Politics

ಜೆಡಿಎಸ್‌ನ ಇಬ್ಬರು ಶಾಸಕರು ನಾಟ್‌ ರೀಚಬಲ್‌; ನಾಯಕರಿಗೆ ಟೆನ್ಷನ್‌

ಬೆಂಗಳೂರು; ನಾಳೆ ರಾಜ್ಯ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಐದು ಜನ ಅಖಾಡದಲ್ಲಿದ್ದಾರೆ. ಪಕ್ಷೇತರರ ಮತ ಹಾಗು ಕಾಂಗ್ರೆಸ್‌ನಿಂದ ಅಡ್ಡ ಮತದಾನವಾಗಿ ಲಾಭವಾಗಬಹುದು ಎಂಬ ಲೆಕ್ಕಾಚಾರದಲ್ಲಿ ಜೆಡಿಎಸ್‌ ಕುಪೇಂದ್ರ ರೆಡ್ಡಿಯವರನ್ನು ಕಣಕ್ಕಿಳಿಸಿದೆ. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವುದರಿಂದ ಬಿಜೆಪಿ ಹಾಗೂ ಜೆಡಿಎಸ್‌ ಎರಡೂ ಪಕ್ಷಗಳಿಗೂ ಕುಪೇಂದ್ರ ರೆಡ್ಡಿ ಗೆಲ್ಲಿಸೋದು ಪ್ರತಿಷ್ಠ ಎಂಬಂತಾಗಿದೆ. ಹೀಗಿರುವಾಗಲೇ ಜೆಡಿಎಸ್‌ಗೆ ಭೀತಿ ಶುರುವಾಗಿದೆ. ಇಬ್ಬರು ಜೆಡಿಎಸ್‌ ಶಾಸಕರು ನಾಟ್‌ ರೀಚಬಲ್‌ ಆಗಿದ್ದು, ಜೆಡಿಎಸ್‌ ನಾಯಕರು ತಲೆ ಕೆಡಿಸಿಕೊಂಡಿದ್ದಾರೆ.

ಹೋಟೆಲ್‌ಗೆ ಬುಲಾವ್‌ ನೀಡಿದ ವರಿಷ್ಠರು;

ಹೋಟೆಲ್‌ಗೆ ಬುಲಾವ್‌ ನೀಡಿದ ವರಿಷ್ಠರು; ನಾಳೆ ಚುನಾವಣೆ ಹಿನ್ನೆಲೆಯಿ ಜೆಡಿಎಸ್‌ ನಾಯಕರು ತಮ್ಮ ಎಲ್ಲಾ ಶಾಸಕರನ್ನೂ ಹೋಟೆಲ್‌ಗೆ ಬರುವಂತೆ ಸೂಚನೆ ಕೊಟ್ಟಿದ್ದಾರೆ. ರಾತ್ರಿ ಹೋಟೆಲ್‌ನಲ್ಲೇ ಉಳಿದುಕೊಳ್ಳಬೇಕು. ಬೆಳಗ್ಗೆ ನೇರವಾಗಿ ಮತದಾನಕ್ಕೆ ಹೋಗಬೇಕೆಂದು ಹೇಳಲಾಗಿದೆ. ಆದ್ರೆ, ಕೆಲ ಶಾಸಕರು ಆಗಮಿಸಿದ್ದು, ಇನ್ನೂ ಕೆಲ ಶಾಸಕರು ಬಂದಿಲ್ಲ. ಅದರಲ್ಲೂ ಇಬ್ಬರು ಜೆಡಿಎಸ್‌ ಶಾಸಕರು ನಾಟ್‌ ರೀಚಬಲ್‌ ಆಗಿದ್ದು, ಜೆಡಿಎಸ್‌ ನಾಯಕರಿಗೆ ತಲೆನೋವಿಗೆ ಕಾರಣರಾಗಿದ್ದಾರೆ.

ಜೆಡಿಎಸ್‌ ಶಾಸಕರಿಗೆ ವಿಪ್‌ ಜಾರಿ;

