಷ್ಪಾ ಮೂರನೇ ಭಾಗ ಕೂಡಾ ಬರಲಿದೆ ಎಂದು ಅವರು ಘೋಷಣೆ ಮಾಡಿದ್ದಾರೆ. ಅಂದುಕೊಂಡ ಸಮಯಕ್ಕೆ ಎರಡನೇ ಭಾಗದ ಚಿತ್ರೀಕರಣವನ್ನು ಪೂರ್ಣಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಈಗ ಈ ಚಿತ್ರಕ್ಕೆ ಸಂಬಂಧಿಸಿದ ಒಂದು ಸೀಕ್ವೆನ್ಸ್‌ಗಾಗಿ ಭಾರೀ ಖರ್ಚು ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ; ಬೆಂಗಳೂರಲ್ಲಿ ಕಾರ್ತೀಕ್‌ ಆರ್ಯನ್;‌ ಮಸಾಲೆದೋಸೆ ಸವಿದ ಬಾಲಿವುಡ್‌ ನಟ

ಆಕ್ಸನ್‌ ಸೀಕ್ವೆನ್ಸ್‌ಗೆ 50 ಕೋಟಿ ಖರ್ಚು;

ಆಕ್ಸನ್‌ ಸೀಕ್ವೆನ್ಸ್‌ಗೆ 50 ಕೋಟಿ ಖರ್ಚು; ಪುಷ್ಪ 2 ಚಿತ್ರದಲ್ಲಿನ ಆಕ್ಷನ್ ಸೀಕ್ವೆನ್ಸ್ ಚಿತ್ರದ ಹೈಲೈಟ್ ಆಗಲಿದೆ.. ಇದಕ್ಕಾಗಿ ನಿರ್ಮಾಪಕರು ಹೆಚ್ಚು ಖರ್ಚು ಮಾಡುತ್ತಿದ್ದಾರೆ.  ಇದಕ್ಕಾಗಿ 35 ದಿನಗಳ ಶೂಟಿಂಗ್ ಮಾಡುತ್ತಿದ್ದಾರೆಯಂತೆ. ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ: ದಿ ರೂಲ್’ ಚಿತ್ರಕ್ಕೆ ಸುಕುಮಾರ್ ವಿಶೇಷ ಗಮನ ಹರಿಸಿದ್ದಾರೆ. ಪ್ರತಿಯೊಂದು ದೃಶ್ಯ ಮತ್ತು ಕಥೆಯನ್ನು ಆಸಕ್ತಿದಾಯಕವಾಗಿ ಯೋಜಿಸಲಾಗಿದೆ. ಇದೇ ವೇಳೆ ‘ಗಂಗಮ್ಮ ಮಾತಾಯಿ ಜಾತ್ರೆ’ಯ ಒಂದು ದೃಶ್ಯ ‘ಪುಷ್ಪ 2’ನಲ್ಲಿ ಇರಲಿದ್ದು, ಇದು ಮಧ್ಯಂತರಕ್ಕೆ ಮೊದಲು ಬರುತ್ತದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ; Karimani maaleeka; ಇವರೇ ನೋಡಿ ʻಕರಿಮಣಿ ಮಾಲೀಕʼ ಹಾಡಿನ ಗಾಯಕಿ!

30 ನಿಮಿಷದ ಸೀಕ್ವೆನ್ಸ್‌ಗೆ 35 ದಿನ ಶೂಟಿಂಗ್‌;

30 ನಿಮಿಷದ ಸೀಕ್ವೆನ್ಸ್‌ಗೆ 35 ದಿನ ಶೂಟಿಂಗ್‌; ಈ ದೃಶ್ಯ ಚಿತ್ರದ ಪ್ರಮುಖ ಭಾಗವಾಗಿದೆ. ಇದು ಸುಮಾರು 30 ನಿಮಿಷಗಳವರೆಗೆ ಇರುತ್ತದೆ ಎಂದು ತೋರುತ್ತದೆ. ಈ ದೃಶ್ಯವನ್ನು ಚಿತ್ರೀಕರಿಸಲು 35 ದಿನಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿತು. ಇದು ಸುಮಾರು 30 ನಿಮಿಷಗಳವರೆಗೆ ಇರುತ್ತದೆ. ಅದೂ ಅಲ್ಲದೆ ಈ ಸೀಕ್ವೆನ್ಸ್‌ಗೆ ಬರೋಬ್ಬರಿ 50 ಕೋಟಿ ರೂಪಾಯಿಗೂ ಹೆಚ್ಚು ಖರ್ಚು ಮಾಡಲಾಗಿದೆ ಎನ್ನಲಾಗಿದೆ. ‘ಪುಷ್ಪ 2’ ಚಿತ್ರದಲ್ಲಿ ಈ ಸೀಕ್ವೆನ್ಸ್‌ ಬಹುಮುಖ್ಯವಾಗಿರಲಿದೆ. ಆದರೆ ಈ ಚಿತ್ರದ ಬಜೆಟ್ 500 ಕೋಟಿ ಎನ್ನಲಾಗಿದೆ. 30 ನಿಮಿಷಗಳ ಈ ಸೀಕ್ವೆನ್ಸ್‌ನಲ್ಲಿ ಹಾಡು, ಹೊಡೆದಾಟದ ದೃಶ್ಯ ಹಾಗೂ ಭಾವನಾತ್ಮಕ ದೃಶ್ಯ ಇರಲಿದೆ ಎನ್ನಲಾಗಿದೆ. ಈ ಸರಣಿಯ ನಂತರ ಕಥೆಗೆ ತಿರುವು ಸಿಗಲಿದೆ ಎನ್ನಲಾಗಿದೆ.

ಇದನ್ನೂ ಓದಿ; Actress Trisha; 25 ಲಕ್ಷ ರೂಪಾಯಿ ಪಡೆದು ರೆಸಾರ್ಟ್‌ಗೆ ಬಂದಿದ್ದರಾ ತ್ರಿಷಾ..?

Share Post