ಜೆಡಿಎಸ್‌ ಶಾಸಕರಿಗೆ ವಿಪ್‌ ಜಾರಿ;  ಅಡ್ಡ ಮತದಾನವಾಗುವ ಭೀತಿಯಿಂದ ಜೆಡಿಎಸ್‌ ಶಾಸಕರಿಗೆ ಪಕ್ಷದ ಮುಖ್ಯ ಸಚೇತಕ ಸುರೇಶ್‌ ಬಾಬು ಅವರು ವಿಪ್‌ ಜಾರಿ ಮಾಡಿದ್ದಾರೆ. ಕಡ್ಡಾಯವಾಗಿ ಜೆಡಿಎಸ್‌ ಶಾಸಕರು ಕುಪೇಂದ್ರ ರೆಡ್ಡಿಯವರಿಗೇ ಮತ ಹಾಕಬೇಕೆಂದು ಸೂಚನೆ ಕೊಡಲಾಗಿದೆ. ಹೀಗಿದ್ದರೂ, ಕೆಲ ಶಾಸಕರು ಅಡ್ಡ ಮತದಾನ ಮಾಡುವ ಆತಂಕ ಜೆಡಿಎಸ್‌ ನಾಯಕರಲ್ಲಿದೆ. ಹೀಗಾಗಿ ಎಲ್ಲರನ್ನೂ ಹೋಟೆಲ್‌ಗೆ ಕರೆತರವಾಗುತ್ತಿವೆ. ಆದ್ರೆ ಇಬ್ಬರ ಶಾಸಕರ ಬಗ್ಗೆ ಯಾವುದೇ  ಮಾಹಿತಿ ಸಿಗುತ್ತಿಲ್ಲ.

ಇಬ್ಬರು ಶಾಸಕರು ನಾಟ್‌ ರೀಚಬಲ್‌;

ಇಬ್ಬರು ಶಾಸಕರು ನಾಟ್‌ ರೀಚಬಲ್‌; ದೇವದುರ್ಗ ಶಾಸಕಿ ಕರಿಯಮ್ಮ ಹಾಗೂ ಗುರುಮಟ್ಕಲ್‌ ಶಾಸಕ ಶರಣಗೌಡ ಕಂದಕೂರು ಅವರು ನಾಟ್‌ ರೀಚಬಲ್‌ ಆಗಿದ್ದಾರೆ. ಶಾಸಕರು ಕರಿಯಮ್ಮ ಅವರ ಫೋನ್‌ ಸ್ವಿಚ್‌ ಆಫ್‌ ಆಗಿದೆ. ಇತ್ತ ಶಾಸಕ ಕಂದಕೂರು ಅವರು ನನ್ನನ್ನು ಯಾರೂ ಹೋಟೆಲ್‌ಗೆ ಕರೆದಿಲ್ಲ. ಹೀಗಾಗಿ ನಾನು ನಾಳೆ ನೇರವಾಗಿ ವಿಧಾನಸೌಧಕ್ಕೇ ಬರುತ್ತೇನೆ ಎಂದು ಹೇಳುತ್ತಿದ್ದಾರೆ. ಹೀಗಾಗಿ ಈ ಇಬ್ಬರ ಬಗ್ಗೆ ಜೆಡಿಎಸ್‌ ನಾಯಕರಿಗೆ  ಆತಂಕ ಶುರುವಾಗಿದೆ.

ಇನ್ನೂ 8 ಮತಗಳು ಬೇಕು;

ಇನ್ನೂ 8 ಮತಗಳು ಬೇಕು; ಜೆಡಿಎಸ್‌ನ 19 ಮತಗಳು ಹಾಗೂ ಬಿಜೆಪಿಯ ಹೆಚ್ಚುವರಿ ಮತಗಳು ಸೇರಿದರೂ ಜೆಡಿಎಸ್‌ ಅಭ್ಯರ್ಥಿ ಗೆಲ್ಲಲು ಇನ್ನೂ 8 ಮತಗಳ ಅವಶ್ಯಕತೆ ಇದೆ. ಆದರೂ ಕೂಡಾ ಜೆಡಿಎಸ್‌ ನಾಯಕರು ಕುಪೇಂದ್ರ ರೆಡ್ಡಿಯನ್ನು ಗೆಲ್ಲಿಸಲು ಹರಸಾಹಸ ಮಾಡುತ್ತಿದ್ದಾರೆ. ಹೇಗಾದರೂ ಮಾಡಿ ಕಾಂಗ್ರೆಸ್‌ ಒಬ್ಬರನ್ನು ಸೋಲಿಸಲು ಸರ್ಕಸ್‌ ನಡೆಸಿದ್ದಾರೆ. ಪಕ್ಷೇತರ ಶಾಸಕರ ಮತ ಹಾಗೂ ಕಾಂಗ್ರೆಸ್‌ ಶಾಸಕರಿಂದ ಅಡ್ಡ ಮತದಾನ ಮಾಡಿಸುವ ಪ್ರಯತ್ನವಾಗುತ್ತಿದೆ ಎನ್ನಲಾಗ್ತಿದೆ. ಇನ್ನೊಂದೆಡೆ ಕಾಂಗ್ರೆಸ್‌ ಕೂಡಾ ಅಡ್ಡ  ಮತದಾನ ಮಾಡಿಸಲು ಮುಂದಾಗಿದ್ದು, ಎರಡೂ ಕಡೆ ಆತಂಕವಂತೂ ಇದ್ದೇ ಇದೆ.

 

Share Post